Channel Avatar

Metro Express @UCzYpQH2DmT3U-LDM7YIA6UQ@youtube.com

4.6K subscribers - no pronouns :c

Am Independent Youtuber Subscribe for Celebrity Interviews,


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Metro Express
Posted 2 months ago

Book your date 7760005462🥰

0 - 0

Metro Express
Posted 7 months ago

*ಲೈನ್ ಮ್ಯಾನ್ ಅಂಗಳದಿಂದ ಬಂತು ಮೊದಲ ಹಾಡು... ಮಾ.15ಕ್ಕೆ ಸಿನಿಮಾ ರಿಲೀಸ್*

ಲೈನ್ ಮ್ಯಾನ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಮಾರ್ಚ್ 15ಕ್ಕೆ ಚಿತ್ರ ಥಿಯೇಟರ್ ಗೆ ಲಗ್ಗೆ ಇಡುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಮೋಷನ್ ಪೋಸ್ಟರ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸಿರುವ ಲೈನ್ ಮ್ಯಾನ್ ಸಿನಿಮಾ ಅಂಗಳದಿಂದ ಮೊದಲ ಹಾಡು ಅನಾವರಣಗೊಂಡಿದೆ.


ಧರೆಗೆ ದೊಡ್ಡವರು ಎಂಬ ಜಾನಪದ ಹಾಡು ಬಿಡುಗಡೆಯಾಗಿದ್ದು, ನಿಂಗಶೆಟ್ಟಿ, ನಿಂಗರಾಜು ಕೆ ಕಲ್ಲಪ್ಪ ಹಾಗೂ ಶಂಕರ್ ಧ್ವನಿಯಾಗಿರುವ ಅರ್ಥಪೂರ್ಣ ಗೀತೆಗೆ ಕದ್ರಿ ಮಣಿಕಾಂತ್ ಟ್ಯೂನ್ ಹಾಕಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿಯೂ ಹಾಡು ಬಿಡುಗಡೆಯಾಗಿದೆ.


ವಿದ್ಯುತ್ ಇಲಾಖೆಗಳಲ್ಲಿ ಕೆಲಸ ಮಾಡುವ ಲೈನ್ ಮ್ಯಾನ್‌ಗಳದ್ದು ಯಾವಾಗಲೂ ಕಷ್ಟ ಕೆಲಸ. ಅದರಲ್ಲೂ ಮಳೆಗಾಲದ ಸಮಯದಲ್ಲಂತೂ ಜೀವವನ್ನು ಪಣಕ್ಕಿಟ್ಟು ಅವರು ಕೆಲಸ ಮಾಡುತ್ತಾರೆ. ಅಂತಹ ಕಥೆಯೇ ಲೈನ್ ಮ್ಯಾನ್ ಸಿನಿಮಾ. ರಘು ಶಾಸ್ತ್ರಿ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದಿದೆ.



ಯುವ ನಟ ತ್ರಿಗುಣ್ ಅವರು ಲೈನ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.



ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರ ಇದಾಗಿದೆ. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ, ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು,
ಲೈನ್ ಮ್ಯಾನ್ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.


ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಲೈನ್ ಮ್ಯಾನ್ ಸಿನಿಮಾ ಪ್ರದರ್ಶನವಾಗುತ್ತಿರುವುದು ವಿಶೇಷ. ನಾಳೆ‌ ಮತ್ತು ಚಿತ್ರೋತ್ಸವದ ಕೊನೆಯ ದಿನವಾದ ಮಾರ್ಚ್ 7ರಂದು ಲೈನ್ ಮ್ಯಾನ್ ಸ್ಪೆಷಲ್ ಸ್ಕ್ರೀನ್ ಇರಲಿದೆ.

