Channel Avatar

UK 1PLUS NEWS @UCEFR-PHBIl-7737p9s9CH5w@youtube.com

5.4K subscribers - no pronouns :c

ಜನ ಸೇವೆಯೇ ಜನಾರ್ಧನ ಸೇವೆ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

UK 1PLUS NEWS
Posted 4 hours ago

ಬೆಂಗಳೂರಿಗೆ ಆಗಮಿಸುತ್ತಿರುವ ಭಾರತ ಸರ್ಕಾರದ ಜನಪ್ರಿಯ ಗೃಹ ಹಾಗೂ ಸಹಕಾರಿ ಸಚಿವರು ಹಾಗೂ ಪಕ್ಷ ಸಂಘಟನೆಯ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ Amit Shah ಜೀ ಅವರಿಗೆ ಗೌರವ ಪೂರ್ವಕ ಸ್ವಾಗತ.

14 - 1

UK 1PLUS NEWS
Posted 1 day ago

ಅಥಣಿ ತಾಲೂಕಿನ ಸವದಿಯಲ್ಲಿ ಇಂದು ಪೂಜ್ಯ ಶ್ರೀ ಲಿಂ. ಸಂಗನಬಸವ ಶಿವಯೋಗಿಗಳವರ 83 ನೆಯ ಸ್ಮರಣೋತ್ಸವ ಹಾಗೂ ಪೂಜ್ಯ ಶ್ರೀ ಡಾ. ಮಹಾಂತ ಶಿವಯೋಗಿಗಳವರ 7 ನೆಯ ಸ್ಮರಣೋತ್ಸವ ಶುಭ ಸಂದರ್ಭದಲ್ಲಿ ಆಯೋಜಿಸಲಾದ ಶರಣ ಸಂಸ್ಕೃತಿ ಮಹೋತ್ಸವ- 2025 ರಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಪಡೆದರು
#priyankajarkiholi
#athani

46 - 0

UK 1PLUS NEWS
Posted 1 day ago

ಹಿಂದೂಸ್ತಾನಿ ಸಂಗೀತ ಲೋಕದ ಮೇರು ಗಾಯಕರು, ಸ್ವರ ಶಿರೋಮಣಿ ಎಂದೇ ಖ್ಯಾತರಾಗಿದ್ದ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಜನ್ಮದಿನದ ಈ ದಿನದಂದು ಆ ಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳು.

ಸಂಗೀತ ಕ್ಷಿತಿಜವನ್ನು ವಿಸ್ತಾರಗೊಳಿಸಿ ಅಚ್ಚಳಿಯದ ಗಾನ ಸಂಪತ್ತನ್ನು ನಮಗೆ ಕೊಟ್ಟು ಹೋಗಿರುವ ಅವರನ್ನು ಸ್ಮರಿಸೋಣ.
#ಗಂಗೂಬಾಯಿಹಾನಗಲ್

59 - 0

UK 1PLUS NEWS
Posted 1 day ago

ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಸಂಗೀತ ಶಿರೋಮಣಿ, ಪದ್ಮವಿಭೂಷಣ ದಿ. ಡಾ. ಗಂಗೂಬಾಯಿ ಹಾನಗಲ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
#GangubaiHangal

44 - 0

UK 1PLUS NEWS
Posted 1 day ago

ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಸಂಗೀತ ಶಿರೋಮಣಿ, ಪದ್ಮವಿಭೂಷಣ ದಿ. ಡಾ. ಗಂಗೂಬಾಯಿ ಹಾನಗಲ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
#GangubaiHangal

67 - 0

UK 1PLUS NEWS
Posted 1 day ago

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮಹಾನ್ ಗಾಯಕಿ, ಪದ್ಮವಿಭೂಷಣ ನಾಡೋಜ ಗಂಗೂಬಾಯಿ ಹಾನಗಲ್ ಅವರ ಪುಣ್ಯ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ತಮ್ಮ ಅಪ್ರತಿಮ ಗಾನಸುಧೆಯಿಂದ ಅವರು ಕರ್ನಾಟಕದ ಕೀರ್ತಿಯನ್ನು ಜಗದಗಲ ಬೆಳಗಿದರು.
#GangubaiHanagal

