in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಉತ್ಪನ್ನ ಏಕಾದಶಿ ವ್ರತ ಕಥಾ
ಉತ್ಪನ್ನ ಏಕಾದಶಿಗೆ ಸಂಬಂಧಿಸಿದ ಪೌರಾಣಿಕ ಕಥೆಯ ಪ್ರಕಾರ, ಸತ್ಯಯುಗದಲ್ಲಿ, ನಾಡಿ ಜಂಘ ಎಂಬ ರಾಕ್ಷಸನಿದ್ದನು, ಅವನ ಮಗ ಮುರ. ಮುರಾ ಅತ್ಯಂತ ಶಕ್ತಿಶಾಲಿ ಮತ್ತು ಶಕ್ತಿಶಾಲಿ. ಅವರು ಇಂದ್ರ, ವರುಣ, ಯಮ, ಅಗ್ನಿ, ವಾಯು, ಈಶ್, ಚಂದ್ರ ಮತ್ತು ನೈರಿತಿ ಸೇರಿದಂತೆ ವಿವಿಧ ದೇವತೆಗಳ ಕ್ಷೇತ್ರಗಳನ್ನು ವಶಪಡಿಸಿಕೊಂಡರು.
ಎಲ್ಲಾ ದೇವರುಗಳು ಅವನಿಂದ ಯುದ್ಧದಲ್ಲಿ ಸೋಲಿಸಲ್ಪಟ್ಟರು ಮತ್ತು ಅಂತಿಮವಾಗಿ ಕೈಲಾಸ ಪರ್ವತದ ಮೇಲೆ ಶಿವನನ್ನು ಆಶ್ರಯಿಸಿದರು.
ಆಗ ಶಿವನು ದೇವತೆಗಳಿಗೆ ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಭಗವಾನ್ ವಿಷ್ಣುವನ್ನು ಸಂಪರ್ಕಿಸಲು ಸಲಹೆ ನೀಡಿದನು.
ಭಗವಾನ್ ವಿಷ್ಣುವು ಮುರ ಎಂಬ ರಾಕ್ಷಸನಿಂದ ದೇವತೆಗಳನ್ನು ರಕ್ಷಿಸಲು, ಯುದ್ಧಭೂಮಿಗೆ ಆಗಮಿಸಿ ಮುರ ಮತ್ತು ಅವನ ಸೈನ್ಯದೊಂದಿಗೆ ಯುದ್ಧದಲ್ಲಿ ತೊಡಗಿದನು. ಭಗವಾನ್ ವಿಷ್ಣು ಮತ್ತು ಮುರ ನಡುವಿನ ಯುದ್ಧವು 10,000 ವರ್ಷಗಳ ಕಾಲ ನಡೆಯಿತು. ಪದೇ ಪದೇ ಛಿದ್ರಗೊಂಡರೂ ಮತ್ತು ಹೊಡೆದುರುಳಿಸಿದರೂ, ದೀರ್ಘಕಾಲದ ಯುದ್ಧದಲ್ಲಿ ಮುರಾ ಸೋಲಲಿಲ್ಲ ಅಥವಾ ಸಾಯಲಿಲ್ಲ.
ದೇವಿ ಏಕಾದಶಿಯ ಮೂಲ
ಭಗವಾನ್ ವಿಷ್ಣುವು ಯುದ್ಧದಿಂದ ಸಂಪೂರ್ಣವಾಗಿ ದಣಿದಿದ್ದನು ಮತ್ತು ವಿಶ್ರಾಂತಿಗಾಗಿ ಬದರಿ ಕಾಶ್ರಮ್ ಗುಹೆಗೆ ಹೋದನು.
ಆದಾಗ್ಯೂ, ಮುರಾ ಅಲ್ಲಿಯೂ ಅವನನ್ನು ಹಿಂಬಾಲಿಸಿದನು. ಭಗವಾನ್ ವಿಷ್ಣುವು ವಿಶ್ರಾಂತಿ ಪಡೆಯುತ್ತಿರುವಾಗ ಮುರನು ಹೊಡೆಯಲು ಮುಂದಾದಾಗ, ಭಗವಾನ್ ವಿಷ್ಣುವಿನ ದೇಹದಿಂದ ತೇಜಸ್ವಿ ದೇವತೆ ಹೊರಹೊಮ್ಮಿ ಮುರನನ್ನು ಕೊಂದಳು.