4 - 0

Metro Express
Posted 8 months ago

ಪ್ರೀತಿಯ ಹುಚ್ಚ ದುರಂತ ಪ್ರೇಮಕಥೆ

ಹಾಸನದಲ್ಲಿ ನಡೆದ ನೈಜ ಫಟನೆ

ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಟಿ. ಗೌರಿಕುಮಾರ್ ಅವರು ನಿರ್ಮಿಸುತ್ತಿರುವ ಚಿತ್ರ ಪ್ರೀತಿಯ ಹುಚ್ಚ. ಮ್ಯೂಸಿಕಲ್ ಟ್ರ್ಯಾಜಿಡಿ ಲವ್ ಸ್ಟೋರಿ ಇದಾಗಿದ್ದು, ಕನ್ನಡ ಹಾಗೂ ತಮಿಳು ಸೇರಿ 2 ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ತಮಿಳಲ್ಲಿ ಕಾದಲ್ ಪೈತ್ಯಂ ಶೀರ್ಷಿಕೆಯಡಿ ಬಿಡುಗಡೆಯಾಗುತ್ತಿದೆ.
ಈ ಚಿತ್ರಕ್ಕೆ ವಿ.ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಈ ಹಿಂದೆ ಗಾಯತ್ರಿ ಎಂಬ ಹಾರರ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಕುಮಾರ್ ಅವರ ನಿರ್ದೇಶನದ ಎರಡನೇ ಚಿತ್ರವಿದು. 1998-99ರ ಸಮಯದಲ್ಲಿ ಹಾಸನದಲ್ಲಿ ನಡೆದ ನೈಜ ಘಟನೆಯೊಂದು ಈ ಚಿತ್ರಕ್ಕೆ ಪ್ರೇರಣೆ. ಅಮಾಯಕ ಯುವತಿಯೊಬ್ಬಳ ದಾರುಣ ಕಥೆಯಿದಾಗಿದ್ದು, ಮದುವೆಯಾದ ಮೊದಲ ರಾತ್ರಿಯೇ ದುಷ್ಟರ ಜಾಲಕ್ಕೆ ಸಿಕ್ಕು ಮುಂಬೈನ ರೆಡ್‌ಲೈಟ್ ಏರಿಯಾಕ್ಕೆ ಮಾರಾಟವಾಗುವ ನಾಯಕಿಯ ಜೀವನ ಮುಂದೆ ಯಾವೆಲ್ಲ ತಿರುವು ಪಡೆದುಕೊಂಡಿತು, ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕಳೆದುಕೊಂಡ ನಾಯಕ ಯಾವ ಸ್ಥಿತಿ ತಲುಪಿದ ಎಂಬುದನ್ನು ನಿರ್ದೇಶಕ ಕುಮಾರ್ ಅವರು ಪ್ರೀತಿಯ ಹುಚ್ಚ ಚಿತ್ರದ ಮೂಲಕ ಹೇಳಹೊರಟಿದ್ದಾರೆ.
ಈ ಚಿತ್ರಕ್ಕೆ ಬೆಂಗಳೂರು. ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ ಹಾಗೂ ಮುಂಬೈನ ಕಾಮಾಟಿಪುರದಲ್ಲಿ ೬೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಬರುವ ಶಿವರಾತ್ರಿ ವೇಳೆಗೆ ಚಿತ್ರದ ಟೀಸರ್ ಹಾಗೂ ಲಿರಿಕಲ್ ಸಾಂಗ್ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ. ಈ ಚಿತ್ರದಲ್ಲಿ ಸುಂಟಿಸ್ಟಾರ್ ವಿಜಯ್ ನಾಯಕನಾಗಿ ನಟಿಸಿದ್ದು, ಮುಂಬೈ ಮೂಲದ ಕುಂಕುಮ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಶಿವಯೋಗಿ ಗುತ್ತೆಮ್ಮನವರ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ೪ ಹಾಡುಗಳಿದ್ದು, ಜೆ.ಎನ್. ರಂಗರಾಜನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುನಿಲ್ ಕೆ.ಆರ್‌.ಎಸ್. ಅವರ ಛಾಯಾಗ್ರಹಣ, ಪ್ರವೀಣ್ ವಿಷ್ಣು ಅವರ ಸಂಕಲನ ಈ ಚಿತ್ರಕ್ಕಿದೆ.
ಉಳಿದ ತಾರಾಗಣದಲ್ಲಿ ಲೆಕ್ಕಾಚಾರ ಚಂದ್ರು, ದುಬೈ ರಫೀಕ್, ಉಮೇಶ್ ಪುಂಗ, ಜೋಗಿ ನಾಗರಾಜ್, ಪೂರ್ಣಿಮಾ, ವಿ.ಭಾಸ್ಕರರಾಜ್, ನಟ, ಕಿಲ್ಲರ್ ವೆಂಕಟೇಶ್, ಭಜರಂಗಿ ರಾಜು, ಮಹದೇವಸ್ವಾಮಿ. ಗೀತಾ, ಸುನಿತಾ, ಪ್ರಮೋದ್, ಮಹದೇವ, ಆನಂದ್ ಮುಂತಾದವರಿದ್ದಾರೆ. ಪ್ರೀತಿಯ ಹುಚ್ಚ ಚಿತ್ರವನ್ನು ಯುಗಾದಿ ನಂತರ ಏಪ್ರಿಲ್ ವೇಳೆಗೆ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

