Channel Avatar

Ashish Saradka @UCrK3u8BIC0eSPIJWHY1nf1g@youtube.com

15K subscribers - no pronouns :c

ನಮಸ್ಕಾರ, ನಾನು ನಿಮ್ಮ ಆಶಿಶ್ ಸಾರಡ್ಕ. ಹಣಕಾಸಿನ ವಿಚಾರಗಳನ್ನು ಸರಳವಾಗ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Ashish Saradka
Posted 1 month ago

*********ಅವರವರ ಭಾವಕ್ಕೆ ಅವರವರ ಭಕುತಿಗೆ*************

ನಾನು ಪರ್ಸನಲ್ ಫೈನಾನ್ಸ್ ಬಗ್ಗೆ ಓದೋಕೆ ಶುರು ಮಾಡಿದಾಗ ಮೊದಮೊದಲು ಒಬ್ಬೊಬ್ಬರ ಒಪೀನಿಯನ್ ಓದಿ ತಲೆಬಿಸಿ ಮಾಡ್ತಾ ಇದ್ದೆ. ಒಬ್ಬರು ಮನೆ ಖರೀದಿ ಮಾಡಿ, ಪ್ರಾಪರ್ಟಿ ಪ್ರೈಸ್ ಹೆಚ್ಚಳ ತುಂಬಾ ಇರುತ್ತೆ.. ಈಗ ನೀವು ಕೊಂಡ ಅಸ್ತಿ ೧೦ ವರ್ಷದಲ್ಲಿ ಮುಟ್ಟೋಕೂ ಆಗದ ಮೊತ್ತಕ್ಕೆ ಹೋಗುತ್ತೆ.. ಸಾಲ ಮಾಡಿ ಮನೆ ಮಾಡಿ ಅಂದ್ರೆ, ಇನ್ನೊಬ್ಬರು ಸಿಪ್ ಮಾಡಿ, EMI ತಲೆಬಿಸಿ ಬೇಡ, ಬಾಡಿಗೆ ಮನೇಲಿರಿ. ಆ ದುಡ್ಡಲ್ಲೇ ಮನೆ ಮಾಡಬಹುದು ಮತ್ತೆ ಅಂತಾ ಇದ್ರು.

ಇದೇ ರೀತಿಯ ಮಾತು/ ಅನಿಸಿಕೆಗಳು ಪ್ರತಿಯೊಂದೂ ವಿಚಾರದಲ್ಲಿ ಇತ್ತು. ಸ್ಟಾಕ್ಸ್ ಖರೀದಿ ಮಾಡಿ ಅಂತಾ ಒಬ್ರು ಅಂದ್ರೆ ಇನ್ನೊಬ್ರು ಸಿಪ್ ಮಾಡಿ ಅಂತಾ, ಮತ್ತೊಬ್ರು ಕ್ರಿಪ್ಟೋ ನೋಡಿ ಅಂತಾ ಹೇಳುವವರು ಸಿಕ್ತಾ ಇದ್ರು. ppf , epf ಸೂಪರ್ ಅನ್ನುವ ಇನ್ನೂ ಕೆಲವು ಜನ ಇದ್ರು.

ಕಾರ್ ಹೊಸತ್ತು ಬೇಡ, ಸೆಕೆಂಡ್ ಹ್ಯಾಂಡ್ ಸಾಕು... ಕಾರಿಗೆ ಲೋನ್ ಮಾಡ್ಬೇಡಾ ಅನ್ನುವ ಒಬ್ರು ಸಿಕ್ಕಿದ್ರೆ, ಇಡೀ ಕಾರ್ ಲೋನ್ ಮಾಡಿ ತೊಗೋ ಅನ್ನುವ ಇನ್ನೊಬ್ರು ಇದ್ರು.