ಭಗವಾನ್ ವಿಷ್ಣುವು ಎಚ್ಚರಗೊಂಡಾಗ, 'ದೇವಿ, ನೀನು ಮಾರ್ಗಶೀರ್ಷ ಮಾಸದ ಕೃಷ್ಣ ಪಕ್ಷ ಏಕಾದಶಿಯಂದು ನನ್ನ ದೇಹದಿಂದ ಜನಿಸಿದೆ, ಆದ್ದರಿಂದ ನಿನ್ನ ಹೆಸರು ಏಕಾದಶಿ, ಮತ್ತು ಈ ದಿನ ನಿನ್ನನ್ನೂ ಪೂಜಿಸಲಾಗುತ್ತದೆ' ಎಂದು ಹೇಳಿದರು.
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
39 - 0
🌺..ಆದ್ಯಂತ ಪ್ರಭು..
ಒಂದೆ ವಿಗ್ರಹದಲ್ಲಿ ಅರ್ಧ ಗಣೇಶ.. ಅರ್ಧ ಆಂಜನೇಯ..
🌺..ತಮಿಳುನಾಡಿನ ಚೆನೈನಲ್ಲಿ ಇರುವ ಅಡ್ಯಾರ್ ಎನ್ನುವ ಪ್ರದೇಶದಲ್ಲಿ ಈ ಆದ್ಯಂತ ಪ್ರಭು ಎನ್ನುವ ದೇವಸ್ಥಾನವಿದೆ
ಈ ಪ್ರದೇಶವನ್ನು ಮಧ್ಯ ಕೈಲಾಸ ಎಂದು ಕೂಡ ಕರೆಯುತ್ತಾರೆ..
🌺.. ಆದ್ಯಂತ ಎಂದರೆ ಆರಂಭದಿಂದ ಅಂತ್ಯ ಅಥವಾ
ಆದಿ ಅಂತ್ಯ ಇಲ್ಲದನ್ನು..ಆದ್ಯಂತ ಎನ್ನುತ್ತಾರೆ..
( ಶ್ರೀ ಗಣೇಶ ಹಾಗೂ ಆಂಜನೇಯ ಸ್ವಾಮಿಯೂ ಇಬ್ಬರು ಆದಿ ಅಂತ್ಯವಿಲ್ಲದ ದೇವರು ಹಾಗೂ.. ಎಲ್ಲದಕ್ಕೂ ಆದಿ ಎಂದರೆ ಅದು ಶ್ರೀ ಗಣೇಶ.. ಗಣೇಶನಿಂದ ಪೂಜೆ ಪ್ರಾರಂಭವಾಗಿ ಆಂಜನೇಯ ಸ್ವಾಮಿಯೊಂದಿಗೆ ಪೂಜೆಯು ಕೊನೆಗೊಳ್ಳುತ್ತದೆ. ಎಂದು ಈ ವಿಗ್ರಹ ಸೂಚಿಸುತ್ತದೆ. ಹಾಗಾಗಿಯೇ..
( ಈ ವಿಗ್ರಹವನ್ನು ಆದ್ಯಂತ ಪ್ರಭು ಎಂದು ಕರೆಯುತ್ತಾರೆ..
🌺..ಇಲ್ಲಿನ ವಿಶೇಷತೆ ಏನೆಂದರೆ..
ಒಂದೆ ವಿಗ್ರಹದಲ್ಲಿ ಬಲ ಭಾಗ ಶ್ರೀ ಗಣೇಶನು.. ಎಡ ಭಾಗ ಆಂಜನೇಯ ಸ್ವಾಮಿಯೂ ನೆಲೆಸಿದ್ದಾರೆ.. ಶಿವ ಪಾರ್ವತಿ ಹೇಗೆ ಅರ್ಧನಾರಿಶ್ವರರಾಗಿ ಇದ್ದಾರೊ ಅದೆ ಪ್ರಕಾರ..
ಶ್ರೀ ಗಣೇಶ ಮತ್ತು ಆಂಜನೇಯ ಸ್ವಾಮಿಯೂ ಇಬ್ಬರು ಅರ್ಧ ಅರ್ಧ ಭಾಗ ಹಂಚಿಕೊಂಡು
ಒಂದೆ ವಿಗ್ರಹದಲ್ಲಿ ಇಬ್ಬರು ಏಕಿಕೃತಗೊಂಡಿದ್ದಾರೆ..
