in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಆರು ಬಾರಿ ಶಾಸಕರಾಗಿ, ಸಂಸದರಾಗಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಮೇರು ನಾಯಕ ದಿ. ಖಮರುಲ್ ಇಸ್ಲಾಂ ಅವರ ಜಯಂತಿಯಂದು ಅವರನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ
114 - 0
ಸಮಸ್ತ ನಾಡಿನ ಜನತೆಗೆ, ಹಾಗೂ ನನ್ನ ಕುಲ ಬಾಂಧವರಿಗೆ, 12 ನೇ ಶತಮಾನದ ಕ್ರಾತಿಕಾರಿ, ಹಾಗೂ, ನೇರ ನುಡಿಯ ಸರದಾರ, 63, ಶರಣರಲ್ಲಿ, ನಿಜಶರಣ ಎಂದೆ ಪ್ರಖ್ಯಾತಿಯನ್ನು ಒಂದಿರುವ, ಶ್ರೀ ಶ್ರೀ ಶ್ರೀ, ನಿಜಶರಣ ಅಂಬಿಗರ ಚೌಡಯ್ಯನವರ, 903ನೇ ಜಯಂತೋತ್ಸವದ, ಹಾರ್ಧಿಕ ಶುಭಾಶಯಗಳು.🙏❤️
157 - 0
ದೇಶದ ಏಳಿಗೆಗಾಗಿ ಶ್ರಮಿಸಿದ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ರಾಜಕಾರಣಿ, ಭಾರತದ ಎರಡನೇ ಪ್ರಧಾನಿ, ಭಾರತ ರತ್ನ ಪುರಸ್ಕೃತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. 💐
109 - 0
ಉತ್ತರ ಕರ್ನಾಟಕದ, ನಡೆದಾಡುವ ದೇವರೆಂದೇ ಗುರುತಿಸಿಕೊಂಡಿರುವ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು, ವಿಧಿವಶರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಮಠದತ್ತ ಭಕ್ತರು ಧಾವಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಮಠದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ಕಾನೂನು ಸುವ್ಯವಸ್ಥೆಯಲ್ಲಿ ಲೋಪವಾಗದಂತೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಶ್ರೀಗಳಿಗೆ ಕಳೆದ 5 ದಿನಗಳಿಂದ ಮಠದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶ್ರೀಗಳ ಚೇತರಿಕೆಗೆ ಲಕ್ಷಾಂತರ ಭಕ್ತರು ಪ್ರಾರ್ಥನೆ, ಪೂಜೆ ನಡೆಸಿದ್ದರು. ಆದರೆ ನಿನ್ನೆ ಸಂಜೆ 6 ಗಂಟೆಗೆ ಸಿದ್ದೇಶ್ವರ ಸ್ವಾಮೀಜಿಗಳು ಇಹಲೋಕ ತ್ಯಜಿಸಿದ್ದಾರೆ. ಕಳೆದೆರಡು ದಿನ ಚೇತರಿಕೆ ಕಂಡಿದ್ದ ಶ್ರೀಗಳ ಆರೋಗ್ಯ ಇಂದು ತೀವ್ರ ಏರುಪೇರಾಗಿತ್ತು.
ನಿನ್ನೆ ಸಂಜೆ 6 ಗಂಟೆಗೆ 81 ವರ್ಷದ ಸಿದ್ದೇಶ್ವರ ಶ್ರೀಗಳ ವಿಧಿವಶರಾಗಿದ್ದಾರೆ ಎಂದು, ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದರು. ವಯೋಸಹಜ ಖಾಯಿಲೆಯಿಂದ ಶ್ರೀಗಳು ನಿಧನರಾಗಿದ್ದಾರೆ. ಇಂದು ಸಂಜೆ 5 ಗಂಟೆಗೆ ಅಂತ್ಯಕ್ರೀಯೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇನ್ನು ಸಂಜೆ 4 ಗಂಟೆಗೆ ಸರ್ಕಾರದಿಂದ ಗಾಡ್ ಆಫ್ ಹಾನರ್ ನೀಡಲಾಗುತ್ತದೆ. ಸಂಜೆ 5 ಗಂಟೆಗೆ ಸೈನಿಕ್ ಸ್ಕೂಲ್‌ನಿಂದ ಆಶ್ರಮಕ್ಕೆ ಪಾರ್ಥೀವ ಶರೀರ ವಾಪಸ್ ತರಲಾಗುತ್ತದೆ.
ಸಿದ್ದೇಶ್ವರ ಶ್ರೀಗಳ ಇಚ್ಚೆಯಂತೆ ಅಗ್ನಿಸ್ಪರ್ಶ ಮಾಡಿ ಅಂತ್ಯಕ್ರೀಯ ಮಾಡಲಾಗುತ್ತದೆ. ಇಷ್ಟೇ ಅಲ್ಲ ತಮ್ಮ ಯಾವುದೇ ಸಮಾಧಿಯನ್ನು ನಿರ್ಮಸಬಾರದು ಎಂದು ಶ್ರೀಗಳು ಆದೇಶ ನೀಡಿದ್ದರು. ತಮ್ಮ ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಲು ಸೂಚಿಸಿದ್ದಾರೆ. ಇಷ್ಟೇ ಅಲ್ಲ ತಮ್ಮ ಯಾವುದೇ ಗುಡಿ, ಸ್ಮಾರಕ ನಿರ್ಮಿಸಬಾರದು ಎಂದು 2014ರಲ್ಲಿ ಸೂಚಿಸಿದ್ದರು. ಇದೀಗ ಶ್ರೀಗಳ ಆದೇಶದಂತೆ ಅಂತಿಮ ವಿಧಿವಿಧಾನ ನೆಯಲಿದೆ.