ಆ ಕಾರ್ ಕೊಳ್ಳೋ ಬದಲು, ಸ್ಟಾಕ್ ತೊಗೊಂಡಿದ್ರೆ ನೀನಿಷ್ಟೋತ್ತಿಗೆ mercedes ತೊಗೋಬಹುದಿತ್ತು ಅನ್ನುವ ಒಬ್ರು ಸಿಕ್ಕಿದ್ರೆ, ಅಯ್ಯೋ ಅಷ್ಟು ದುಡ್ಡಿಟ್ಟುಕೊಂಡು ಅನುಭವಿಸದೇ ಇದ್ರೆ ಏನು ಉಪಯೋಗ ಅನ್ನುವ ಮನುಷ್ಯರು ನಮ್ಮ ಮಧ್ಯದಲ್ಲೇ ಇರ್ತಾರೆ.
ಕೆಲವ್ರು ಹೋಟೆಲ್ ಊಟ, ಮಿನರಲ್ ವಾಟರ್ ಕೊಂಡುಕೊಳ್ಳೋದು ತುಂಬಾ ಖರ್ಚು, ಮನೆಯಿಂದ ಒಂದು ಬುತ್ತಿ , ಒಂದು ಬಾಟಲ್ ನೀರು ತೊಗೊಂಡು ಹೋಗಿ ಅಂತಾರೆ. ಅವರ ಪ್ರಕಾರ ಹೀಗೆ ಮಾಡಿ ವರ್ಷಕ್ಕೆ ನೀವೊಂದು ೧೦೦೦-೫೦೦೦ ಉಳಿಸಬಹುದು.
ಒಬ್ಬ IIT ಇಂಜಿನಿಯರ್ ಕೆಲಸ ಬಿಟ್ಟು ನಾನು ಸನ್ಯಾಸಿ ಆಗ್ತೀನಿ ಅಂತಾ ಹೊರಟಾಗ, ಅಯ್ಯೋ ಅಷ್ಟೆಲ್ಲ ಓದಿ ಸನ್ಯಾಸಿ ಆಗಿದ್ದಾ ಅನ್ನುವ ಪ್ರಶ್ನೆ ಬರುತ್ತೆ,
ಒಬ್ಬಳು ಹುಡುಗಿ MBBS , MD ಮಾಡಿ ನನಗೆ ಸರಿಯಾದ ಕ್ವಾಲಿಫಿಕೇಷನ್ ಇರುವ ಹುಡುಗ ಸಿಕ್ಕಿದ್ರೆ ಮಾತ್ರ ಮದುವೆ ಆಗ್ತೀನಿ ಅಂದ್ರೆ, ಹುಡುಗ ಸಿಗ್ತಾ ಇಲ್ಲ, ಅವಳಿಗೆ ಅಹಂಕಾರ, ಅಡ್ಜಸ್ಟ್ ಮಾಡಿಕೊಳ್ಳಬೇಕಲ್ವಾ ಅನ್ನುವ ಜನ ಇರ್ತಾರೆ.

ನಾನು ಹೇಳೋಕೆ ಹೊರಟಿರೋದು ಏನು ಗೊತ್ತಾ? ಜನರು ದುಡ್ಡಿನ ಬಗ್ಗೆ, ಇನ್ವೆಸ್ಟ್ಮೆಂಟ್ ಬಗ್ಗೆ, ಜೀವನದ ಆಯ್ಕೆಗಳ ಬಗ್ಗೆ, ಬದುಕು ನಡೆಸುವ ರೀತಿಯ ಬಗ್ಗೆ ಬೇರೆ, ಬೇರೆ ಒಪೀನಿಯನ್ ಇಟ್ಟುಕೊಳ್ತಾರೆ. ಆದರೆ ಅವರ್ಯಾರೂ ನಿಮ್ಮ ಬದುಕನ್ನು ಬದುಕೋದಿಲ್ಲಾ. ನಾನು ಪರ್ಸನಲ್ ಫೈನಾನ್ಸ್ ವಿಚಾರಕ್ಕೆ ಬಂದಾಗ ಹೇಳುವ ಕೆಲವೊಂದು ವಿಚಾರ ಎಲ್ಲರಿಗೂ ಪಾಲನೆ ಮಾಡೋಕೆ ಸಾಧ್ಯವೇ ಇಲ್ಲ.
ಮನೆಯಲ್ಲಿ ತಂಗಿ ಮದುವೆಗೆ ಸಿದ್ಧಳಾಗಿ ಕೂತಿದ್ದಾಳೆ, ಅವಳ ಮದುವೆ ಖರ್ಚು ಮಾಡಬೇಕು, ಮದುವೆ ಮಾಡುವ ಮುನ್ನ ಸ್ವಂತದ ಮನೆ ಬೇಕು, ಹಾಗಾಗಿ ಲೋನ್ ಮಾಡಿ ಮನೆ ಮಾಡಿದೆ ಅನ್ನುವ ವ್ಯಕ್ತಿ ಅವನ ಬದುಕಿಗೆ ಬೇಕಾದ ಕೆಲಸ ಮಾಡಿರ್ತಾನೆ. ಸಾಲ ಮಾಡಬಾರದು ಅಂತೀವಿ, ತಂಗಿಯ ಮದುವೆ ಮಾಡೋಕೆ ಅವನಿಗೆ ಸಾಲ ಮಾಡದೇ ಬೇರೆ ದಾರಿ ಇರಲ್ಲ ಅನ್ನೋದನ್ನು ಮರೀತೀವಿ.