ಇಂತಹ ವಿಗ್ರಹ ಬೇರೆಲ್ಲೂ ಕೂಡ ಕಂಡು ಬರುವುದಿಲ್ಲ.
🌺..ನವಗ್ರಹಗಳ ದುಷ್ಪರಿಣಾಮದಿಂದ ಮುಕ್ತಿ ಪಡೆಯಲು ಭಕ್ತರು ಈ ಆದ್ಯಂತಪ್ರಭುವಿನ ದೇವಸ್ಥಾನಕ್ಕೆ ಬರುತ್ತಾರೆ.. ನವಗ್ರಹಗಳ ದುಷ್ಪರಿಣಾಮ ಅನ್ನೋದು ಎಲ್ಲ ದೇವರ ಮೇಲು ಪ್ರಭಾವ ಬೀರುತ್ತದೆ..
ಆದರೆ ಶ್ರೀ ಗಣೇಶ ಹಾಗೂ ಆಂಜನೇಯ ಸ್ವಾಮಿಯ ಮೇಲೆ ನವಗ್ರಹಗಳ ಪರಿಣಾಮ ಬೀರುವುದಿಲ್ಲ..
ನವಗ್ರಹಗಳ ದುಷ್ಪರಿಣಾಮದಿಂದ ಮುಕ್ತಿ ಪಡೆದ ಇಬ್ಬರು ದೇವರುಗಳು ಎಂದರೆ ಅದು ( ಗಣೇಶ ಮತ್ತು ಆಂಜನೇಯ
ಹಾಗಾಗಿಯೇ ಭಕ್ತರು ಇಲ್ಲಿ ಸಾಲು ಸಾಲಾಗಿ ಬರುತ್ತಾರೆ.
🌺..ಈ ಆದ್ಯಂತ ಪ್ರಭುವಿನ ದೇವಸ್ಥಾನದಲ್ಲಿ ಮೂಲ ದೇವರು ಎಂದರೆ ಅದು ( ಆನಂದ ವಿನಾಯಕ )
ಭಕ್ತರು ಇಲ್ಲಿಗೆ ಬಂದಾಗ ಮೊದಲು ಮೂಲ ದೇವರಾದ ಆನಂದ ವಿನಾಯಕನ ದರ್ಶನ ಮಾಡಬೇಕು.. ನಂತರ
ಆದ್ಯಂತ ಪ್ರಭುವಿನ ದರ್ಶನ ಮಾಡಬೇಕು..
🌺..ಈ ದೇವಸ್ಥಾನದಲ್ಲಿ ಅನೇಕ ದೇವರುಗಳು ನೆಲೆಸಿದ್ದಾರೆ
ಶಿವ, ಪಾರ್ವತಿ, ವಿಷ್ಣು, ಹಾಗೂ ನವಗ್ರಹಗಳು ಕೂಡ ನೆಲೆಸಿವೆ.. ಎಲ್ಲದಕ್ಕಿಂತ ವಿಶೇಷ ವಿಗ್ರಹ ಎಂದರೆ ಅದು
( ಗಣೇಶ ಮತ್ತು ಆಂಜನೇಯ ಸ್ವಾಮಿಯೂ ಒಂದೆ ವಿಗ್ರಹದಲ್ಲಿ ಸಮ್ಮಿಲನವಾಗಿ ಏಕಿಕೃತಗೊಂಡಿರುವ ಆದ್ಯಂತ ಪ್ರಭುವಿನ ವಿಗ್ರಹ.
ಇಲ್ಲಿ ಗಣೇಶ ಮತ್ತು ಆಂಜನೇಯಸ್ವಾಮಿಯೂ ಒಂದೆ ವಿಗ್ರಹದಲ್ಲಿ ನೆಲೆಸಿ ಬಂದ ಭಕ್ತರನ್ನು ಹರಸುತ್ತಿದ್ದಾರೆ.
🌺.. ಇದು ಗಣೇಶ ಮತ್ತು ಆಂಜನೇಯ ಸ್ವಾಮಿಗೆ ಸಮರ್ಪಿತವಾದ ದೇವಾಲಯವಾಗಿದೆ..