2 - 0

Metro Express
Posted 8 months ago

"ನಮೋಭಾರತ" ಸೈನಿಕನೊಬ್ಬನ ಪ್ರೀತಿ ಪ್ರೇಮದ ಪಯಣ

ಗಡಿ ಭಾಗದಲ್ಲಿ ನಮ್ಮ ದೇಶವನ್ನು ಕಾಯುವ ಸೈನಿಕರ ಜೀವನ, ಸೈನಿಕನೊಬ್ಬನ ಪ್ರೀತಿ, ಪ್ರೇಮದ ಕಥಾಹಂದರವನ್ನು ಹೇಳುವ ಚಿತ್ರ ನಮೋ ಭಾರತ. ಈ ಹಿಂದೆ ಸ್ವಚ್ಚ ಭಾರತದ ಬಗ್ಗೆ ಗಾಂಧೀಜಿ ಕಂಡಿದ್ದ ಕನಸನ್ನಿಟ್ಟುಕೊಂಡು ಗಾಂಧಿ ಕನಸು ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ರಮೇಶ್ ಎಸ್. ಪರವಿನಾಯ್ಕರ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಚಿತ್ರದ ನಾಯಕ (ಸೈನಿಕ) ಪಾತ್ರವನ್ನೂ ಸಹ ನಿರ್ವಹಿಸಿದ್ದಾರೆ.

ರೈತನೊಬ್ಬನ ಮಗ ಸೈನ್ಯ ಸೇರಿಕೊಂಡಾಗ ದೇಶದ ಗಡಿ ಭಾಗದಲ್ಲಿ ಆತ ಅನುಭವಿಸುವ ಒಂದಷ್ಟು ಸಮಸ್ಯೆಗಳು, ಅಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣಹೋಮ, ಆತನಿಗಾದ ಭಯೋತ್ಪಾದನೆಯ ಅನುಭವಗಳನ್ನು ಈ ಚಿತ್ರದ ಮೂಲಕ ಹೇಳಲಾಗಿದೆ, ಈ ಮಧ್ಯೆ ಆ ಸೈನಿಕನಿಗೆ ಕಾಡುವ ತನ್ನ ತಂದೆ, ತಾಯಿಯ ನೆನಪುಗಳು, ಜೊತೆಗೆ ಊರಲ್ಲಿ ತಾನು ಪ್ರೀತಿಸಿದ ಹುಡುಗಿಯ ನೆನಪೂ ಸಹ ಕಾಡುತ್ತದೆ. ತಾನು ಕೆಲಸ ಮಾಡುತ್ತಿರುವ ಕಾಶ್ಮೀರ ಗಡಿಭಾಗದ ಯುವತಿಯೊಬ್ಬಳನ್ನೂ ನಾಯಕ ಲವ್ ಮಾಡುತ್ತಾನೆ.

ಕೊನೆಗೆ ಆತನಿಗೆ ಯಾವ ಹುಡುಗಿ ಸಿಗ್ತಾಳೆ ಅನ್ನೋದೇ ಚಿತ್ರದ ಕಥೆ. ಜಮ್ಮು ಕಾಶ್ಮೀರ, ಲಡಾಕ್ ಅಲ್ಲದೆ ಕರ್ನಾಟಕದ ಕೊಪ್ಪಳ, ಅಂಜನಾದ್ರಿ ಬೆಟ್ಟ, ಕೆ.ಆರ್.ಎಸ್.ಡ್ಯಾಮ್ ಸುತ್ತಮುತ್ತ ನಮೋ ಭಾರತ. ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಬರುವ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಈಗಾಗಲೇ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

ಶ್ರೀಚೌಡೇಶ್ವರಿ ಫಿಲಂಸ್ ಮೂಲಕ ರಮೇಶ್ ಎಸ್. ಪರವಿನಾಯ್ಕರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಾಯಕನ ಪಾತ್ರವನ್ನೂ ಸಹ ನಿರ್ವಹಿಸಿದ್ದಾರೆ.

ಎ.ಟಿ.ರವೀಶ್ ಅವರ ಸಂಗೀತ, ಡಾ.ದೊಡ್ಡರಂಗೇಗೌಡ, ಡಾ.ವಿ.ನಾಗೇಂದ್ರ ಪ್ರಸಾದ್ ಅವರ. ಸಾಹಿತ್ಯ, ವೀರೇಶ್ ಎಸ್.ಟಿ.ವಿ. ಹಾಗೂ ಗೌರಿ ವೆಂಕಟೇಶ್ ಅವರ ಛಾಯಾಗ್ರಹಣ, ರುದ್ರೇಶ್ ನಾಗಸಂದ್ರ ಅವರ ಸಂಭಾಷಣೆ, ಹೈಟ್ ಮಂಜು, ನಾಗೇಶ್ ಅವರ ನೃತ್ಯ ನಿರ್ದೇಶನ, ರಾಜರತ್ನ, ವಿನಾಯಕ, ಅಂಜಿತ ಅವರ ಸಹನಿರ್ದೇಶನ ನಮೋ ಭಾರತ ಚಿತ್ರಕ್ಕಿದೆ.