ಊರಿನ ಜಾಗ ಮಾರಿ ಹೋಗುವ ಜನರನ್ನು ನೋಡಿದಾಗ ನನಗೆ ಬೇಜಾರಾಗುತ್ತೆ. ಆದರೆ ಅವರ ಕಷ್ಟ ಅವರಿಗೆ ಮಾತ್ರ ಗೊತ್ತಿರುತ್ತೆ ಆಲ್ವಾ. ಕೃಷಿ ಗೊತ್ತಿಲ್ಲ, ಮಾಡೋಕೆ ಆಗಲ್ಲ ಅನ್ನುವವರು ಜಾಗ ಇಟ್ಟುಕೊಂಡು, ಕೆಲಸದವರನ್ನು ಇಟ್ಟುಕೊಂಡು ಕೆಲಸ ಮಾಡಿಸೋದು ಸಾಧ್ಯ ಇಲ್ಲದ ಮಾತು.. ಕೆಲಸ ಮಾಡ್ತೀನಿ ಅನ್ನುವ ಛಲ ಇದ್ದು ಮಾಡುವವರದ್ದು ಬೇರೆ ಮಾತು. ಇದು ಸರಿ, ಅದು ತಪ್ಪು ಅನ್ನುವ ಹಾಗಿಲ್ಲ. IT ಯಲ್ಲಿ ಕೆಲಸವೇ ಬದುಕು ಅಂತಾ ಬದುಕುವ ಜನ ಇದ್ದಾರೆ, ಬದುಕಲ್ಲಿ ಬೇರೆಲ್ಲಾ ಮುಖ್ಯ, ಕೆಲಸ ಮತ್ತೆ ಅನ್ನುವ ನನ್ನಂತವರೂ ಇದ್ದಾರೆ. ಎಲ್ಲಾರಿಗೂ ಅವರ ಪ್ರಿಯೋರಿಟಿ ಇದೆ. ಅವರ ಬದುಕಿದೆ.. ಅವರ ಕಾರಣಗಳು ಇರುತ್ತಾವೆ. ಇದು ಸರಿ, ಅದು ತಪ್ಪು ಅನ್ನುವ ಮಾತು ಪ್ರಾಯಶಃ ಸರಿ ಅಲ್ಲ. ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ಯೋಚಿಸಿ, ಅವಲೋಕನ ಮಾಡಿ, ನಿಮ್ಮ ಬಳಿಯಿರುವ ಮಾರ್ಗೋಪಾಯಗಳನ್ನು ನೋಡಿ ಸರಿಯಾದ ಒಪ್ಶನ್ ಆಯ್ಕೆ ಮಾಡಿ ಅಷ್ಟೇ

