ಎಲ್ಲ ಮಕ್ಕಳೂ ಆಟವನ್ನು ತುಂಬ ಇಷ್ಟಪಡುತ್ತಾರೆ.ಕಲಿಕೆಯನ್ನೂ ಒಂದು ಆಟವಾಗಿ ಪರಿಗಣಿಸಿದಾಗ ಆ ಕಲಿಕೆಯ ಮೇಲೂ ಒಂದು ಪ್ರೀತಿ ಹುಟ್ಟುತ್ತದೆ.ಹಾಗೆ ಹುಟ್ಟಿದ ಪ್ರೀತಿ ಕಲಿಕೆಯನ್ನು ಸುಲಭಗೊಳಿಸುತ್ತದೆ.
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಪ್ರಾರಂಭವಾದ ನಮ್ಮ ಮಕ್ಕಳಾಟಿಕೆಯ ಚಾನೆಲ್ ನಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗುವ,ಮಕ್ಕಳ ಕಲಿಕೆಯ ಪ್ರಯತ್ನದ ಅನಾವರಣ ಮಾಡುವ,ಮಕ್ಕಳಿಗೆ ಸ್ವಾವಲಂಬಿ ಜೀವನ ಪಾಠ ತಿಳಿಸಿಕೊಡುವ , ಸಾಮಾನ್ಯಜ್ಞಾನವನ್ನು ಹೆಚ್ಚಿಸುವ , ಪಠ್ಯೇತರವಾದ ಸಾಂಸ್ಕೃತಿಕ ಚಟುವಟಿಕಗಳ ಬಗ್ಗೆ ಆಸಕ್ತಿ ಮೂಡಿಸುವ ಹೀಗೆ ವಿವಿಧ ಆಯಾಮಗಳ ವಿಡಿಯೋಗಳು ಇಲ್ಲಿ ಪ್ರಸಾರವಾಗಲಿವೆ. ಪ್ಲೇಲೀಷ್ಟಲ್ಲಿ ಇವೆಲ್ಲವೂ ಪ್ರತ್ಯೇಕವಾಗಿ ಸಿಗಲಿವೆ.
ಮಕ್ಕಳಿಂದ,ಮಕ್ಕಳಿಗಾಗಿ,ಮಕ್ಕಳಿಗೋಸ್ಕರ ಇರುವ ಈ ಚಾನೆಲನ್ನು ತಾವೆಲ್ಲರೂ ಪ್ರೀತಿಯಿಂದ ಸ್ವೀಕರಿಸಿ,ಸದಾ ಪ್ರೋತ್ಸಾಹಿಸುತ್ತಿರಿ ಎಂದು ಕೋರಿಕೊಳ್ಳುತ್ತೇವೆ.
ನನಗೆ ಈ ಚಾನೆಲ್ ಪ್ರಾರಂಭಿಸಲು ಮತ್ತು ವಿಡಿಯೋ ಮಾಡಲು , ಎಡಿಟಿಂಗ್ ಮಾಡಲು ಸೂಕ್ತ ಸಲಹೆಗಳನ್ನಿತ್ತು,ಸದಾ ನನ್ನ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ ಸಹಕರಿಸುತ್ತಿರುವವರಿಗೆ ಪ್ರೀತಿಯಿಂದ ಧನ್ಯವಾದಗಳು.ನಿಮ್ಮ ಸಹಕಾರ ಸದಾ ಹೀಗೆಯೇ ಇರಲಿ.🙏
ಯಕ್ಷಗಾನ - ತಾಳಮದ್ದಳೆಗಳ ಸಂಗ್ರಹಕ್ಕಾಗಿ ಇರುವ ನನ್ನ ಈ ಚಾನೆಲ್ ಗೂ ಸಬ್ಸ್ಕೈಬ್ ಆಗಿ.ಪ್ರೋತ್ಸಾಹಿಸಿ.
youtube.com/@smitha799