ತಾರಗಣದಲ್ಲಿ ರಮೇಶ್ ಪರವಿನಾಯ್ಕರ್, ಸೋನಾಲಿ ಪಂಡಿತ್ (ಹಿಂದಿ ನಟಿ) ಸುಶ್ಮಿತಾ, ಭವ್ಯ, ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್, ನವನೀತ, ಶ್ರವಣ ಪಂಡಿತ್, ರವೀಂದ್ರ ಸಿಂಗ್ ಶರ್ಮಾ, ಮಾಸ್ಟರ್ ಯುವರಾಜ್ ಪರವಿನಾಯ್ಕರ್ ಮತ್ತಿತರು

3 - 0

Metro Express
Posted 8 months ago

Sangeetha Sringeri 🥰

9 - 0

Metro Express
Posted 8 months ago

ವಿತರಕ ಬಿ.ಜಿ.ಚಂದನ್‌ಕುಮಾರ್ ಈಗ ನಿರ್ದೇಶಕ

ಶ್ರೀಸಿದ್ದಿವಿನಾಯಕನ ಸನ್ನಿಧಿಯಲ್ಲಿ
"ಜನ" ಚಿತ್ರಕ್ಕೆ ಚಾಲನೆ

ಬಣ್ಣದ ಲೋಕದ ಆಕರ್ಷಣೆಗೆ ಒಳಗಾಗದವರೇ ಇಲ್ಲ, ನಟನಾಗಬೇಕೆಂದು ಬಂದವರು ನಿರ್ದೇಶಕ, ನಿರ್ಮಾಪಕನಾಗಿದ್ದೂ ಇದೆ, ನಿರ್ದೇಶಕನಾಗಬೇಕೆಂದು ಬಂದವರು ನಟ, ನಿರ್ದೇಶಕನಾಗಿಯೂ ಬೆಳೆದಿದ್ದಾರೆ. ಆದರೆ ಇಲ್ಲೊಬ್ಬ ವಿತರಕ ನಿರ್ದೇಶಕನಾಗುತ್ತಿರುವುದು ವಿಶೇಷ. ದಶಕದ ಹಿಂದೆ ತಾನೊಬ್ಬ ನಿರ್ದೇಶಕನಾಗಬೇಕೆಂಬ
ಮಹತ್ವಾಕಾಂಕ್ಷೆಯಿಂದ ಮಂಡ್ಯದಿಂದ ಗಾಂಧಿ ನಗರಕ್ಕೆ ಕಾಲಿಟ್ಟ ಬಿ.ಜಿ.ಚಂದನ್‌ಕುಮಾರ್ ವಿತರಕನಾಗಿ ಕಾರ್ಯನಿರ್ವಹಿಸುತ್ತಲೇ ಚಿತ್ರನಿರ್ಮಾಣದ ಎಲ್ಲಾ ಆಯಾಮಗಳನ್ನು ಅರಿತುಕೊಂಡು ಇದೀಗ ನಿರ್ದೇಶಕನಾಗುತ್ತಿದ್ದಾರೆ. ಒಬ್ಬ ನಿರ್ದೇಶಕನಿಗೆ ತನ್ನ ಚಿತ್ರವನ್ನು ಜನರಿಗೆ ಹೇಗೆ ತಲುಪಿಸಬೇಕೆಂಬುದು ಸಹ ಗೊತ್ತಿರಬೇಕು ಎಂಬುದನ್ನು ಅರಿತಿರುವ ಚಂದನ್‌ಕುಮಾರ್ ದಶಕದ ಹಾದಿಯಲ್ಲಿ ಕಥೆ ಬರೆಯುವುದರಿಂದ ಹಿಡಿದು ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವುದನ್ನು ಚೆನ್ನಾಗಿಯೇ ತಿಳಿದುಕೊಂಡೇ ನಿರ್ದೇಶನಕ್ಕಿಳಿದಿದ್ದಾರೆ. ಅವರ ಹೊಸ ಚಿತ್ರದ ಶೀರ್ಷಿಕೆ "ಜನ". ಈ ಚಿತ್ರದ ಮುಹೂರ್ತ ಸಮಾರಂಭ ದೇವಯ್ಯ ಪಾರ್ಕ್ ಬಳಿಯ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ದೇಶಕರ ತಂದೆ ಗೋವಿಂದರಾಜ್ ಅವರು ಕ್ಲಾಪ್ ಮಾಡಿದರೆ, ಹಿರಿಯ ನಿರ್ಮಾಪಕ ಚಿನ್ನೇಗೌಡ್ರು ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು. ಜನ ಚಿತ್ರದ ಮೂಲಕ ಚೇತನ್‌ಕುಮಾರ್ ಎಂಬ ಯುವಪ್ರತಿಭೆ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇದೊಂದು ಜರ್ನಿಯಲ್ಲಿ ಸಾಗುವ ಕಥೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಿತ್ರೀಕರಿಸುವ ಯೋಜನೆ ನಿರ್ದೇಶಕರಿಗಿದೆ. ಮಾಸ್, ಕ್ಲಾಸ್ ಹೀಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮಾಡಿಕೊಂಡಿರುವ ನಿರ್ದೇಶಕ ಚಂದನ್‌ಕುಮಾರ್ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಶೇಡ್ ಕೂಡ ಇರುತ್ತೆ ಎಂದು ಹೇಳಿದ್ದಾರೆ. ಈ ಚಿತ್ರವನ್ನು ಸಕ್ಕರೆನಾಡು ಕಂಬೈನ್ಸ್ ಮೂಲಕ ಶ್ರೀಮತಿ ಯಶೋದಮ್ಮ ಗೋವಿಂದರಾಜ್ ಹಾಗೂ ದೀಪಾ ಚಂದನ್‌ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ನರಸಿಂಹಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಮುಂಜಾನೆ ಮಂಜು ಅವರ ಛಾಯಾಗ್ರಹಣ, ಕಾರ್ತೀಕ್ ಅಲೆ ಅವರ ಸಂಗೀತ ಸಂಯೋಜನೆ, ಚಾಲೆಂಜಿಂಗ್ ಸೂರಿ ಅವರ ನೃತ್ಯನಿರ್ದೇಶನ ಜನ ಚಿತ್ರಕ್ಕಿದೆ,