65 - 6

Ashish Saradka
Posted 2 months ago

ನಾಳೆಯ ವಿಕಮನಿಯಲ್ಲಿ ನನ್ನದೊಂದು ಬರಹ ಇರಲಿದೆ.... ರಾಕೇಶ್ ಝಂಜುನ್ವಾಲ ಹೇಳಿದ ಒಂದು ಮಾತಿದೆ.. ನಾನು ಒಂದು ಸ್ಟಾಕ್ ಖರೀದಿ ಮಾಡಬೇಕು ಅಂತಾ ಹೊರಟಾಗ ಅದರ ಬಗ್ಗೆ ತುಂಬಾ ವಿಶ್ಲೇಷಣೆ ಮಾಡಿ ಅದರ buy ಆರ್ಡರ್ ಇಡುತ್ತೇನೆ.. ಆದರೆ ಆ ಆರ್ಡರ್ ಎಕ್ಸಿಕ್ಯೂಟ್ ಆಗಬೇಕು ಅಂದ್ರೆ ಯಾರಾದರೂ ಅದನ್ನು ಮಾರಲೇಬೇಕು ಅಲ್ಲವೇ.. ಹಾಗೆ ಮಾರುವವರೂ ತುಂಬಾ ರಿಸರ್ಚ್ ಮಾಡಿಯೇ ಆಯಾ ಸ್ಟಾಕ್ ಅಲ್ಲಿ ಭವಿಷ್ಯ ಇಲ್ಲ ಅಂತಾ ನಿರ್ಧಾರ ಮಾಡಿಯೇ ಅದನ್ನು ಮಾರಿರುತ್ತಾರೆ... ಹಾಗಾಗಿ ಸ್ಟಾಕ್ ಮಾರ್ಕೆಟ್ ಅಲ್ಲಿ ಯಾವಾಗಲೂ ವಿಪರೀತ ಅಭಿಪ್ರಾಯಗಳೇ ಇರುತ್ತದೆ .. ಅಂತಾರೆ.. ಒಬ್ಬ ಹವಾಮಾನ ತಜ್ಞ ಮಳೆ ಬರುತ್ತೆ ಅಂದರೆ ಇನ್ನೊಬ್ಬ ಜೋರು ಬಿಸಿಲು ಅಂತಾನೆ.. ಹಾಗಿದ್ದಾಗ ನೀವು ಕಿಟಕಿಯ ಹೊರಗೆ ನೋಡಿ ಎನಾಗ್ತಾ ಇದೆ ಅಂತಾ ತಿಳಿದುಕೊಂಡರೆ ನಿಮಗೆ ಬೇಕಾದ ವಿಷಯ ತಿಳಿಯುತ್ತೆ..

ಸ್ಟಾಕ್ ಮಾರ್ಕೆಟ್ ಸುಲಭ ನಿಜ! ಆದರೆ ಕೆಲವೊಮ್ಮೆ ನಾವು ಮಾಡಬೇಕಾದ ಬೇಸಿಕ್ ಮರೆತಾಗ ಅದು ತುಂಬಾ ಕಷ್ಟ ಅಂತಾ ಅನ್ನಿಸುತ್ತೆ.. ಅದರ ಬಗ್ಗೆಯೇ ಬರೆದಿದ್ದೇನೆ ! ಅದನ್ನು ನೋಡಿ :) ನಾಳೆ!!

52 - 5

Ashish Saradka
Posted 2 months ago

ನಿಮ್ಮ ಸ್ಟಾಕ್ portfolio ೧ ಕೋಟಿ ರೂಪಾಯಿ ತಲುಪಿದಾಗ, ೧.೫ -೨% ಡಿವಿಡೆಂಡ್ ಸಿಕ್ಕಿದರೂ ನಿಮಗೆ ವಾರ್ಷಿಕವಾಗಿ ೨ ಲಕ್ಷ ರೂಪಾಯಿ ಡಿವಿಡೆಂಡ್ ರೂಪದಲ್ಲೇ ಸಿಗುತ್ತದೆ. ಮಕ್ಕಳ ಶಾಲೆಯ ಫೀಸ್, ನಿಮ್ಮ ವರ್ಷದ ಆಹಾರದ ಖರ್ಚು, ಹೀಗೆ ಏನೋ ಒಂದು ಅದರಿಂದ ಫಂಡ್ ಮಾಡಲು ಸಾಧ್ಯವಾದರೂ ಅದು ತುಂಬಾ ಅದ್ಭುತ ವಿಚಾರ.ಇದರೊಟ್ಟಿಗೆ ಸ್ಟಾಕ್ ಮಾರ್ಕೆಟ್ ನ ರಿಟರ್ನ್ಸ್ ನಿಮಗೆ ಮತ್ತೊಂದು ೧೦% CAGR ಕೊಟ್ಟರೆ ನಿಮ್ಮ ಜೀವನ್ ಸೆಟ್ಲ್ ಆದ ಹಾಗೆ!

