in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಪಾಸ್ಪೋರ್ಟ್ ನಾಳೆ ನನ್ನ ಕೈ ಸೇರುತ್ತೆ. ನಾನು ನಾಗಪಟ್ಟಣಂ ಹತ್ರ ಸೈಕಲ್ ಬಿಟ್ಟು ಬಂದಿದ್ದೆ, ಇವಾಗ ಬೆಂಗಳೂರಿನಿಂದ ನಾಗಪಟ್ಟಣಂ Hitchhiking (Lift ತಕ್ಕೊಂಡು ಹೋಗೋದು) ಮಾಡ್ಲ ಅಥವಾ ಬಸ್ ಅಲ್ಲಿ ಹೋಗ್ಲ?
51 - 13
ನನ್ನ ಪ್ರಯಾಣ, ನನ್ನ ಕನಸುಗಳು ಇನ್ನೂ ಜೀವಂತವಾಗಿರುವುದಕ್ಕೆ ನಾನು ಎಂದೂ ಭೇಟಿಮಾಡದ - ಯಾವತ್ತು ಅವರ ಜೊತೆ ಮಾತನಾಡದ ಜನರ ಪ್ರೀತಿ ಪಾತ್ರ ತುಂಬಾ ಇದೆ.
ಎಷ್ಟೋ ಸಲ ಯಾವುದಾವುದೋ ಕಾರಣಗಳಿಂದ ಹಲವು ಭಾರಿ ನನ್ನ ಕನಸುಗಳನ್ನ ಕೊಲ್ಲುವ ಯೋಚನೆ ಬರುತ್ತವೆ ನಾನು ಎಲ್ಲರ ಕಮೆಂಟ್ ಗೆ ಉತ್ತರ ನೀಡಲು ಸಾಧ್ಯವಾಗದಿದ್ದರೂ ಎಲ್ಲರ ಕಮೆಂಟ್ ತಪ್ಪದೇ ಓದಿರುತ್ತೇನೆ.
ಕೆಲವೊಂದು ಮನ ಮುಟ್ಟುವ ಪ್ರೀತಿಯ ನುಡಿಗಳು ನನ್ನ ಕನಸುಗಳನ್ನು ಇನ್ನು ಜೀವಂತವಾಗಿರಿಸಿದೆ.
ನನ್ನ ಆತ್ಮೀಯ ಬಳಗದಲ್ಲಿ ಇರುವ ಹಲವರು ಯಾವತ್ತೂ ಅಪರೂಪಕ್ಕೆ ಒಂದು ಕಮೆಂಟ್ ಹಾಕ್ತಾರೆ, ಅಪರೂಪಕ್ಕೆ ನನ್ನ Profile ನೋಡ್ತಾರೆ ಆದರೆ ಅದೆಷ್ಟೋ ಜನ "ಗುರು ಯಾಕ್ ವಿಡಿಯೋ ಹಾಕಿಲ್ಲ , ಯಾವಾಗ ವಿಡಿಯೋ ಬರತ್ತೆ, ಈ ವಿಡಿಯೋ ಚನಾಗಿಲ್ಲ , ಅದನ್ನ ಬದಲಾವಣೆ ಮಾಡ್ಕೊಳಿ , ಇದು ತಪ್ಪು" ಅಂತ ಯಾವಾಗಲೂ ನನ್ನನ್ನ ತಿದ್ದುತ್ತಿರುತ್ತಾರೆ ನಿಮ್ಮೆಲ್ಲರಿಗೂ ನನ್ನ ಮನಃಪೂರ್ವಕ ಧನ್ಯವಾದಗಳು.
ಹಲವರು ಅಂದ್ರೆ ದೊಡ್ಡ ದೊಡ್ಡ ಕಂಟೆಂಟ್ Creators ನೇರವಾಗಿ msg ಮಾಡಿ ಗುರು ನೀನ್ ಸೂಪರ್ ಲಾಟ್ರಿ ಬಂಪರ್ ಅಂತೆಲ್ಲ ಕತೆ ಹೇಳ್ತಾರೆ, ಆದ್ರೆ ಕೆಲವೇ ಕೆಲವು ಜನ ನಿಜವಾದ ಬೆಂಬಲಿಗರು ನಾನ್ ಹಾಕುವ ಎಲ್ಲಾ Reel- post ಗಳನ್ನ story ಹಾಕ್ತಾರೆ ಎಲ್ಲಾಕಡೆ ಕಮೆಂಟ್ ಮಾಡ್ತಾರೆ, ನೀವೆಲ್ಲರೂ ನನ್ನ ಮೊದಲ ಆದ್ಯತೆ ಆಗಿರುತ್ತೀರಿ. ನಿಮ್ಮ ಪ್ರೀತಿ ಹೀಗೆಯೇ ಇರಲಿ.