48 - 0

UK 1PLUS NEWS
Posted 1 day ago

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮಹಾನ್ ಗಾಯಕಿ, ಪದ್ಮವಿಭೂಷಣ ನಾಡೋಜ ಗಂಗೂಬಾಯಿ ಹಾನಗಲ್ ಅವರ ಪುಣ್ಯ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ತಮ್ಮ ಅಪ್ರತಿಮ ಗಾನಸುಧೆಯಿಂದ ಅವರು ಕರ್ನಾಟಕದ ಕೀರ್ತಿಯನ್ನು ಜಗದಗಲ ಬೆಳಗಿದರು.
#GangubaiHanagal

36 - 0

UK 1PLUS NEWS
Posted 3 days ago

*ಸರಕಾರಿ ನೌಕರರ ಸಂಘದ ಮೂಡಲಗಿ ಘಟಕದ ದಿನಾದರ್ಶಿಕೆಯನ್ನು ಬಿಡುಗಡೆ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

*ಮೂಡಲಗಿ -* ಸರ್ಕಾರಿ ನೌಕರರು ತಮ್ಮ ಇಲಾಖೆಯ ಕರ್ತವ್ಯದ ಜೊತೆಗೆ ನೌಕರರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.
ಇತ್ತೀಚೆಗೆ ತಾಲೂಕಿನ ದುರದುಂಡಿ ಗ್ರಾಮದಲ್ಲಿ ಸರಕಾರಿ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದಿಂದ ಹೊರತಂದ ಪ್ರಸ್ತುತ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೊದಲು ನಿಮ್ಮ ಕಚೇರಿಯ ಸೇವೆ ಜೊತೆಗೆ ಸಂಘದ ಅಹವಾಲುಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಅವರು ತಿಳಿಸಿದರು.
ಹಿರಿಯರ ಮಾತಿಗೆ ಬೆಲೆ ಕೊಟ್ಟು ಮೂಡಲಗಿ ತಾಲ್ಲೂಕು ನೌಕರರ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ಸಂತಸ
ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮೂಡಲಗಿ ಘಟಕದ ಆಶ್ರಯದಲ್ಲಿ ಹೊರತಂದ ದಿನದರ್ಶಿಕೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಡುಗಡೆ ಮಾಡಿದರು.
ನೌಕರರ ಸಂಘದ ಅಭಿವೃದ್ಧಿಗೆ ದುಡಿಯಬೇಕು. ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಗಾ ವಹಿಸಬೇಕು. ನಿಮ್ಮ ಯಾವುದೇ ಕೆಲಸವಿರಲಿ. ನನ್ನ ಗಮನಕ್ಕೆ ತಂದರೆ ಮಾಡಿಕೊಡುತ್ತೇನೆ. ಸಂಘದ ಪ್ರಗತಿಗೂ ಸಹ ತನು ಮನದಿಂದ ಶ್ರಮಿಸುವ ಭರವಸೆ ನೀಡಿದರು.
ಸರ್ಕಾರಿ ನೌಕರರ ಸಂಘದ ಮೂಡಲಗಿ ಘಟಕದ ಅಧ್ಯಕ್ಷ
ಆನಂದ ಹಂಜಾಗೋಳ,
ಚೇತನ ಕುರಿಹುಲಿ,ಸದಾಶಿವ ದೇವರ, ಸಿದ್ದಣ್ಣ ಕರೋಲಿ,
ಕೆ.ಆರ್.ಅಜ್ಜಪ್ಪನವರ,
ರಾಮಚಂದ್ರ ಸಣ್ಣಕ್ಕಿ,
ಸಿದ್ಧಾರೂಢ ನಾಗನೂರ,
ವಿ.ಎ.ಹುಲ್ಲಾರ, ಎಸ್ ಐ ಸೌದತ್ತಿ, ಸಂಜು ಕೌಜಲಗಿ,
ಮಹಾಂತೇಶ್ ಹಿಪ್ಪರಗಿ,
ರಾಜು ಕೊಳದೂರ, ಸಲೀಂ ಚಾವುಸ್,ಪ್ರಕಾಶ್ ಮೋರೆ,
ಗಣಪತಿ ಖಾನಟ್ಟಿ,ಚನ್ನಬಸಪ್ಪ ನಾವಿ, ಭೀಮಪ್ಪ ಗೋರಕನಾಥ ಮುಂತಾದವರು ಉಪಸ್ಥಿತರಿದ್ದರು.

