in the future - u will be able to do some more stuff here,,,!! like pat catgirl- i mean um yeah... for now u can only see others's posts :c
ವಿಶ್ವಜನಸಂಖ್ಯಾ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಹಾಲು ಉತ್ಪಾದಕರ ಸಹಕಾರ ಸಂಘ, ಮಹಿಳಾ ದಕ್ಷತಾ ಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಸ್ಎಸ್ ಗಾಟಿ ಡಾಕ್ಟರ್ಸ್ ಫಾರ್ ಯೂ, ನವೋದಯ ಚಾರಿಟಬಲ್ ಟ್ರಸ್ಟ್, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ಹಾಗೂ ವಾತ್ಸಲ್ಯ ದಾಮ ಚಾರಿಟಬಲ್ ಟ್ರಸ್ಟ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು
ಇಂದಿನ ದಿನ ದೀಪ ಬೆಳಗುವ ಮೂಲಕ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಡಯಾಬಿಟಿಕ್ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ನೆರವೇರಿತು.
ಇದೇ ಸಂದರ್ಭದಲ್ಲಿ ಮಾತನಾಡಿದ THO ಡಾಕ್ಟರ್ ಪರಮೇಶ್ವರ್ ವಿಶ್ವಜನಸಂಖ್ಯಾ ದಿನಾಚರಣೆ ಕುರಿತು ಜಾಗ್ರತೆ ಮೂಡಿಸಿ ಮತ್ತು ಡಯಾಬಿಟಿಸ್ ಆರೋಗ್ಯ ತಪಾಸಣೆ ಶಿಬಿರ ಸುಮಾರು ಹದಿನೈದು ವರ್ಷಗಳ ಕಾಲದಿಂದ ನಡೆದುಕೊಂಡು ಬರುತ್ತಿದೆ ಎಂದು ತಿಳಿಸಿದರು.
ಹಾಡೋನಹಳ್ಳಿ ಅಪ್ಪಯ್ಯಅಣ್ಣ ಮಾತನಾಡಿ ವಿಶ್ವಜನಸಂಖ್ಯಾ ದಿನಾಚರಣೆ ನಮ್ಮ ಒಂದು ಜೀವನದ ಭಾಗವಾಗಿದೆ ಎಲ್ಲರೂ ಜಾಗೃಕತೆ ಯಿಂದ ವರ್ತಿಸಿ ನಮ್ಮ ವಿಶ್ವವನ್ನು ಸಂರಕ್ಷಿಸೋಣ ಮತ್ತು ಡಯಾಬಿಟಿಸ್ ಆರೋಗ್ಯ ತಪಾಸಣೆ ಶಿಬಿರ ಕೋವಿಡ್ 19 ಇದ್ದ ಕಾರಣ ನಿಲ್ಲಿಸಿದ್ದೆವು ಈಗ ಮತ್ತೆ ಡಯಾಬಿಟಿಸ್ ಆರೋಗ್ಯ ತಪಾಸಣಾ ಶಿಬಿರ ಶುರುವಾಗುತ್ತಿದೆ ಎಂದರು
ಹಾಗೂ ಇದೇ ಸಂದರ್ಭದಲ್ಲಿ ವಾತ್ಸಲ್ಯ ಧಾಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಅರ್ಜುನ್ ವೈ ಎನ್ ಮಾತನಾಡಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಇನ್ನೂರಕ್ಕೂ ಅಧಿಕ ದೇಶಗಳಲ್ಲಿ ಆಚರಿಸುತ್ತಿದ್ದು ನಾವು ತುಂಬಾ ಜಾಗೃತರಾಗಿರಬೇಕೆಂದು ವಿನಂತಿಸಿದರು ಮತ್ತು ಜನಸಂಖ್ಯೆಯಲ್ಲಿ ಇಡೀ ವಿಶ್ವದಲ್ಲೇ ಚೀನಾ ಮೊದಲನೆಯ ಸ್ಥಾನದಲ್ಲಿದ್ದು ಇಂಡಿಯಾ ಎರಡನೇ ಸ್ಥಾನದಲ್ಲಿ ಇರುತ್ತದೆ ದಯಮಾಡಿ ಇದನ್ನು ಮನಗೊಂಡು ಎಲ್ಲರೂ ಜನಸಂಖ್ಯೆಯನ್ನು ಕಡಿಮೆ ಮಾಡೋಣ ಎಂದು ಬೇಡಿಕೊಂಡರು.