239 - 1
ಬೆಳಗ್ಗೆ ಬಂದು ಪೋಸ್ ಕೊಡ್ತಾ ಇದ್ದ ಇವ್ರು ರಾತ್ರಿ ಟೆಂಟ್ ಹಾಕುವಾಗ ಬೇಡಪ್ಪ ಇಲ್ಲೆಲ್ಲ ಬೇಡ ನಾವೆಲ್ಲ ನೋಡ್ತಾ ಇದೀವಿ ಟಿವಿಗಳಲ್ಲಿ (ಹಿಂದಿ ಭಾಷಿಕರು) ತುಂಬಾ ತೊಂದರೆಗಳಾಗುತ್ತಿವೆ ನೀನಿಲ್ಲಿ ಇರೋದು ಬೇಡ ಬೇರೆ ಎಲ್ಲಾದರೂ ಹೋಗು ಅಂತ ಒಂದೇ ಉಸಿರಿಗೆ ಹೇಳಿಬಿಟ್ಟರು.
ಅಯ್ಯಾ ನಾ ಅಪ್ಪಡಿ ಎಲ್ಲಾ ಪಣ್ಣ ಮಾಟೆ ಉಂಗಳುಕು ವೇಣುನಾ ಎನ್ನೋಡ ID ಕಾಮಿಕಿರೆ (ತಮಿಳು ಭಾಷೆ) ಅಂತೆಲ್ಲ ಹೇಳಿ ಅವರಿಗೆ ಮನವೊಲಿಸಿ ಟೆಂಟ್ ಹಾಕಿದೆ, ರಾತ್ರಿ ಅವರೇ ಬಂದು ಬೆಂಕಿ ಹಾಕಿಕೊಟ್ಟರು ಹಾಡೆಲ್ಲ ಹಾಕ್ಕೊಂಡು ಸ್ವಲ್ಪ ಹೊತ್ತು ಕಾಲ ಕಳೆದೆ.
ಬೆಳಗ್ಗೆ ನನ್ನ ಪಾಡಿಗೆ ನಾನ್ ಎದ್ದು ಸೂರ್ಯೋದಯ ನೋಡಿಕೊಂಡು ಡ್ರೋನ್ ಹಾರಿಸ್ತಾ ಇದ್ದೆ ಅವಾಗ ಬಂದು ಕುತೂಹಲದಿಂದ ನೋಡ್ತಾ ಇದ್ರು ಹಂಗೆ ಒಂದು ಪಟ ತಕ್ಕೊಂಡೆ.
ಈ So called travelling ಅಂದ್ರೆ ಹೋಗಿ ಹಂದಿ ನಾಯಿ ಥರ ಜಗಳ ಆಡಿ ನಮ್ಮೂರ (ಕರ್ಣಾಟಕ) ಹೆಸ್ರು ಹಾಳು ಮಾಡೋದ್ ಅಲ್ಲ.
ಎಲ್ಲೇ ಹೋದ್ರು ನಮ್ಮತನ ಅಂದ್ರೆ ಪ್ರೀತಿ ಹಂಚಿ ಬರೋದು ನಾವು ಭೇಟಿ ಮಾಡಿದ ಜನರಲ್ಲಿ ಹಿಂಗೊಬ್ಬ ಬಂದಿದ್ದ ಒಳ್ಳೆ ಹುಡುಗ ಅಂತ ಅವರ ಮನದಲ್ಲಿ ಶಾಶ್ವತವಾಗಿ ನೆಲೆಯೂರುವುದು.