ಆ ಒಂದು ಕೋಟಿ ರುಪಾಯಿಯ ಪೋರ್ಟ್ಫೋಲಿಯೋ ಮಾಡೋದಕ್ಕೆ ಎಷ್ಟು ಕಮ್ಮಿ ಸಮಯ ನೀವು ತೆಗೆದು ಕೊಳ್ಳುತ್ತೀರೋ ಅಷ್ಟು ಬೇಗ ನೀವು ಫೈನಾನ್ಸಿಯಲ್ ಇಂಡಿಪೆಂಡೆನ್ಸ್ ಪಡೆಯಬಹುದು.

57 - 4

Ashish Saradka
Posted 2 months ago

Warren Buffett ಹೇಳುವ ಒಂದು ಮಾತು, "ಒಬ್ಬ ವ್ಯಕ್ತಿಯ ಜೊತೆಗೆ ನಾನು ಬ್ಯುಸಿನೆಸ್ ಸಂಬಂಧ ಬೆಳೆಸೋಕೆ ಮುಂಚೆ , ನಾನು ಮೂರು ವಿಷಯಗಳನ್ನು ನೋಡ್ತೀನಿ.. Intelligence (ಬುದ್ಧಿವಂತಿಕೆ), Energy (ಶಕ್ತಿ( ಕೆಲಸ ಮಾಡುವ ಆಸಕ್ತಿ ಅಂತಾ ಓದಿಕೊಳ್ಳಿ)), Integrity. ( ನೀಯತ್ತು - ಪ್ರಾಮಾಣಿಕತೆ) . ಇದರಲ್ಲಿ ಕೊನೆಯ ವಿಚಾರ ( integrity) ಇಲ್ಲದೆ ಇದ್ರೆ ಉಳಿದ ಎರಡು ವಿಚಾರಗಳನ್ನು ಯೋಚನೆ ಮಾಡೋದು ಕೂಡಾ ಅನಗತ್ಯ " ಅಂತಾ. ಎಷ್ಟು profound ವಿಚಾರ ಅಲ್ವಾ ಇದು

20 - 0

Ashish Saradka
Posted 3 months ago

Are we heading towards a catastrophic failure!?

ಮೊನ್ನೆ ದೀಪಾವಳಿಯ ದಿನ ಒಬ್ಬ ಜೋಮಾಟೋ ಡೆಲಿವರಿ ಪಾರ್ಟ್ನರ್ ತನ್ನ ದಿನದ ಆದಾಯದ ವಿಡಿಯೋ ಮಾಡಿದ್ದ.. ಸಾಯಂಕಾಲ 6 ಗಂಟೆಗೆ ಕೆಲಸ ಶುರು ಮಾಡಿ ರಾತ್ರೆ 11ಕ್ಕೆ ತನ್ನ 8ನೇ ಆರ್ಡರ್ ಕೊಟ್ಟು ಮನೆ ಸೇರಿದಾಗ ಆತ ಸಂಪಾದಿಸಿದ್ದು 300 ರುಪಾಯಿ.. ಆ ವಿಡಿಯೋ ವೈರಲ್ ಆಯ್ತು... ಅಲ್ಲಿ ಬಂದಿದ್ದ ಒಂದು ಕಾಮೆಂಟ್ ನನ್ನ ಕಣ್ಣಿಗೆ ಬಿತ್ತು .. ನಮ್ಮ ಜನರು ಯಾವ ಮಟ್ಟಿಗೆ F&O ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ, ಮತ್ತೆ ಅದರ ಬಗ್ಗೆ ಎಷ್ಟು ಸಿಂಪಲ್ ಆಗಿ ಬರೀತಾರೆ ನೋಡಿ.. 10000 ಒಟ್ಟು ಮಾಡಿ, ಒಂದು ಯೂಟ್ಯೂಬ್ ವಿಡಿಯೋ ನೋಡಿ, ದಿನಕ್ಕೆ 500 ರುಪಾಯಿ ದುಡಿಯಬಹುದು, ಕೆಲವೊಮ್ಮೆ 3000 ರುಪಾಯಿ ಕೂಡಾ ಡುಡಿಯಬಹುದು ಅಂತಾ ಹೇಳ್ತಾರೆ! ಆದರೆ ಇಲ್ಲಿ 99% ಆಗೋದು ಈ 10000 ರುಪಾಯಿಯ ಲಾಸ್! ಒಬ್ಬ 300 ರುಪಾಯಿ ದುಡಿಯುವ ವ್ಯಕ್ತಿಗೆ 10000 ರುಪಾಯಿ ತಿಂಗಳ ಆದಾಯ! ಅದೆಲ್ಲಾ ಹೇಗೆ ಕಳೆದುಕೊಂಡರೆ ಹೇಗೆ ಕಥೆ!! ಅವನು ಟ್ರೇಡ್ ಮಾಡ್ತಾನೆ ಅಂತಾ ಅಲ್ಲಾ.. ಆದರೆ ತುಂಬಾ ಜನರ ಮನಸ್ಥಿತಿ ಹೇಗಿದೆ ಅಂತಾ ನನ್ನ ಹೆದರಿಕೆ! ಏನಾಗುತ್ತೋ ಏನೋ?