ಈ ಸಂದರ್ಭದಲ್ಲಿ ಹಾಡೋನಹಳ್ಳಿ ಅಪ್ಪಣ್ಣನವರು ನಾಗರಾಜುರವರು ವಾತ್ಸಲ್ಯದ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷರು ಲೀಲಾವತಿ, ಅರ್ಜುನ್, ಡಾಕ್ಟರ್ ಗಗನ ಜಿ ಕೃಷ್ಣ, ನವೋದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಚೇತನ್ ಹಾಗೂ ಪುಷ್ಪ, ಅನಿತಾ, ಡಾಕ್ಟರ್ ಶೋಭಾ ಬಾಳಿಗ, ಗ್ಯಾಸ್ ಸಂಸ್ಥೆಯ ಬಸವರಾಜು, ದೊಡ್ಡಬಳ್ಳಾಪುರ ತಾಲ್ಲೂಕು THO ಡಾಕ್ಟರ್ ಪರಮೇಶ್, ಡಾಕ್ಟರ್ ಕರಿಯಪ್ಪ, ಡಾಕ್ಟರ್ ಸುಲೋಚನ, ಮತ್ತು ಆರೋಗ್ಯ ಶಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ನಾಗರಿಕರು ಭಾಗವಹಿಸಿದ್ದರು.
0 - 0
ನಮಸ್ಕಾರ ಸ್ನೇಹಿತರೆ.
ಜೀವನ ಜ್ಯೋತಿ ಫೌಂಡೇಶನ್ ವತಿಯಿಂದ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡಲು ಊರಿಗೆ ಇಬ್ಬರಂತೆ ಚಂದಾದಾರರನ್ನು ನೇಮಿಸುತ್ತಿದ್ದೇವೆ ಅವರ ಊರಿನಲ್ಲಿದ್ದು ಊರಿನಲ್ಲಿರುವ ವಿದ್ಯಾವಂತರನ್ನು ಗುರುತಿಸಿ ಅವರ ವಿದ್ಯಾರ್ಹತೆಗೆ ತಕ್ಕಂತೆ ಕೆಲವು ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡಲಾಗುತ್ತದೆ ಹಾಗೂ ಸ್ವಯಂ ಉದ್ಯೋಗ ಅವಕಾಶಗಳನ್ನು ಕೂಡ ಕಲ್ಪಿಸಿಕೊಡುತ್ತದೆ ಸ್ವಯಿಚ್ಛೆಯಿಂದ ಕೆಲಸ ಮಾಡಲು ಬಯಸುವವರು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ - 9066909902
ದಯವಿಟ್ಟು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಳ್ಳಿ
🙏ಜೀವನ ಜೋತಿ ಫೌಂಡೇಶನ್🙏
3 - 2
ಚಿಕ್ಕಬಳ್ಳಾಪುರ(ಏ.15): ಈವರೆಗೆ ಗೌರಿಬಿದನೂರು ತಾಲೂಕಿಗೆ ಮಾತ್ರ ಸೀಮಿತವಾಗಿದ್ದ ಕೊರೋನಾ ಸೋಂಕು ಇದೀಗ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೂ ಸೋಕಿದ್ದು, ನಗರದ 65 ವರ್ಷದ ವೃದ್ಧರೊಬ್ಬರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.
ಗೌರಿಬಿದನೂರು ಹೊರತುಪಡಿಸಿ ಇತರೆಡೆ ಸೋಂಕು ಪತ್ತೆಯಾಗದ ಕಾರಣ ನೆಮ್ಮದಿಯಾಗದ್ದ ಜನತೆಗೆ ಇದೀಗ ಆತಂಕ ಆರಂಭವಾಗಿದೆ. ಜಿಲ್ಲೆಯಲ್ಲಿ ಈವರೆಗೆ 12 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಎಲ್ಲ ಪ್ರಕರಣಗಳೂ ಗೌರಿಬಿದನೂರಿಗೆ ಸೇರಿದ್ದವು. ಇದೀಗ ಚಿಕ್ಕಬಳ್ಳಾಪುರದಲ್ಲಿ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೇರಿದಂತಾಗಿದೆ.
ಲಾಕ್‌ಡೌನ್: ಮೈಸೂರಿನಲ್ಲಿ ವಿಶೇಷ ರೈಲು ಆರಂಭ
ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡಿನ ನಿವಾಸಿ 65 ವರ್ಷದ ವೃದ್ಧ ವ್ಯಕ್ತಿಗೆ ಮಂಗಳವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಇವರಿಗೆ ಸೋಂಕು ಬರಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಇವರು ಸ್ಟೀಲ್‌ಪಾತ್ರೆ ಸಾಮಾನಿನ ವ್ಯಾಪಾರಿಯಾಗಿದ್ದು, ಚಿಕ್ಕಬಳ್ಳಾಪುರ ಬಿಟ್ಟು ಹೊರ ಹೋಗಿಲ್ಲ, ಜೊತೆಗೆ ಸೋಂಕಿತ ಪ್ರದೇಶಗಳಿಗೂ ಹೋಗಿಲ್ಲ ಎನ್ನಲಾಗಿದ್ದು, ಇಂತಹ ವ್ಯಕ್ತಿಗೆ ಸೋಂಕು ಬರಲು ಮೂಲ ಏನು ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮನೆ ಕೆಲಸದಾಕೆಗೂ ಕ್ವಾರಂಟೈನ್:
ಸೋಂಕಿತನಿಗೆ 52 ವರ್ಷದ ಪತ್ನಿ, 38 ವರ್ಷದ ಮಗ, 24 ವರ್ಷದ ಮತ್ತೊಬ್ಬ ಮಗ, 26 ವರ್ಷದ 3ನೇ ಮಗ ಸೇರಿದಂತೆ ಮನೆ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಹಾಸ್ಪಿಟಲ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸೋಂಕಿತ ವ್ಯಕ್ತಿ ಅಸ್ತಮಾ, ಬಿಪಿ, ಮಧುಮೇಹದಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏ.8 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕರಿಗಳು ತಿಳಿಸಿದ್ದಾರೆ.
