in the future - u will be able to do some more stuff here,,,!! like pat catgirl- i mean um yeah... for now u can only see others's posts :c
* ಶಿವಮೊಗ್ಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ* ಈ ದಿನ ದಿನಾಂಕ: 20-01-2023 ರಂದು *ಶ್ರೀ ಸಂತೋಷ್ ಕುಮಾರ್, ಸಿಪಿಐ ಸಂಚಾರ ವೃತ್ತ, ಶಿವಮೊಗ್ಗರವರ ನೇತೃತ್ವದಲ್ಲಿ* ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳೊಂದಿಗೆ ಶಿವಮೊಗ್ಗ ನಗರದ ಮಹಾವೀರ ವೃತ್ತದಲ್ಲಿ *ಪಾದ ಚಾರಿಗಳ ಸುರಕ್ಷತೆ* ಕುರಿತಂತೆ ವಾಹನ ಚಾಲಕರಿಗೆ ಜಾಗೃತಿಯನ್ನು ಮೂಡಿಸಲಾಯಿತು.
0 - 0
ಶಿವಮೊಗ್ಗದಲ್ಲಿ RAF ಪಥಸಂಚಲನ
ಮುಂಬರುವ ಕರ್ನಾಟಕ *ವಿಧಾನ ಸಭಾ ಸಾರ್ವರ್ತಿಕ ಚುನಾವಣೆ* ಹಿನ್ನೆಲೆಯಲ್ಲಿ *Rapid Action Force (RAF)* ಕಂಪನಿಗಳಿಗೆ ಜಿಲ್ಲೆಯ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳ ಪರಿಚಯ *(Area Familiarization)* ಕ್ಕಾಗಿ, ಈ ದಿನ ದಿನಾಂಕಃ-20-01-2023 ರಂದು *ಶ್ರೀ ರೋಹನ್ ಜಗದೀಶ್, ಐಪಿಎಸ್* ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಸಾಗರ ಉಪ ವಿಭಾಗ ಮತ್ತು *ಶ್ರೀಮತಿ ನಯನ ನಂದಿ, ಡೆಪ್ಯುಟಿ ಕಮಾಂಡೆಂಟ್, RAF* ರವರ ನೇತೃತ್ವದಲ್ಲಿ ಸಾಗರ ಉಪ ವಿಭಾಗದ *ಆನಂದಪುರ ಮತ್ತು ಸಾಗರ ಟೌನ್ ನ* ಪ್ರಮುಖ ಸ್ಥಳಗಳಲ್ಲಿ ಹಾಗೂ *ಶ್ರೀ ಶೀವಾನಂದ ಮದರಕಂಡಿ,* ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗ ಮತ್ತು ಶ್ರೀಮತಿ ನಯನ ನಂದಿ, ಡೆಪ್ಯುಟಿ ಕಮಾಂಡೆಂಟ್, RAF ರವರ ನೇತೃತ್ವದಲ್ಲಿ ಶಿಕಾರಿಪುರ ಉಪ ವಿಭಾಗದ *ಶಿರಾಳಕೊಪ್ಪ ಟೌನ್ ಮತ್ತು ಶಿಕಾರಿಪುರ ಟೌನ್* ನ ಪ್ರಮುಖ ಸ್ಥಳಗಳಲ್ಲಿ Familiarization Exercises ಪಥಸಂಚಲನವನ್ನು ನಡೆಸಲಾಯಿತು.
ಸದರಿ ಪಥಸಂಚಲನಗಳಲ್ಲಿ *ಶ್ರೀ ನವೀನ್ ಕುಮಾರ್, ಅಸಿಸ್ಟೆಂಟ್ ಕಮಾಂಡೆಂಟ್ RAF,* ಪಿಐ ಸಾಗರ ಟೌನ್, ಪಿಐ ಸಾಗರ ಗ್ರಾಮಾಂತರ ಹಾಗೂ ಪಿಐ ಶಿಕಾರಿಪುರ ಗ್ರಾಮಾಂತರ ಮತ್ತು ಪಿಎಸ್ಐ ಶಿರಾಳಕೊಪ್ಪ ಮತ್ತು ಸಿಬ್ಬಂಧಿಗಳು ಹಾಗೂ Rapid Action Force (RAF) ಕಂಪನಿಯ ಅಧಿಕಾರಿ ಸಿಬ್ಬಂಧಿಗಳು ಭಾಗವಹಿಸಿದ್ದರು.