0 - 0

Metro Express
Posted 8 months ago

ಉಪ್ಪಿ ಅಭಿಮಾನಿ ನಟಿಸ್ತಿರೋ
"ನಾನೇ ಹೀರೋ" ಚಿತ್ರಕ್ಕೆ ಚಾಲನೆ

ಉಪೇಂದ್ರ ಅಭಿಮಾನಿಯೊಬ್ಬ ನಟಿಸುತ್ತಿರುವ ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಚಿತ್ರ "ನಾನೇ ಹೀರೋ". ಆರ್.ಕೆ.ಗಾಂಧಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಬೃಂದ ವಿದ್ಯಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹಗದೂರು ಅಶೋಕ್ ರೆಡ್ಡಿ, ಮುತ್ಸಂದ್ರ ವೆಂಕಟರಾಮಯ್ಯ, ಸತ್ಯವಾನಾಗೇಶ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಚಿಂತಾಮಣಿ ತಾಲ್ಲೂಕಿನ ನಲ್ಲಗುಟ್ಲಪಲ್ಲಿ ಸಪ್ತಮಾತೃಕೆಯರ ಸನ್ನಿಧಾನದಲ್ಲಿ ಇತ್ತೀಚೆಗೆ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯ ನಿರ್ಮಾಪಕ ಚಿಂತಾಮಣಿಯ ಬಿ. ಎನ್. ಎಸ್ .ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಚೌಡದೇವನಹಳ್ಳಿಯ ಲಕ್ಷ್ಮಿನಾರಾಯಣ ರೆಡ್ಡಿ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಉಪ್ಪಿ ಅಭಿಮಾನಿಯೊಬ್ಬ ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೊರಟು, ಅದಕ್ಕಾಗಿ ಆತ ಏನೇನೆಲ್ಲಾ ಸಾಹಸ ಮಾಡುತ್ತಾನೆ ಎಂಬ ಕಥಾಹಂದರ ಈ ಚಿತ್ರದಲ್ಲಿದೆ. ನಿಮಗೇನ್ ಪ್ರಾಬ್ಲಮ್ಮು ಅನ್ನೋ ಟ್ಯಾಗ್ ಲೈನ್ ಇದಕ್ಕಿದೆ.
ಸಿನಿಮಾ ಇಂಡಸ್ಟ್ರಿ ಅಂದರೆ ಕೆಲವರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಆ ಭಯಕ್ಕೆ ಕಾರಣಗಳೇನು ಎಂಬುದನ್ನು ಈ ಚಿತ್ರದ ಮೂಲಕ
ನಿರ್ದೇಶಕ ಆರ್.ಕೆ. ಗಾಂಧಿ ಅವರು ಹೇಳುತ್ತಿದ್ದಾರೆ.
ಈ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಹಗದೂರು ಅಶೋಕ್ ರೆಡ್ಡಿ, ಶೋಭ, ಶೋಭರಾಜ್, ಶಶಿಕುಮಾರ್.ಅನ್ಸರ್ ಬಾಬು, ಮಹಾಂತೇಶ ವಿರೂಪಾಕ್ಷಿ ಸಮಯ್ ಮುಂತಾದವರು ನಟಿಸುತ್ತಿದ್ದಾರೆ. ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಎಂ. ಎಲ್. ರಾಜ ಅವರ ಸಂಗೀತ, ರಾಜೀವ್ ಕೃಷ್ಣ ಗಾಂಧಿ ಅವರ ಸಾಹಿತ್ಯ, ವಿನಯ್ ಅವರ ಸಂಕಲನ ಈ ಚಿತ್ರಕ್ಕಿದ್ದು ಇನ್ನುಳಿದ ಕಲಾವಿದ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೊಸಕೋಟೆ, ಚಿಂತಾಮಣಿ ಮತ್ತು ಗಾಂಧಿನಗರದ ಹಲವು ಸಿನಿಮಾ ಕಛೇರಿಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.