ಇಲ್ಲಿ ಗಣೇಶ ಚತುರ್ಥಿ ಮತ್ತು ಹನುಮ ಜಯಂತಿಯನ್ನು
ತುಂಬಾ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ
🌺.. ಇನ್ನೊಂದು ವಿಶೇಷ ಏನೆಂದರೆ.. ಈ ದೇವಸ್ಥಾನದ ಮೂಲ ದೇವರಾದ ( ಆನಂದ ವಿನಾಯಕ ) ಸ್ವಾಮಿಯ ವಿಗ್ರಹದ ಮೇಲೆ ಪ್ರತಿವರ್ಷ ಗಣೇಶ ಚತುರ್ಥಿಯಂದು ಸೂರ್ಯನ ಕಿರಣಗಳು ಬಂದು ಬೀಳುತ್ತವೆ..
ಬೇರೆ ಯಾವ ದಿನವೂ ಈ ರೀತಿ ನಡೆಯುವುದಿಲ್ಲ ಕೇವಲ ಗಣೇಶ ಚತುರ್ಥಿಯಂದು ಮಾತ್ರ ಈ ಚಮತ್ಕಾರ ನಡೆಯುತ್ತದೆ..
🌺 ಆದ್ಯಂತ ಪ್ರಭುವಿನ ಆಶೀರ್ವಾದ ನಮಗೆಲ್ಲರಿಗೂ ಸಿಗಲಿ ಧನ್ಯವಾದಗಳು..🌺
✍️ : saumya
44 - 0
ಮದುವೆಯಲ್ಲಿ ಅರುಂಧತಿ ನಕ್ಷತ್ರ ದರ್ಶನ ಮಾಡುವ ಔಚಿತ್ಯ
ಬ್ರಾಹ್ಮ ವಿವಾಹ ಆಚರಣೆಗಳಲ್ಲಿ ವರನು ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮುಖ್ಯ ಸಂಪ್ರದಾಯವಾಗಿದೆ.
#ವಶಿಷ್ಠ (Mizar) ಹಾಗೂ #ಅರುಂಧತಿ (Alcor) ಅವಳಿ ನಕ್ಷತ್ರಗಳು. ಸಪ್ತರ್ಷಿ ಮಂಡಲದ (Ursa Major) ತುದಿಯಿಂದ ಮರೀಚಿಯ (Alkaid) ನಂತರದ ಎರಡನೆಯ ಸ್ಥಾನ ವಶಿಷ್ಠ ಹಾಗೂ ಅದಕ್ಕೆ ಅಂಟಿಕೊಂಡಂತೆ ಪಕ್ಕದಲ್ಲಿರುವುದೇ ಅರುಂಧತಿ ನಕ್ಷತ್ರ. ಇವೆರಡೂ ಅವಳಿ ನಕ್ಷತ್ರಗಳು.
ಖಗೋಳಶಾಸ್ತ್ರದಲ್ಲಿ ಅವಳಿ ನಕ್ಷತ್ರಗಳೆಂದರೆ ಒಂದು ನಕ್ಷತ್ರವನ್ನು ಇನ್ನೊಂದು ನಕ್ಷತ್ರವು ಸುತ್ತುವುದು. ಆದರೆ ವಶಿಷ್ಠ-ಅರುಂಧತಿಯ ವಿಷಯದಲ್ಲಿ ಈ ನಿಯಮ ಬೇರೆ ಆಯಾಮ ಹೊಂದಿದೆ.
ವಶಿಷ್ಠ-ಅರುಂಧತಿಗಳು ಪರಸ್ಪರ ಒಂದರ ಸುತ್ತು ಇನ್ನೊಂದು ಸುತ್ತುತ್ತವೆ. ಇದು ಖಗೋಳ ಸೋಜಿಗ. ಮತ್ತೆಲ್ಲಿಯೂ ಇಂಥ ಉದಾಹರಣೆಗಳಿಲ್ಲ. ವಶಿಷ್ಠ-ಅರುಂಧತಿ ನಕ್ಷತ್ರಗಳು ಪರಸ್ಪರ ಒಂದರ ಸುತ್ತ ಇನ್ನೊಂದು ಸದಾ ಸುತ್ತುತ್ತಿರುತ್ತವೆಯೆಂಬ ವಿಷಯವನ್ನು ಆಧುನಿಕ ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.