72 - 0

UK 1PLUS NEWS
Posted 3 days ago

ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ನೇಮಕಗೊಂಡ ವಿಧಾನ ಪರಿಷತ್‌ ಸದಸ್ಯರಾದ ಶ್ರೀ N Ravi Kumar ಅವರಿಗೆ ಅಭಿನಂದನೆಗಳು.

38 - 0

UK 1PLUS NEWS
Posted 3 days ago

ಆತ್ಮೀಯ ಎಲ್ಲ ಮಾಧ್ಯಮದ ಮಿತ್ರರೆ,
ಒಂದು ಕಿಡ್ನಾಪ್ ಪ್ರಕರಣದಲ್ಲಿ ಓರ್ವ ಮಹಿಳೆ ಸಿಲುಕಿದ್ದು, ಅವಳು ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಹಾಗೂ ಕಾರ್ಯಕರ್ತೆ ಹಾಗೂ ಸಚಿವರ ಜೊತೆ ತೆಗೆದ ಫೋಟೋ ಹಾಕಿ ಅವರ ಆಪ್ತರು ಅಂತ ಮಾದ್ಯಮದಲ್ಲಿ ಸುದ್ದಿ ಬರುತ್ತಿದ್ದು
ಸ್ಪಷ್ಟಿಕರಣ ಕೊಡಲು ಬಯಸುತ್ತೇನೆ.
ಅವಳು ನಮ್ಮ ಮಹಿಳಾ ಕಾಂಗ್ರೆಸ್ ನ ಯಾವುದೇ ಹುದ್ದೆ ಹೊಂದಿಲ್ಲ ಹಾಗೂ ನಮ್ಮಪಕ್ಷದ ಕಾರ್ಯಕರ್ತೆ ಸಹ ಅಲ್ಲ. ಈಗಾಗಲೇ ನಮ್ಮ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸ್ಪಷ್ಟನೆ ಕೊಟ್ಟಿದ್ದಾರೆ.
ಸನ್ಮಾನ್ಯ ಸಚಿವರೊಂದಿಗೆ ಸಾರ್ವಜನಿಕ ಜೀವನದಲ್ಲಿ ಸಾವಿರಾರು ಜನ ಕಾರ್ಯಕ್ರಮ ಗಳಲ್ಲಿ ಭೇಟಿಯಾಗುತ್ತಾರೆ, ಹಲವಾರು ಸಂಘಟನೆಯವರು ಫೋಟೋ ತೆಗೆಸಿಕೊಂಡಿರುತ್ತಾರೆ ಅದನ್ನೇ ಅವರ ಆಪ್ತರು ಅನ್ನುವಧಿಕ್ಕಾಗುವದಿಲ್ಲ. ಕಾಂಗ್ರೆಸ್ ಪಕ್ಷದೊಂದಿಗೆ ಹಾಗೂ
ಸಚಿವರೊಂದಿಗೆ ಈ ಘಟನೆಯಲ್ಲಿ ಪಾಲ್ಗೊಂಡ ಯಾರೂ ಸಂಬಂಧ ಇಲ್ಲ ಎಂದು ಈ ಮೂಲಕ ಸ್ಪಷ್ಟಿಕರಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ನೀಡುತ್ತಿದ್ದೇನೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ವಿನಯ ನಾವಲಗಟ್ಟಿ
ಜಿಲ್ಲಾಧ್ಯಕ್ಷರು
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ

5 - 0