1 - 0

Metro Express
Posted 8 months ago

*ಮತ್ತೆ ಬಂದೇ ಬಿಡ್ತು N1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ TPL.. ಫೆ.28ರಿಂದ ಮಾ.3ರವೆರೆಗೆ ನಡೆಯಲಿದೆ ಟೆಲಿವಿಷನ್ ಪ್ರೀಮಿಯರ್ ಲೀಗ್*

ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್ ಮುಕ್ತಾಯಗೊಂಡಿದ್ದು, ಇದೀಗ ಟಿಪಿಎಲ್ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿಗೆ ಸಾಕ್ಷಿಯಾಗಲಿದೆ. ಹುಬ್ಬಳ್ಳಿ ಕೆ.ಎಸ್.ಸಿ.ಎ ಮೈದಾನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 3 ರವರೆಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯಲಿದೆ. ಕಿರುತೆರೆಯ ಕಲಾವಿದರು ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ನಲ್ಲಿ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ, ನೆನಪಿರಲಿ ಪ್ರೇಮ್, ತಿಲಕ್, ಸಚಿವ ಸಂತೋಷ್ ಲಾಡ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಹನುಮಂತರಾಯಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲಾವಿದರಿಗೆ ಶುಭ ಕೋರಿದರು.

ಈ ವೇಳೆ ಮಾತನಾಡಿದ ಶ್ರೀಮುರಳಿ, ಯಾವುದೇ ಇವೆಂಟ್ ಚೆನ್ನಾಗಿ ಆಗಬೇಕು ಎಂದರೆ ಪಾಸಿಟಿವ್ ಮೈಂಡ್ ಸೆಟ್ , ಒಳ್ಳೆ ಜನ ಹಾಗೂ ಒಂದೇ ರೀತಿ ಯೋಚಿಸುವುದು ಮುಖ್ಯ..ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಅಪ್ಪು ಮಾವ ನೆರಳಲ್ಲಿ ಪ್ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯಾಗುತ್ತದೆ. ಅಪ್ಪು ಮಾವನಿಗೆ ಒಂದು ಆಸೆ ಇತ್ತು. ಎಲ್ಲರೂ ಜೊತೆಗೂಡಬೇಕು. ಬರೀ ಇಂಡಿಯಾ ಅಲ್ಲ. ವರ್ಲ್ಡ್ ವೈಡ್ ಹೋಗಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಆದರೆ ಎಲ್ಲರ ಟೈಮ್ ಸೆಟ್ ಆಗುವುದಿಲ್ಲ. ಎಲ್ಲಾ ಟೆಲಿವಿಷನ್ ಕಲಾವಿದರಿಗೂ ನನ್ನದೊಂದು ಗೌರವ. ಎಲ್ಲರೂ ಚೆನ್ನಾಗಿ ಆಡಿ. ಯಾರಾದ್ರೂ ಗೆಲ್ಲಲಿ..ಭಾಗವಹಿಸುವುದು ಮುಖ್ಯ. ನನಗೆ ಕ್ರಿಕೆಟ್ ಎಂದರೆ ಇಷ್ಟ. ಆದರೆ ನನಗೆ ಆಡಲು ಬರುವುದಿಲ್ಲ ಎಂದರು.

