ನಮ್ಮ ನಮ್ಮಲ್ಲಿಯೇ ಸಾಮಾನ್ಯರಂತೆ ಜೀವಿಸಿ ಅಸಾಮಾನ್ಯ ಸಾಧನೆ ಮಾಡಿ ಹೆಸರನ್ನು ಅಜರಾಮರವಾಗಿರಿಸಿಕೊಂಡ ಸಾಧಕರ ಪರಿಚಯ ಹಾಗೂ ಅವರ ಕುರಿತ ಸ್ವಾರಸ್ಯಕರವಾದ ಕಥೆಗಳನ್ನು ಹೇಳುವುದು, ಅವರ ಆದರ್ಶಗಳು ಯುವಪೀಳಿಗೆಗೆ ತಿಳಿಯಪಡಿಸುವುದು, ನಮ್ಮ ಸುತ್ತಮುತ್ತಲು ಇರುವ ಅನೇಕ ತೆರೆಮರೆಯ ಸಾಧಕರ ಸಾಧನೆಯ ಮೇಲೆ ಬೆಳಕು ಚೆಲ್ಲಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವುದು, ವಿಶೇಷ ಪ್ರತಿಭೆ ಹಾಗೂ ವಿನೂತನ ಸಾಧಕರ ಸಂದರ್ಶನ, ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು, ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳ ಪರಿಚಯ, ಇತಿಹಾಸ ಹೇಳುವುದು ಹಾಗೂ ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು, ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲ ನೈಜ ತೆರೆಮರೆಯ ಸಾಧಕರ ವಿಶೇಷ ಸಂಚಿಕೆಗಳನ್ನು ಮಾಡುವುದು, ಅಳಿದು ಹೋಗುತ್ತಿರುವ ಅವಶೇಷ ಹಾಗೂ ಪಾರಂಪರಿಕ ಸ್ಥಳ ಸಂರಕ್ಷಣಾ ಮಾಹಿತಿ ನೀಡುವುದು, ಹೊಸ ಹೊಸ ಕಲೆಗಳಿಗೆ ಪ್ರೋತ್ಸಾಹ ನೀಡುವುದು, ಸಾಮಾಜೀಕ ಜಾಗೃತಿ ಮೂಡಿಸುವ ಕಥೆ, ಕವನ, ಸಾಹಿತ್ಯ, ಗಾಯನ, ಗಝಲ್ ಇತ್ಯಾದಿಗಳನ್ನು ಪ್ರಸ್ತುತಪಡಿಸುವುದು ಹಾಗೂ ನನ್ನ ಗಮನಕ್ಕೆ ಬರುವಂತಹ ಸತ್ಯ, ನೈಜ ಘಟನೆಗಳ ಅನಾವರಣ ಮಾಡುವುದಾಗಿದೆ..