0 - 0
ಸಾಗರ ಶಾಸಕ ಹಾಲಪ್ಪರಿಂದ ಇಲಾಖಾವಾರು ಸಮಸ್ಯೆಗಳ ಬಗ್ಗೆ ಚರ್ಚೆ: ಇಂದು (20-01-2023) ಸಾಗರ ಶಾಸಕರಾದ ಹೆಚ್.ಹಾಲಪ್ಪ ನವರು,ಕಾನೂನು ಮತ್ತು ಸಂಸದೀಯ ಸಚಿವರಾದ ಮಾಧುಸ್ವಾಮಿ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಕಾರ್ಮಿಕ ಇಲಾಖೆ ಸಚಿವರಾದ ಶಿವರಾಮ್ ಹೆಬ್ಬಾರ್, ತೋಟಗಾರಿಕೆ ಇಲಾಖೆ ಸಚಿವರಾದ ಮುನಿರತ್ನ, ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ ರವರುಗಳನ್ನು ಬೇಟಿಯಾಗಿ, ಕ್ಷೇತ್ರದ ಅಭಿವೃದ್ಧಿ ವಿಷಯಗಳು, ಹಾಗೂ ಇಲಾಖಾ ವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
0 - 0
ಈ ದಿನ ದಿನಾಂಕ: 20-01-2023 ರಂದು ಬೆಳಗ್ಗೆ ಶಿವಮೊಗ್ಗ ನಗರದ *ಡಿಎಆರ್ ಪೊಲೀಸ್ ಕವಾಯತು* ಮೈದಾನದಲ್ಲಿ ನಡೆದ ವಾರದ ಕವಾಯತ್ ನ್ನು *ಶ್ರೀ ಅನಿಲ್ ಕುಮಾರ್ ಭೂಮ ರೆಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ವೀಕ್ಷಿಸಿ, ಗೌರವ ವಂದನೆಯನ್ನು ಸ್ವೀಕರಿಸಿದರು. ಕವಾಯತಿನಲ್ಲಿ ಡಿವೈಎಸ್.ಪಿ ಡಿಎಆರ್, ಶಿವಮೊಗ್ಗ, ಡಿವೈಎಸ್.ಪಿ ಶಿವಮೊಗ್ಗ ಉಪ ಬಿ ವಿಭಾಗ ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಜರಿದ್ದರು.
0 - 0
*ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹದ* ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ *ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು* ಹಮ್ಮಿ ಕೊಂಡಿದ್ದು, ಸದರಿ ಕಾರ್ಯಕ್ರಮದ ಭಾಗವಾಗಿ ಈ ದಿನ ದಿನಾಂಕ:19-03-2023 ರಂದು *ಶ್ರೀ ಮಂಜುನಾಥ್ ಕುರಿ,* ಪಿಎಸ್ಐ ಶಿರಾಳಕೊಪ್ಪ ಪೊಲೀಸ್ ಠಾಣೆ ರವರು, *ಶಿರಾಳಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕದಂಬ ಪದವಿ ಪೂರ್ವ ಕಾಲೇಜುಗಳಲ್ಲಿ* ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಾಲೇಜು ವಿದ್ಯಾರ್ಥಿಗಳಿಗೆ *ಅಪಘಾತದ ಕಾರಣ ಮತ್ತು ಪರಿಣಾಮಗಳು, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ* ಬಗ್ಗೆ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಿದರು.
0 - 0
ಹಾನಗಲ್ಲ ಗುರು ಕುಮಾರ ಮಹಾಶಿವಯೋಗಿಗಳ ಜೀವನದಾರಿತ ಚಲನಚಿತ್ರ ವಿರಾಟಪುರ ವಿರಾಗಿ ವೀಕ್ಷಣೆ
ಇಂದು ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಸನ್ಮಾನ್ಯ ಶ್ರೀಯುತ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಮತ್ತು ಕುಟುಂಬದ ಸದಸ್ಯರೊಂದಿಗೆ ಚಲನಚಿತ್ರ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಬಳ್ಳೇಕೆರೆ ಸಂತೋಷ್, ದಿವಾಕರ್ ಶೆಟ್ಟಿ,ರಾಜೇಶ ಕಾಮತ್, ಮಾಲ್ತೇಶ್, ಉಮಾಶಂಕರ್, ರಾಜಶೇಖರ್, ಶಿವಯೋಗಿ ಅಂಚಿ ಮನೆ, ರಮೇಶ್ ಪಿ ಜಿ.ವೀಕ್ಷಿಸಿದರು.