ಪೌರಾಣಿಕವಾಗಿ ವಶಿಷ್ಠ-ಅರುಂಧತಿಯರದು ಆದರ್ಶ ಜೋಡಿ. ಅವರು ಪರಸ್ಪರ ಗೌರವ ಕೊಟ್ಟು ಆದರ್ಶ ಬದುಕು ನಡೆಸುತ್ತಾರೆ. ಎಂಥ ಕಠಿಣ ಸಮಯದಲ್ಲಿಯೂ ಲೋಕಕಲ್ಯಾಣಕ್ಕಾಗಿ ಕಂಕಣಬದ್ಧರಾಗಿರುತ್ತಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇವರು ಬಾಳುವ ರೀತಿ ನೂತನ ವಧು-ವೃರಿಗೆ ಆದರ್ಶವಾಗಲಿ ಎಂಬುದೇ ಪ್ರಾಚೀನರ ಆಶಯ. ಹಳೆಯ ಕಾಲದಲ್ಲಿ ಅರುಂಧತಿ ದರ್ಶನವನ್ನು ಸಂಧ್ಯಾ ಕಾಲದ ನಂತರ ಮಾಡಿಸಲಾಗುತ್ತಿತ್ತು. ಅದು ಸರಿಯಾದ ಸಮಯ. ಆದರೆ ಈಗ ಸಂಜೆ ಯ ಒಳಗೆ ಗಂಡಿನ ಕಡೆಯವರು ಹೊರಟುಬಿಡುವುದರಿಂದ ಸಂಪ್ರದಾಯವು ಮಾತ್ರ ಉಳಿದಿದೆ ...
ಆದರೂ ವೈದಿಕ ಮದುವೆಗಳು ಅರುಂಧತಿ ದರ್ಶನವಿಲ್ಲದೇ ಪೂರ್ಣಗೊಳ್ಳುವುದಿಲ್ಲ.
ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ನಮ್ಮ ಋಷಿ_ಮುನಿಗಳು ಇಂಥ ಗಹನ ವಿಷಯಗಳನ್ನು ಬರಿಗಣ್ಣಿನಿಂದಲೇ ಗುರುತಿಸಿ, ಅದಕ್ಕೊಂದು ಧಾರ್ಮಿಕ, ಕೌಟುಂಬಿಕ ಆಚರಣೆಯನ್ನು ನೀಡಿ ಸಂಪ್ರದಾಯಗಳನ್ನು ಸಶಕ್ತವಾಗಿ ಕಟ್ಟಿರುವುದು ಸೋಜಿಗವೇ ಸರಿ.
ಅನುಪಮ ಸಾಧ್ವಿ ಅರುಂಧತಿ
ಕರ್ದಮ ದೇವಹೂತಿಯರ ಎಂಟನೆಯ ಕನ್ಯೆ ಅರುಂಧತಿ. ಸಪ್ತರ್ಷಿಗಳಲ್ಲಿ ಅಗ್ರಗಣ್ಯನಾದ ವಸಿಷ್ಠನ ಧರ್ಮಪತ್ನಿ.
ವಿದ್ಯಾ ವಿವೇಕಗಳಿಂದ ಋಷಿ ಮಂಡಲದಲ್ಲಿ ಅಪಾರ ಗೌರವವನ್ನು ಗಳಿಸಿಕೊಂಡಿದ್ದಳು.
ಸಾವಿತ್ರೀದೇವಿ ಹಾಗೂ ಬಹುಲಾದೇವಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅರುಂಧತಿ ಸಕಲಜ್ಞಾನ ಸಂಪನ್ನೆಯಾಗಿದ್ದಳು.
ತನ್ನ ನೂರು ಮಕ್ಕಳನ್ನು ವಿಶ್ವಾಮಿತ್ರ ಶಾಪದಿಂದ ಕೊಂದಾಗಲೂ ಸಹನೆ ಮೀರದೆ ಅವನನ್ನು ಕ್ಷಮಿಸಿದ ಸಾಧ್ವಿ. ಮುಂದೆ ಹುಟ್ಟಿದ ಶಕ್ತಿ ಎಂಬ ಮಗ ವಿಶ್ವಾಮಿತ್ರನ ತಂತ್ರಕ್ಕೆ ಬಲಿಯಾದಾಗಲೂ ಸಹಿಸಿಕೊಂಡಿದ್ದಳು. ಇವಳ ಕೊನೆಯ ಮಗ ಸುಯಜ್ಞ ರಾಮನ ಸಹಪಾಠಿ.