ಸಚಿವ ಸಂತೋಷ್ ಲಾಡ್ ಮಾತನಾಡಿ, ವಿಶೇಷವಾದ ಆಹ್ವಾನ ನೀಡಿದ ಸುನಿಲ್ ಅವರಿಗೆ ಧನ್ಯವಾದ. ಟಿಲಿವಿಷನ್ ಪ್ರೀಮಿಯರ್ ಲೀಗ್ ಸತತ ಮೂರನೇ ಬಾರಿಗೆ ನಡೆಯುತ್ತಿದೆ. ನನ್ನ ಅದೃಷ್ಟ ನಾನು ಈ ಬಾರಿ ಹುಬ್ಬಳ್ಳಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಅಲ್ಲಿ ನಡೆಯುತ್ತಿದೆ. ನಿಮ್ಮೆಲ್ಲರಿಗೆ ಉತ್ತರಕರ್ನಾಟಕ ನಮ್ಮ ಟ್ವಿನ್ಸ್ ಸಿಟಿಗೆ ಸ್ವಾಗತಿಸ್ತೇನೆ,. ಕ್ರಿಕೆಟ್ ನಿಂದ ಇತ್ತೀಚೆಗೆ ಯುವ ಜನತೆಗೆ ಸಾಕಷ್ಟು ಅವಕಾಶ ಸಿಗುತ್ತಿದೆ. ನೀವು ಪ್ರಮೋಟ್ ಮಾಡ್ತಿರುವುದರಿಂದ ಈ ಕ್ರಿಕೆಟ್ ಮತ್ತಷ್ಟು ಬೆಳೆಯಲಿ. ಕ್ರಿಕೆಟ್ ನಲ್ಲಿ ಭಾಗವಹಿಸುತ್ತಿರುವ ನಿಮ್ಮೆಲ್ಲರಿಗೆ ಒಳ್ಳೆದಾಗಲಿ ಎಂದು ತಿಳಿಸಿದರು.

ನೆನಪಿರಲಿ ಪ್ರೇಮ್ ಮಾತನಾಡಿ, ಇಲ್ಲಿರುವ ಎಲ್ಲರೂ ನನ್ನ ಆತ್ಮೀಯ ಸ್ನೇಹಿತರು. ಎಲ್ಲರೂ ಸೇರಿ ಕ್ರಿಕೆಟ್ ಆಡುತ್ತಿರುವುದು ಬಹಳ ಖುಷಿ ವಿಚಾರ. ಕ್ರಿಕೆಟ್ ಅಂದರೆ ಬರೀ ಆಟವಲ್ಲ. ಎಲ್ಲರೂ ಒಂದು ಕಡೆ ಸೇರಿಸುವ ಆಟವಾಗಿದೆ. ಕೆಲಸ ಮಾಡಿ ಮನೆಗೆ ಹೋಗುತ್ತೇವೆ, ನಮ್ಮದೇ ಲೈಫ್ ನಲ್ಲಿ ಕಳೆದು ಹೋಗುತ್ತೇವೆ. ಎಲ್ಲಾ ಸ್ನೇಹಿತರು ಒಂದು ಕಡೆ ಸೇರುವುದು ಕಷ್ಟ. ಆದ್ರೆ ಇಲ್ಲಿ ಕ್ರಿಕೆಟ್ ಮಾಡುತ್ತಿದೆ. ಬಹಳ ಸಂತೋಷ ವಿಚಾರ. ನನಗೂ ಟೆಲಿವಿಷನ್ ಗೂ ಅವಿನಾಭಾವ ಸಂಬಂಧವಿದೆ. ನಾನು ಇಲ್ಲಿ ಗೆಸ್ಟ್ ಆಗಿ ಬಂದಿಲ್ಲ. ಸ್ನೇಹಿತನಾಗಿ ಬಂದಿದ್ದೇನೆ. ಎಲ್ಲಾ ತಂಡಕ್ಕೂ ಒಳ್ಳೆದಾಗಲಿ ಎಂದರು.

ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿವೆ. 12 ಓವರ್ಗಳ ಪಂದ್ಯದಲ್ಲಿ 10 ತಂಡಗಳು ಭಾಗವಹಿಸಲಿವೆ. ಐಪಿಎಲ್ ನಂತೆ ಬಿಡ್ಡಿಂಗ್ ಮಾಡಿ ಆಟಗಾರರ ಆಯ್ಕೆ ಮಾಡಲಾಗಿದೆ. ಟಿಪಿಎಲ್ ರಾಯಭಾರಿಯಾಗಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇದ್ದು, ಪ್ರಮುಖ ನಟರಾದ ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಟಿಪಿಎಲ್ 3 ನಲ್ಲಿ ಆಡುತ್ತಿರುವುದು ವಿಶೇಷ..


ಯಾವ ಯಾವ ತಂಡಗಳು ಭಾಗಿ?

ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೆವಿಯರ್, AVR ಟಸ್ಕರ್ಸ್, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, ಇನ್ಸೇನ್ ಕ್ರಿಕೆಟ್ ಟೀಂ, ಜಿಎಲ್ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್ ಗಳು ಭಾಗವಹಿಸಲಿದ್ದು, 170 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ಗಳಿರಲಿದ್ದಾರೆ. ಎವಿಆರ್ ಗ್ರೂಪ್ಸ್ನ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.

ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ. ರಂಜಿತ್ ಕುಮಾರ್ ಎಸ್ ಓನರ್, ಜಿಎಲ್ಆರ್ ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ ನಾಯಕನಾದರೆ ರಾಜೇಶ್ ಎಲ್ ಓನರ್, ಇನ್ಸೇನ್ ಕ್ರಿಕೆಟ್ ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, ದಿ ಬುಲ್ ಸ್ಕ್ವಾಡ್ ತಂಡಕ್ಕೆ ಶರತ್ ಪದ್ಮನಾಭ್ ನಾಯಕ-ಮೋನಿಶ್ ಓನರ್, ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕ- ಸ್ವಸ್ತಿಕ್ ಆರ್ಯ ಓನರ್, ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ ನಾಯಕ-ರಘು ಭಟ್ ಹಾಗೂ ಸುಗುಣ ಓನರ್, ಎವಿಆರ್ ಟಸ್ಕರ್ಸ್ಗೆ ಚೇತನ್ ಸೂರ್ಯ ನಾಯಕ - ಅರವಿಂದ್ ವೆಂಕಟ್ ರೆಡ್ಡಿ ಓನರ್, ಬಯೋಟಾಪ್ ಲೈಫ್ ಸೆವಿಯರ್ ಅಲಕಾ ನಂದ ಶ್ರೀನಿವಾಸ್ ನಾಯಕ-ವಿಶ್ವನಾಥ್, ಪ್ರಸನ್ನ ಓನರ್, ಕೆಕೆಆರ್ ಮೀಡಿಯಾ ಹೌಸ್ ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮೀ ಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ ವಿಹಾನ್ ನಾಯಕ-ಕುಶಾಲ್ ಗೌಡ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

3 - 0

Metro Express
Posted 8 months ago

*ಹರೀಶ್ ರಾಜ್ ನಟಿಸಿ, ನಿರ್ದೇಶಿಸಿರುವ ಪ್ರೇತ ಬಿಡುಗಡೆಗೆ ಮುಹೂರ್ತ ಫಿಕ್ಸ್...*

ಕನ್ನಡ ಚಿತ್ರರಂಗದ “ಕಲಾಕಾರ್‌’ ಖ್ಯಾತಿಯ ನಟ ಕಂ ನಿರ್ದೇಶಕ ಹರೀಶ್‌ ರಾಜ್‌ “ಪ್ರೇತ’ದ ಜೊತೆಗೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಹರೀಶ್‌ ರಾಜ್‌ ನಾಯಕನಾಗಿ ನಟಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಔಟ್‌ ಆ್ಯಂಡ್‌ ಔಟ್‌ ಹಾರರ್‌-ಥ್ರಿಲ್ಲರ್‌ “ಪ್ರೇತ’ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 23ಕ್ಕೆ ಥಿಯೇಟರ್‌ನಲ್ಲಿ “ಪ್ರೇತ’ ಪ್ರೇಕ್ಷಕರನ್ನು ಬಿಚ್ಚಿಬೀಳಿಸುವ ಯೋಜನೆ ಹಾಕಿಕೊಂಡಿದೆ.



'ಪ್ರೇತ’ ಸಿನಿಮಾದಲ್ಲಿ ಹರೀಶ್‌ ರಾಜ್‌ ಅವರೊಂದಿಗೆ ಅಮೂಲ್ಯ ಭಾರದ್ವಾಜ್‌, ಅಹಿರಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ. ಎಂ. ವೆಂಕಟೇಶ್‌, ಅಮಿತ್‌ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಹರೀಶ್‌ ರಾಜ್‌ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ “ಪ್ರೇತ’ ಸಿನಿಮಾ ನಿರ್ಮಾಣವಾಗಿದೆ. ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಪ್ರೇತ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್
ತೊಟ್ಟಿದ್ದಾರೆ.



ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಪ್ರೇತ ಸಿನಿಮಾಗೆ ಇದೆ. ಪ್ರಮೋದ್ ಮರವಂತೆ, ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪ್ರೇತ ಸಿನಿಮಾವನ್ನು ಶಾಲಿನಿ ಆರ್ಟ್ಸ್ ನಡಿ ಜಾಕ್ ಮಂಜು ರಾಜ್ಯಾದ್ಯಂತ ರಿಲೀಸ್ ಮಾಡುತ್ತಿದ್ದಾರೆ.

2 - 0

Metro Express
Posted 8 months ago

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯ್ಕೆಯಾದ #ನಾನುಇವಳಅಭಿಮಾನಿ #naanuivalaabimaani

0 - 0