ಈ ವಿಶಾಲ ಬ್ರಹ್ಮಾಂಡ ದಲ್ಲಿರುವ ಕೋಟ್ಯಂತರ ಗ್ಯಾಲಕ್ಸಿ ಗಳಲ್ಲಿ ಪುಟ್ಟ ಗ್ಯಾಲಕ್ಸಿ ನಮ್ಮ ಆಕಾಶಗಂಗೆ.. ಅದರಲ್ಲಿರುವ ಕೋಟ್ಯಂತರ ನಕ್ಷತ್ರ ಗಳಲ್ಲಿ ಪುಟ್ಟದೊಂದು ನಕ್ಷತ್ರ ನಮ್ಮ ಈ ಸೂರ್ಯ... ಅವನಿಗಿರುವ 9 ಗ್ರಹಗಳಲ್ಲಿ ಒಂದು ಪುಟ್ಟ ಗ್ರಹ ನಮ್ಮ ಈ ಭೂಮಿ..!
ಆ ಭೂಮಿಯ 70 ಭಾಗ ನೀರು ,30 ಭಾಗವಷ್ಟೇ ನೆಲ... ಅದರಲ್ಲಿ ಅನೇಕ ದೇಶಗಳು, ಅನೇಕ ಧರ್ಮಗಳು, ಅನೇಕ ನಂಬಿಕೆಗಳು, ಆಚರಣೆಗಳು ದೇವ ಮಾನವರು... ದೇವ ದೂತರು!!! ತಮ್ಮ ನಂಬಿಕೆಯಷ್ಟೇ ಸರಿ.. ಉಳಿದವರದು ತಪ್ಪು ಎಂಬ ಹುಂಬತನ, ಯುದ್ಧಗಳು... ಧರ್ಮ - ದೇವರ ಹೆಸರಿನಲ್ಲಿ ಅನಾಚಾರ ಗಳು... ಒಂದಾ ಎರಡಾ....
ಹಾಗಾದರೆ ಇದರಲ್ಲಿ ಯಾವುದು ಸತ್ಯ? ಎಂಬ ನನ್ನ ಈ ಹುಡುಕಾಟ ದಲ್ಲಿ.... ಅನೇಕ ಮತ - ಪಂಥದ ಅಧ್ಯಯನ, ಅನೇಕ ಸಿದ್ಧ ಸಾಧಕರ ಒಡನಾಟ, ನನ್ನ ಸಾಧನೆ... ಅನುಭವ, ಅಲೆದಾಟ, ಅಧ್ಯಯನ ದ ನಂತರ ನಾನು ಕಂಡ ಸತ್ಯವನ್ನು ನಿಮ್ಮೆದುರು ಅನಾವರಣ ಗೊಳಿಸುವುದು ಈ ವಾಹಿನಿಯ ಉದ್ದೇಶ... ಒಪ್ಪಿಸಿಕೊಳ್ಳಿ 🙏🏻