0 - 0
ಸಾರ್ವಜನಿಕರಿಗೆ *ಗುಲಾಬಿ ಹೂವು ನೀಡಿ ಮೂಲಕ ರಸ್ತೆ ಸಂಚಾರ ಸಪ್ತಾಹ ಆಚರಣೆ
ಶಿವಮೊಗ್ಗದಲ್ಲಿ ಇಂದು ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹದ* ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ *ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು* ಹಮ್ಮಿ ಕೊಳ್ಳಲಾಗಿತ್ತು.
ಶ್ರೀಮತಿ *ಶೈಲಜಾ, ಪಿಎಸ್ಐ* ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ *ಪ್ರಮುಖ ವೃತ್ತಗಳಲ್ಲಿ* ಸಾರ್ವಜನಿಕರಿಗೆ *ಗುಲಾಬಿ ಹೂವುಗಳನ್ನು ನೀಡುವುದರ ಮೂಲಕ* ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಿದರು.
0 - 0
*ಗ್ರೂಪ್ ಸಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ : ಸಿದ್ದತೆಗೆ ಡಿಸಿ ಸೂಚನೆ*
ಶಿವಮೊಗ್ಗ, 17 ಜನವರಿ :
ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ವಿವಿಧ ಗ್ರೂಪ್ ‘ಸಿ’ ಹುದ್ದೆಗಳಿಗೆ ಕಡ್ಡಾಯ ಭಾಷಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳು ಜ.21 ಮತ್ತು 22 ರಂದು ನಗರದ 4 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಸಂಬಂಧ ಮಾರ್ಗಾಧಿಕಾರಿಗಳು, ವೀಕ್ಷಕರು, ನಿರೀಕ್ಷಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜ.21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಜ.22 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಸಹ್ಯಾದ್ರಿ ಕಲಾ, ಸಹ್ಯಾದ್ರಿ ವಾಣಿಜ್ಯ, ಸಹ್ಯಾದ್ರಿ ವಿಜ್ಞಾನ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಒಟ್ಟು ನಾಲ್ಕು ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 714 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ಮಾಹಿತಿ ನೀಡಿದರು.
ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಮಾರ್ಗಾಧಿಕಾರಿ, ವೀಕ್ಷಕರು ಹಾಗೂ ಸ್ಥಳೀಯ ನಿರೀಕ್ಷಣಾಧಿಕಗಳನ್ನು ನಿಯೋಜಿಸಲಾಗಿದೆ. ನಾಲ್ಕು ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷೆಗಳು ಪಾರದರ್ಶಕವಾಗಿ, ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಸೆಕ್ಷನ್ 144 ರನ್ವಯ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ ಫಾಸಲೆವರೆಗಿನ ಪ್ರದೇಶದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಟೈಪಿಂಗ್, ಜೆರಾಕ್ಸ್, ಇತರೆ ಅಂಗಡಿಗಳು ನಿಷೇಧಾಜ್ಞೆ ಅವಧಿಯಲ್ಲಿ ತೆರೆಯುದನ್ನು ಪ್ರತಿಬಂಧಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಯಾವುದೇ ರೀತಿಯ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ ಅವರು ಕೆಪಿಎಸ್‍ಸಿ ಮಾರ್ಗಸೂಚಿಯನ್ವಯ ಅಭ್ಯರ್ಥಿಗಳಿಗೆ ಆಸನಗಳ ವ್ಯವಸ್ಥೆ ಮಾಡಿ, ಮೂಲಭೂತ ಸೌಕರ್ಯವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಗೂ ಪರೀಕ್ಷಾ ಮಾರ್ಗಸೂಚಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಅವರು ಶಾಂತ ರೀತಿಯಲ್ಲಿ, ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಹಾಜರಿದ್ದರು.
1 - 0
ನೇರ ದಿಟ್ಟ ನಿರಂತರ