ಇಂದು 5 ರಿಂದ 10 ಲಕ್ಷ ಭಕ್ತರು ಅಂತಿಮ ದರ್ಶನಕ್ಕೆ ಬರವು ನಿರೀಕ್ಷೆ ಇದೆ. ಸೈನಿಕ್ ಸ್ಕೂಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದು ಬೆಳ್ಗಗೆ 6 ಗಂಟೆಯಿಂದ 3 ಗಂಟೆ ವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ ಕೊಂಚ ಚೇತರಿಕೆ ಕಂಡಿದ್ದ ಶ್ರೀಗಳ ಆರೋಗ್ಯದಲ್ಲಿ ಸೋಮವಾರ ತೀವ್ರ ಹದಗೆಟ್ಟಿತ್ತು. ಆಹಾರ ಸೇವಿಸದ ಕಾರಣ ಸ್ಯಾಚುರೆಷನ್ ಪ್ರಮಾಣ ಕ್ಷೀಣಿಸುತ್ತಾ ಸಾಗಿತ್ತು. ಇತ್ತ ಉಸಿರಾಟದ ಸಮಸ್ಯೆಯೂ ತೀವ್ರಗೊಂಡಿತ್ತು. ಬೆಳಗ್ಗೆ ಗಂಜಿ ಕುಡಿದಿದ್ದ ಶ್ರೀಗಳು ಬಳಿಕ ಯಾವುದೇ ಆಹಾರ ಸೇವಿಸಿಲ್ಲ. ಇಷ್ಟೇ ಅಲ್ಲ ಆಸ್ಪತ್ರೆಗೆ ದಾಖಲಾಗಲು ಶ್ರೀಗಳು ನಿರಾಕರಿಸಿದ್ದರು. ಹೀಗಾಗಿ ಶ್ರೀಗಳ ಮಾತಿನಂತೆ ಮಠದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.
62 - 0
ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಹಾರ್ದಿಕ ಶುಭಾಶಯಗಳು
ಈ ಹಬ್ಬವು ಸರ್ವರಿಗೂ ಒಳಿತು ಮಾಡಲಿ ಎಂದು ಆಶಿಸುತ್ತೇನೆ.
#VaikunthaEkadashi 🙏💐
87 - 1
ಹೊಸ ವರ್ಷದ ಆರಂಭ ನಿಮಗೆ ಅದ್ಭುತ ಯಶಸ್ಸನ್ನು ತಂದು ಕೊಡಲಿ. ಅನಂತ ಸುಖ, ಶಾಂತಿ, ಸಂಪತ್ತು ನಿಮ್ಮದಾಗಲಿ. ಹೊಸ ವರ್ಷ 2023 ರ ಹಾರ್ದಿಕ ಶುಭಾಶಯಗಳು 💐
165 - 1
ಸ್ವಾತಂತ್ರ್ಯದ ಸಂಗ್ರಾಮದಿಂದ ಹಿಡಿದು ಇಂದಿನ ಆಧುನಿಕ ಭಾರತದ ನಿರ್ಮಾಣದವರೆಗೆ ದೇಶಕ್ಕಾಗಿ ತನ್ನನ್ನು ಅರ್ಪಿಸಿಕೊಂಡು ದುಡಿಯುತ್ತಾ ಬಂದಿರುವ, ಶತಮಾನಕ್ಕೂ ಹೆಚ್ಚಿನ ಇತಿಹಾಸವುಳ್ಳ ಪಕ್ಷ ಕಾಂಗ್ರೆಸ್ ಪಕ್ಷ.
ಹೋರಾಟ, ಜಾತ್ಯಾತೀತತೆ, ಸಮಾಜವಾದ, ಸೌಹಾರ್ದತೆ, ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಡೆದು ಬಂದಿರುವ ಈ ಪಕ್ಷದ ತತ್ವ - ಸಿದ್ಧಾಂತಗಳಿಗಾಗಿ ಇಂದು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಕುಟುಂಬದ ನನ್ನೆಲ್ಲಾ ಆತ್ಮೀಯರಿಗೆ ಕಾಂಗ್ರೆಸ್ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
#CongressFoundationDay
218 - 1
ರಾಜ್ಯ ಕಂಡ ಸರಳ - ಸಜ್ಜನ ರಾಜಕಾರಣಿ, 5 ದಶಕಗಳ ಕಾಲ ನಾಡಿನ ಸೇವೆ ಸಲ್ಲಿಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಧರಂ ಸಿಂಗ್ ಅವರ ಜನ್ಮ ಜಯಂತಿಯಂದು ಅವರನ್ನು ಮನದುಂಬಿ ನೆನೆಯುತ್ತೇನೆ.
ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಅವರು ನನಗೆ ನೀಡಿದ ಮಾರ್ಗದರ್ಶನ ಸದಾ ಪ್ರೇರಣಾದಾಯಕ. 🙏💐
213 - 0