ರಾಮಾಯಣದಲ್ಲಿ ಅರುಂಧತಿ ಸೀತೆಗೆ ದಾಂಪತ್ಯ ಜೀವನದ ಬಗ್ಗೆ ಉಪದೇಶವನ್ನು ನೀಡುತ್ತಾಳೆ. ಇಲ್ಲಿ ಇವಳ ಹಿರಿಮೆಯನ್ನು ಕಾಣಬಹುದು.
ಅಗ್ನಿ ಪತ್ನಿ ಸ್ವಾಹಾಳು ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಳೆಯುತ್ತಿದ್ದಳು. ಆದರೆ ಅರುಂಧತಿಯ ರೂಪವನ್ನು ಮಾತ್ರ ತಳೆಯಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣ ಅರುಂಧತಿಯ ವಿಶಿಷ್ಟ ವ್ಯಕ್ತಿತ್ವ ಹಾಗೂ ಅಗಾಧ ಪಾಂಡಿತ್ಯ. ಇಂದ್ರಾದಿ ದೇವತೆಗಳಿಗೂ ಅರುಂಧತಿ ಗೃಹಸ್ಥಧರ್ಮದ ಬಗ್ಗೆ ಉಪದೇಶ ನೀಡಿದ್ದಳು.
ವಸಿಷ್ಠ-ಅರುಂಧತಿಯರ ದಾಂಪತ್ಯ ಸಾರ್ವಕಾಲಿಕ ಆದರ್ಶವಾಗಿ ನಿಂತಿದೆ. ವಿವಾಹದಲ್ಲಿ ಅರುಂಧತೀಪೂಜೆ ಹಾಗೂ ಅರುಂಧತೀ ನಕ್ಷತ್ರ ದರ್ಶನ ದಾಂಪತ್ಯಜೀವನದಲ್ಲಿ ಶುಭವನ್ನುಂಟುಮಾಡುತ್ತವೆ.
ಸೃಷ್ಟಿಗೆ ಪ್ರತಿಸೃಷ್ಠಿ ಸೃಷ್ಟಿಯನ್ನೇ ಸೃಷ್ಟಿಸಬಲ್ಲವರಾಗಿದ್ದ ವಿಶ್ವಾಮಿತ್ರ ಮಹರ್ಷಿಯು, ತನ್ನನ್ನು ಬ್ರಹ್ಮರ್ಷಿ ಎನ್ನಲು ಒಪ್ಪದ ವಸಿಷ್ಠರನ್ನು ಬಹಳವಾಗಿ ದ್ವೇಷಿಸುತ್ತಿರುತ್ತಾರೆ.
