ದೈವ ಭಕ್ತರಾದ ಅಶೋಕ್ ಜೋಶಿಯವರು ವೃತ್ತಿಯಿಂದ ಇಂಜಿನಿಯರ್ ಹಾಗು ಪ್ರವೃತ್ತಿಯಿಂದ ಕಲಾವಿದರು. ಹನುಮಂತ ದೇವರ ಬಗ್ಗೆ ವಿಶೇಷ ಭಕ್ತಿ ಹೊಂದಿದ್ದು ಕಳೆದ ಹಲವು ವರ್ಷಗಳಿಂದ ವಿವಿಧ ಹನುಮಂತದ ದೇವರ ದೇವಸ್ಥಾನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದನ್ನು ಇತರ ಭಕ್ತರೊಂದಿಗೆ ಹಂಚಿಕೊಳ್ಳಲು ಈ ಚಾನೆಲ್ ಆರಂಭಿಸಿದ್ದಾರೆ.
ಪರಿಚಯ
22 ವರ್ಷ ಪಿ ಡಬ್ಲ್ಯು ಡಿಯಲ್ಲಿ ಸೇವೆ ಸಲ್ಲಿಸಿ, ಕಲಾ ಜೀವನ ಹಾಗೂ ತಮ್ಮ ಇತರ ಆಸಕ್ತಿಗಳಾದ ಶಿಕ್ಷಣ, ವ್ಯಂಗ್ಯಚಿತ್ರ, ಪತ್ರಿಕೋದ್ಯಮದಲ್ಲಿ ತೊಡಗಿಕೊಳ್ಳಲು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇಲ್ಲಿಯವರೆಗೂ 50ಕ್ಕು ಹೆಚ್ಚು ನಾಟಕಳಲ್ಲಿ ಅಭಿನಯಿಸಿದ್ದಾರೆ. ಮಕ್ಕಳ ಕಥೆ ಹೇಳುವುದರಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಮಕ್ಕಳ ಶಿಬಿರಗಳಲ್ಲಿ ಕಥೆ ಹೇಳಿದ್ದಾರೆ. 2000ಕ್ಕು ಹೆಚ್ಚು ವ್ಯಂಗ್ಯಚಿತ್ರಗಳು ಮತ್ತು ಹಲವಾರು ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಶಿಕ್ಷಣ ನೀಡುವುದಷ್ಟೇ ಅಲ್ಲದೇ ಶಿಕ್ಷಣ ಪಡೆಯುವದರಲ್ಲಿಯು ಆಸಕ್ತಿ ಹೊಂದಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪಡೆದಿದ್ದು, ಸಂಗೀತದಲ್ಲಿ ಪದವಿ, ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ, ಮಲ್ಟಿ ಮೀಡಿಯಾದಲ್ಲಿ ಪ್ರಫಿಶಿಯನ್ಸಿ ಕೋರ್ಸ್ ಗಳನ್ನು ಪೂರೈಸಿದ್ದಾರೆ. ಪ್ರಸಕ್ತ ಮನೋ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.