6 ಮಂದಿ ಮೇಲೆ ನಿಗಾ:
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ವೇಳೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ಜನತೆಗೆ ಆತಂಕ ಆರಂಭವಾಗಿದ್ದು, 12 ಪ್ರಕರಣಗಳಿಂದ ರೆಡ್‌ಝೋನ್ ಪಟ್ಟಿಗೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆ ಈಗ ಮತ್ತಷ್ಟುಸೋಂಕಿತ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ನಗರದ ಹಳೇ ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯ 6 ಮಂದಿ ಸಂಪರ್ಕಿತರಿಗೆ ಕ್ವಾರಂಟೈನ್ ಮಾಡಿ, ನಿಗಾ ಇಡಲಾಗಿದೆ.
17ನೇ ವಾರ್ಡ್ ಸೀಲ್‌ಡೌನ್:
ಪ್ರಸ್ತುತ ಸೋಂಕು ಪತ್ತೆಯಾಗಿರುವ ಚಿಕ್ಕಬಳ್ಳಾಪುರದ 17ನೇ ವಾರ್ಡು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಈ ವಾರ್ಡಿನಿಂದ ಯಾರೂ ಹೊರಹೋಗದಂತೆ ಮತ್ತು ಇತರರು ಒಳ ಬರದಂತೆ ಎಚ್ಚರ ವಹಿಸಲಾಗಿದೆ. ಜೊತೆಗೆ ಸೋಂಕಿತನ ಮನೆ ಸೇರಿದಂತೆ ಇಡೀ ರಸ್ತೆಗೆ ರಾಸಾಯನಿಕ ಮಿಶ್ರಿತ ನೀರಿನಿಂದ ಸ್ವಚ್ಛಗೊಳಿಸಲಾಗಿದೆ. ರಸ್ತೆ, ಚರಂಡಿಗಳನ್ನು ಸೋಮವಾರ ರಾತ್ರಿಯೇ ಸ್ವಚ್ಛಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 12 ಮಂದಿ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಒಬ್ಬ ಮಹಿಳೆ ಮೃತಪಟ್ಟು, 8 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ ಮೂವರು ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ಸೋಂಕು ಪತ್ತೆಯಾಗಿರುವ ವ್ಯಕ್ತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲು ಅಧಿಕಾರಿಗಳು ಕ್ರಮ ವಹಿಸಿರುವುದಾಗಿ ತಿಳಿದುಬಂದಿದೆ
1 - 0
ಹಾಯ್ ಕನ್ನಡಿಗ ಡಿಜಿಟಲ್ ನ್ಯೂಸ್.
ಕರ್ನಾಟಕದಲ್ಲಿ ಕನ್ನಡಿಗರ ಸಹಕಾರದೊಂದಿಗೆ ಮುನ್ನುಗ್ಗುತ್ತಿರುವ ಕನ್ನಡಿಗರ ಆಶಾಕಿರಣ ಹಾಯ್ ಕನ್ನಡಿಗ ಚಾನೆಲ್ ಸಮಾಜದಲ್ಲಿ ಕಾಣುವ ಹಲವು ಕುತೂಹಲ ನೋಟಗಳು ಮತ್ತು ಸಾಧಕರು ಮಾಡಿದ ಸಾಧನೆಗಳು ತೋರಿಸಲು ಮತ್ತು ಅವರ ಜೀವನ ಚರಿತ್ರೆಗಳು ಡಿಜಿಟಲ್ ವಾಹಿನಿಗಳಲ್ಲಿ ಪ್ರಸಾರ ಮಾಡಿ ಅವರಿಗೆ ಒಳ್ಳೆಯ ಪ್ರಶಂಸೆಯನ್ನು ತಂದು ಕೊಡಲು ಮುಕ್ಯ ಪಾತ್ರ ವಹಿಸುತ್ತದೆ.
ಯಾವುದೇ ಸುದ್ಧಿ.
ಸಾದನೆ
ಪರಿಚಯ
ಇಂಟರ್ವ್ಯೂ
ಈವೆಂಟ್ ಫೋಟೋಗ್ರಫಿ
ವಿಡಿಯೋಗ್ರಫಿ
ಪ್ರೀ ವೆಡ್ಡಿಂಗ್ ಕವರೇಜ್
ಈವೆಂಟ್ ಆರ್ಗನೈಜೇಷನ್.
For Enquiries:-
9743524365
9964145809