7 - 0

Ashish Saradka
Posted 3 months ago

ನನ್ನ nifty analysis ಇದು...Nifty breaking down from channel.. ಇನ್ನು ಇರುವ ಲಾಂಗ್ ಟರ್ಮ್ ಮತ್ತು ಅತೀ ದೊಡ್ಡ ಸಪೋರ್ಟ್ 200dma 23360 ರ ಆಸುಪಾಸು .. 24000, 23900 ರಲ್ಲಿ ಸಫೋರ್ಟ್ ಇದೆ . ಆದರೆ ಅದು ಉಳಿಯುತ್ತಾ?? ನೋಡಬೇಕು.!! ಮಾರುಕಟ್ಟೆಯ ನಿಜವಾದ ರುಚಿ ಈಗ ಸಿಗುತ್ತೆ!

12 - 1

Ashish Saradka
Posted 3 months ago

ಮನುಷ್ಯ ಪ್ರಯತ್ನದ ಮುಂದೆ ಲಕ್ ಕೂಡಾ ಮಂಡಿಯೂರುತ್ತೆ ಅಂತಾರೆ.. ಅವರನ್ನೊಮ್ಮೆ ಕರ್ಕೊಂಡು ಬಂದು ಕೇಳ್ಬೇಕು, ಎಷ್ಟು ಪ್ರಯತ್ನ ಪಟ್ಟರೂ IPO ಸಿಗಲ್ಲ ಯಾಕೆ ಅಂತಾ 😭🤕 ವಾರೀ ಕಳೀತು :(

23 - 12

Ashish Saradka
Posted 3 months ago

nifty ಕಥೆ ಏನು??

0 - 0

Ashish Saradka
Posted 3 months ago

ಇನ್ನೂ ಬರೀ 25% subscription ಮಾತ್ರ ಆಗಿರೋದು ಹ್ಯುಂಡೈ ipo!! ಏನಾಗುತ್ತೆ ಕಾದು ನೋಡಬೇಕು..