573 - 4
ಇಂದಿನಿಂದ ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆಯೋಣ, ಎಂದಿನಂತೆ ನಿಮ್ಮ ಸಹಕಾರ ಇರಲಿ
ವಿಶ್ವ ಪರ್ಯಟನೆಯ ಎಂಟನೇ ದೇಶ ಶ್ರೀಲಂಕಾ, ಶ್ರೀಲಂಕಾ ಪ್ರವಾಸಕ್ಕೆ @kaadgal_resort @beaufortworldclub ಹಾಗೂ @mobilex_mx ರವರ ಪ್ರಾಯೋಜಕತ್ವವಿದೆ, ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.
ಬಟ್ಟೆಗಳ ಪ್ರಾಯೋಜಕರು @ka53mensclub32
ಶಾಲಾ ಕಟ್ಟಡದ ಮುಂದಿನ ರೂಪುರೇಷೆಗಳನ್ನು ಆದಷ್ಟು ಬೇಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ
ಇದಕ್ಕೆಲ್ಲ ಕಾರಣ ನಿಮ್ಮಗಳ ಪ್ರೀತಿ ಬೆಂಬಲ, ನಿಮ್ಮ ಆಶೀರ್ವಾದ ಯಾವಾಗಲೂ ಹೀಗೆಯೇ ಇರಲಿ
633 - 19
ಏನಾಗಿದೆ ಅಂದ್ರೆ ಹಳೆ ಹಾರ್ಡ್ ಡಿಸ್ಕ್ (ಬೆಂಗಳೂರು - ಸಿಂಗಾಪುರ್ ವಿಡಿಯೋ ಇರೋದು) ಹಾಳಾಗಿದೆ ಹಂಗಾಗಿ ಹಳೇ ವಿಡಿಯೋ ಬರೋದು ಲೇಟ್ ಆಗತ್ತೆ ಇವತ್ತಿಂದ World Tour ವಿಡಿಯೋ ಬರತ್ತೆ
ಎಂದಿನಂತೆ ನಿಮ್ಮ ಮನೆಮಗನನ್ನು ಬೆಂಬಲಿಸಿ
https://youtu.be/1iekc-KdIuM
306 - 11
🇬🇧👇🏻
ನಿನ್ನೆ ರಾತ್ರಿ ರತ್ತನಕ್ ಬಾಚೆ ಅನ್ನೋ ಪಗೋಡಲ್ಲಿ ಉಳ್ಕೊಂಡಿದ್ದೆ ಮೇಲ್ ಫೋಟೋದಲ್ಲಿ ಇದರಲ್ಲಿ ಅವ್ರಿಗೆ 27 ವರ್ಷ ವಯಸ್ಸು, ರಾತ್ರಿ ಸಮಾರು 7-50 ರ ಸಮಯಕ್ಕೆ ಅವರ ಹತ್ರ ಒಪ್ಪಿಗೆ ಪಡೆದು ಬಿದಿರಿನ ಗುಡಿಸಿಲ ಒಳಗೆ ಟೆಂಟ್ ಹಾಕ್ಕೊಂಡು ಅಡುಗೆ ಮಾಡ್ಕಂಡು ಊಟ ಮಾಡಿ ಮಲಗಿದ್ದೆ.
ಒಳ್ಳೆ ಜನ ಇನ್ನೂ ಯುವಕರು ಇವರೆಲ್ಲ ಬೌದ್ಧ ಬಿಕ್ಕುಗಳಾಗಿ ಸನ್ಯಾಸ ದೀಕ್ಷೆ ತಕ್ಕೊಂಡಿದಾರೆ, ತುಂಬಾ ವಿಷಯ ಚರ್ಚೆ ಮಾಡಿದೆ ಅದ್ರಿಂದ ತುಂಬಾ ಕಲಿತೆ .
Last night, I stayed at the Pagoda where I set up camp for the night. In the photo above, you'll see the serene surroundings where I found refuge. The gentleman beside me is 27 years old, and we had a chat until about so many things, during which he graciously allowed me to pitch my tent inside the temple premises. I cooked and enjoyed a meal before retiring for the night.
Had a great conversation with some young men who have chosen to embark on the path of Buddhist monks. Learned a lot from our discussion, truly enlightening! 🏕️🙏 #PagodaStay #CulturalExchange #BuddhistMonks #travelencounters
328 - 5

373 - 1
India Nepal Bhutan Cycle Tour