100K subscribers •1K videos
ಗುರಿ
ಕರ್ನಾಟಕದ ಪಕ್ಷಿಗಳ ಕುರಿತು ಮಾಹಿತಿ ನೀಡುವ ವಿಶೇಷ ಚಾನೆಲ್ ಇದಾಗಿದೆ..ನನ್ನ ಹೆಸರು ವಿನಯ್ ಕುಮಾರ್. ಡಿ,
ಹವ್ಯಾಸವಾಗಿ ಪಕ್ಷಿಗಳ ವಿಡಿಯೋ ಮಾಡ್ತೀನಿ.... ಅವುಗಳ ಬಗ್ಗೆ ತಿಳಿಯಲು ಓದುತ್ತೀನಿ.ನಾನೇ ನನ್ನ ಕ್ಯಾಮೆರದಲ್ಲಿ ಸೆರೆಹಿಡಿದ ವಿಡಿಯೋ ನಿಮಗಾಗಿ ಇವೆ.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅಂತ ಬರೀ ಬಾಯಲ್ಲಿ ಹೇಳೋದಷ್ಟೇ ಅಲ್ಲ.ಒಂದಿಷ್ಟು ಹೊಣೆನೂ ಹೊರಬೇಕು ಗೆಳೆಯರೇ . ಇಂದಿನ ಮಕ್ಕಳಿಗೆ ನಮ್ಮ ಕಣ್ಣೆದುರು ಕಾಣುವ ಗಿಡ-ಮರ-ಪ್ರಾಣಿ-ಪಕ್ಷಿಗಳ ಬಗ್ಗೆ ಅಷ್ಟಾಗಿ ಮಾಹಿತಿನೇ ಇಲ್ಲ.ನನಗೂ ಸಹ ಈ ಹವ್ಯಾಸ ರೂಢಿಸಿಕೊಳ್ಳುವವರೆಗೂ ಪಕ್ಷಿಗಳ ಬಗ್ಗೆ ಅಷ್ಟೊಂದು ಮಾಹಿತಿಯೂ ಗೊತ್ತಿರಲಿಲ್ಲ.ವಿಡಿಯೋ ಮಾಡುತ್ತಾ, ಫೋಟೋ ತೆಗೆಯುತ್ತಾ ಪೂರ್ಣ ಚಂದ್ರ ತೇಜಸ್ವಿ ಸರ್ ಅವರ ಪುಸ್ತಕಗಳನ್ನು ಓದುತ್ತಾ ಹೋದಂತೆ ಪಕ್ಷಿಗಳ ಪರಿಚಯ ಆಗಲು ಶುರುವಾಯ್ತು.ಇದೊಂದು ಹುಚ್ಚು.ಯಾರಿಗೂ ಕಾಣದ ಪಕ್ಷಿಗಳು ಈ ಹಕ್ಕಿ, ಪಕ್ಷಿಗಳ ಹುಚ್ಚು ಹಿಡಿದ ನಮಗೆ ಕಾಣುತ್ತವೆ.
ನಾನೂ ಕಲಿತು, ಕಲಿತದ್ದನ್ನ ನಿಮಗೂ ತಿಳಿಸುವ ಹಂಬಲದೊಂದಿಗೆ ಈ ಚಾನೆಲ್ ಪ್ರಾರಂಭ ಮಾಡಿದ್ದೇನೆ.
ಸ್ನೇಹಿತರಿಗೂ, ಮಕ್ಕಳಿಗೂ, ಹವ್ಯಾಸಿಗರಿಗೂ ಶೇರ್ ಮಾಡಿ
ಇನ್ನೂ ಕಲಿಕಾರ್ಥಿ.... ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ ಹೇಳಿ. #birdsinfo @BIRDSPLANETKARNATAKA
-ನಿಮ್ಮ ವಿನಯ್ ಕುಲಾಲ್ ಅರಣ್ಯ #birdsplanetkarnataka