ಒಮ್ಮೆ ಊಟದ ಸಮಯದಲ್ಲಿ ವಸಿಷ್ಠರನ್ನು ಅವರ ಪತ್ನಿ ಕೇಳುತ್ತಾರೆ; ಸ್ವಾಮಿ ಬ್ರಹ್ಮರ್ಷಿ ಆಗುವ ಅರ್ಹತೆಗಳು ವಿಶ್ವಾಮಿತ್ರರಲ್ಲಿ ಇಲ್ಲವೇ? ನೀವೇಕೆ ಅವರನ್ನು ಬ್ರಹ್ಮರ್ಷಿ ಎಂದು ಒಪ್ಪುತ್ತಿಲ್ಲ!? ಆಗ ವಸಿಷ್ಠ'ರು ಹೇಳುತ್ತಾರೆ;
....."ನಾನು"... ಬದುಕಿರುವ ತನಕ ವಿಶ್ವಾಮಿತ್ರ ಬ್ರಹ್ಮರ್ಷಿ ಆಗಲು ಸಾಧ್ಯವೇ ಇಲ್ಲ ಎಂದುಬಿಡುತ್ತಾರೆ. ಇದೇ ವಿಚಾರವನ್ನು ವಸಿಷ್ಠರಲ್ಲಿ ಕೆದಕಲು ಬಂದಿದ್ದ ವಿಶ್ವಾಮಿತ್ರ ಮಹರ್ಷಿಗೆ ಇದನ್ನು ಕೇಳಿ ಕೋಪ ಉಕ್ಕುತ್ತದೆ. ಹಾಗೋ! ಏ ವಸಿಷ್ಠ, ನಿನ್ನನ್ನು ಕೊಂದಾದರೂ ನಾನು ಬ್ರಹ್ಮರ್ಷಿ ಆಗೇ ತೀರುತ್ತೇನೆ ಎಂದುಕೊಳ್ಳುವ ಹೊತ್ತಿಗೆ ಮುಂದುವರೆದು ಅರುಂಧತಿ ಕೇಳುತ್ತಾರೆ; ಹಾಗೆಂದರೇನು ಸ್ವಾಮಿ? ಆಗ ವಸಿಷ್ಠರು; ಹೌದು ದೇವಿ, ವಿಶ್ವಾಮಿತ್ರ ಮಹರ್ಷಿಗಳು ಎಂದೋ ಬ್ರಹ್ಮರ್ಷಿಯಾಗಿದ್ದಾರೆ. ಆದರೆ ಅವರಲ್ಲಿರುವ ನಾನು ಅವರನ್ನು ಬ್ರಹ್ಮರ್ಷಿ ಘೋಷಣೆಗೆ ಅಡ್ಡಿಯಾಗಿ ನಿಂತಿದೆ. ನಿಜ ಹೇಳಬೇಕೆಂದೇ ಅವರು ನನಗಿಂತ ಶ್ರೇಷ್ಠರು...
ಇದನ್ನು ಕೇಳಿಸಿಕೊಂಡ ವಿಶ್ವಾಮಿತ್ರ ಮಹರ್ಷಿಗಳು ವಸಿಷ್ಠರ ಮುಂದೆ ಕೈಮುಗಿದು ಹೇಳುತ್ತಾರೆ; ವಸಿಷ್ಠ ಮುನಿಗಳೇ ನಿಮ್ಮನ್ನು ಗೆಲ್ಲಲು ಹೊರಟು ನಾನು, ನನ್ನಲ್ಲಿದ್ದ ಅಹಂಕಾರವನ್ನು ಗೆಲ್ಲವುದ ಮರೆತೆ. ಸುಖಾಸುಮ್ಮನೆ ನಿಮ್ಮನ್ನು ಸದಾ ಕಾಡುತ್ತಲೇ ಬಂದೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎನ್ನುತ್ತಾ ಕಾಲಿಗೆರಗಲು ಬಂದಾಗ! ವಸಿಷ್ಠರು ಅವರನ್ನು ತಡೆದು ತಬ್ಬಿಕೊಳ್ಳುತ್ತಾರೆ. ಮುಂದೆ ವಸಿಷ್ಠರ ಮೇಲಿನ ವೈರತ್ವಕ್ಕೆ ಅಂತ್ಯವಾಗುತ್ತದೆ.
ಮುಂದುವರೆಯುವುದು
8 - 0
శ్రీ సత్యనారాయణ స్వామి కథ
శ్రీ లక్ష్మీ సమేత శ్రీ సత్యనారాయణ స్వామికి నమస్సులు.
నైమిషారణ్యమనే అడవిలో నివసిస్తున్న రుషులు ఒకరోజు సూతపురాణికుడిని మనవుల హితార్ధం ప్రశ్నించారు.
రుషులు: "ఓ మునీశ్వరా! మానవుల మనోకామనలను ఏ వ్రతంతో లేదా ఏ తపస్సుతో తీర్చుకోవచ్చో చెప్తారా?"
సూతపురాణికుడు: "ఓ మహర్షులారా! ఇదే ప్రశ్నను ముందుగా నారదుడు శ్రీమహావిష్ణువును అడిగాడు. ఆ ప్రశ్నకు లోకరక్షకుడైన భగవంతుడు ఇచ్చిన సమాధానమే నేను మీకు చెప్పగలుగుతాను. ఇది చాలా పవిత్రమైన కథ."