6 - 2

Ashish Saradka
Posted 3 months ago

Be greedy when others are fearful ಅಂತಾ ವಾರೆನ್ ಬಫೆಟ್ ಹೇಳೋದು ಕೇಳಿರ್ತೀರಿ.. ಅದನ್ನೇ ತುಂಬಾ influencers ಬಾಯಲ್ಲೂ ಕೇಳೀರ್ತೀರಿ.. ಆದರೆ ಅದನ್ನು ಮಾಡೋಕೆ ಆಗುವ ಹೆದರಿಕೆ ಅಷ್ಟಿಷ್ಟಲ್ಲ.. ಇವತ್ತು ಅದೇ situation ಅಲ್ಲಿ ನಾನಿದ್ದೇನೆ.. ನನ್ನ ಹತ್ರ dmart ಮಾತೃ ಸಂಸ್ಥೆ avenue supermarts ಸ್ಟಾಕ್ ತುಂಬಾ ಕ್ವಾಂಟಿಟಿಯಲ್ಲಿದೆ.. ನನ್ನ ಪೋರ್ಟ್ಫಾಲಿಯೋ ವ್ಯಾಲ್ಯೂವಿನ 6% ವ್ಯಾಲ್ಯೂ ಇರೋದು dmart ಅಲ್ಲೇ.. ಇವತ್ತು ಅದು ,9% ಕೆಳಗೆ ಬಿದ್ದಿದೆ... ಕಾರಣ ಫಂಡಮೆಂಟಲ್ ಸಮಸ್ಯೆಯೊಂದು ಅದರ ಮುಂದೆ ಇದೆ... ಕ್ವಿಕ್ ಕಾಮರ್ಸ್ ಕಂಪೆನಿಗಳು ಅದರ ಬ್ಯುಸಿನೆಸ್ ತಿಂತಾ ಇದ್ದಾವೆ... 10-20 ನಿಮಿಷದ ಡೆಲಿವರಿ ಅದರ ಪ್ರಾಫಿಟ್ ಮತ್ತು ಸೇಲ್ಸ್ ತಿಂತಾ ಇದೆ... ಟ್ರೆಂಟ್ ಅದರ garments ಬ್ಯುಸಿನೆಸ್ ತಿಂತಾ ಇದೆ.. dmart 110ರ ಮೇಲೆ ಇದೆ.. ಬರೀ ಒಂದಂಕಿಯ ಪ್ರಾಫಿಟ್ ಬೆಳವಣಿಗೆಗೆ ಇಷ್ಟು ದುಡ್ಡು ಕೊಡಬೇಕಾ ಅನ್ನುವ ಪ್ರಶ್ನೆಯನ್ನೇ ಎಲ್ಲರೂ ಕೇಳತಾ ಇರೋದು.. ಅದೇ ಕಾರಣಕ್ಕೆ ಇವತ್ತು ಸ್ಟಾಕ್ ಬಿದ್ದಿರೋದು ಕೂಡಾ... ಆದರೆ ನಾನು ಇವತ್ತು ಮತ್ತೆ ಸ್ವಲ್ಪ ಸ್ಟಾಕ್ ಖರೀದಿ ಮಾಡಿದೆ ... 22 ವರ್ಷ ಹಳೆಯ ಕಂಪೆನಿ.. ಅದರ ಮೇಲೆ ಕೂತಿರುವ ವ್ಯಕ್ತಿ ಒಬ್ಬ seasoned ಇನ್ವೆಸ್ಟರ್.. ಅದರ ಜೊತೆಗೆ ಒಳ್ಳೆ ಬ್ಯುಸಿನೆಸ್ ಲೀಡರ್ CEO.. ಇದರ ಜೊತೆಗೆ ಆಲ್ಮೋಸ್ಟ್ 20 ಸಾವಿರ ಕೋಟಿಯ FREE CASH in reserves and surplus... dmart ಇಲ್ಲಿಯ ವರೆಗೆ ಜಿದ್ದಿಗೆ ಬಿದ್ದು ದುಡ್ಡು ಖರ್ಚು ಮಾಡಿ ತಮ್ಮ ಬ್ಯುಸಿನೆಸ್ ಸ್ಟೈಲ್ ಬದಲಾವಣೆ ಮಾಡಿಲ್ಲ.. ಅವರು ಸಮಯ ಸಂದರ್ಭ ಮತ್ತು ಲಾಭ ನೋಡಿಯೇ ದುಡ್ಡು ಖರ್ಚು ಮಾಡೋದು.. So I trust my instincts now.. ಏನಾಗುತ್ತೆ ನೋಡೋಣ! ನನ್ನ instinct ಸರಿಯಾಗಿದ್ರೆ ಒಂದು ಮೂರು ನಾಲ್ಕು ವರ್ಷದಲ್ಲಿ ಈ ಪೋಸ್ಟ್ ಮತ್ತೆ ಶೇರ್ ಮಾಡಿ, ನಾನು ಆವತ್ತು ಮಾಡಿದ investment ನಿರ್ಧಾರ ಸೂಪರ್ ಆಗಿತ್ತು ಅಂತಾ ಹೇಳ್ತೀನಿ.. ಇಲ್ಲದೆ ಇದ್ರೆ ಶೇ ನಾನು ಅವತ್ತು ಮಾಡಿದ ತಪ್ಪು ನೋಡಿ ಅಂತಾ ಹೇಳ್ತೇನೆ... ನೋಡೋಣ ಏನಾಗುತ್ತೆ ಅಂತಾ

42 - 4