ఒకసారి నారదుడు ప్రపంచ శ్రేయస్సు కోసం అన్ని లోకాలలో సంచరించి భూమిలోకానికి వచ్చాడు. అక్కడ జనులు తమ పాపకర్మల ఫలితంగా పీడనకు గురవుతున్నట్లుగా చూసి దుఃఖించాడు. నారదుడి హృదయం జాలితో కరగిపోయింది. "ఈ జనుల కష్టాలను ఎలా తీర్చగలిగితిని?" అని ఆలోచిస్తూ, భగవంతుని దర్శించటానికి వైకుంఠానికి వెళ్లాడు.
అక్కడ చతుర్భుజుడైన శ్రీమహావిష్ణువును చూశాడు. భగవంతుని గొప్పతనాన్ని గమనించి స్తుతిస్తూ ఇలా ప్రార్థించాడు:
స్తోత్రం:
"నమో వాఙ్మనసాతీత రూపాయంత శక్తియే, ఆది మధ్యాంత హీనాయ, గుణాత్మనే నమస్సుమే।"
నారదుడు: "ఓ దేవా! భూమిలోకంలోని జనులు చాలా కష్టాలను అనుభవిస్తున్నారు. వారి బాధలను పోగొట్టేందుకు మీరు దయచేసి మార్గం చూపించండి."
శ్రీమహావిష్ణువు: "ఓ నారదా! ఇది గొప్ప ప్రశ్న. మానవుల కష్టాలను తొలగించేందుకు ఒక పవిత్రమైన వ్రతం ఉంది, దాని పేరు శ్రీ సత్యనారాయణ వ్రతం. ఈ వ్రతం ఏవిధమైన కాలంలోనైనా చేయవచ్చు. ఇది మానవుల ఇహలోకంలో కష్టాలను తొలగించి, మోక్షాన్ని ప్రసాదిస్తుంది."
నారదుడు: "దేవా! ఈ వ్రతం ఎలా చేయాలి? ఎవరు మొదట ఈ వ్రతం చేశారు? దాని ఫలితం ఏమిటి? దయచేసి వివరంగా చెప్పండి."
శ్రీమహావిష్ణువు: "ఈ వ్రతం విశేష ఫలితములు ఇస్తుంది. దైవభక్తితోపూర్వకంగా దీన్ని నిర్వహిస్తే కష్టాలు తొలగిపోతాయి. సంతానాన్ని, ఐశ్వర్యాన్ని ప్రసాదిస్తుంది. అన్ని కార్యక్రమాలలో విజయాన్ని అందిస్తుంది. సాయంత్ర సమయంలో పూజ చేయాలి. ప్రసాదానికి గోధుమ లేదా బియ్యం నుండి తయారుచేసిన సజ్జి ఉపయోగించవచ్చు. పూజ అనంతరం బ్రాహ్మణులను భోజనం చేయించి దక్షిణలు ఇవ్వాలి. ఈ విధంగా వ్రతం నిర్వహిస్తే భగవంతుడు మీ మనోకామనలను నెరవేర్చుతాడు."
పూర్వకాలంలో ఈ వ్రతం చేసిన వారు:
సూతపురాణికుడు: "ఓ మహర్షులారా! పూర్వంలో కాశీ పట్టణంలో ఒక బ్రాహ్మణుడు తిండికి నానా కష్టాలు పడేవాడు. అతడికి శ్రీమహావిష్ణువు మునివేషంలో ప్రత్యక్షమై శ్రీ సత్యనారాయణ వ్రతాన్ని వివరించాడు. బ్రాహ్మణుడు భగవంతుడి మాటలని విశ్వసించి, భిక్షాటన ద్వారా సంపాదించిన ధనంతో వ్రతం నిర్వహించాడు. ఆ వ్రతఫలంతో అతడు ధనవంతుడై, అన్ని కష్టాలను అధిగమించి, మోక్షాన్ని పొందాడు."
ఈ వ్రతం మరొక ఉదాహరణ:
ఒకసారి ఒక కట్టెలవాడు ఒక బ్రాహ్మణుని ఇంటికి వచ్చి వ్రతాన్ని చూశాడు. ఆ వ్రతం విశిష్టతను తెలుసుకొని అతడూ తన గ్రామంలో వ్రతాన్ని నిర్వహించాడు. ఆ వ్రతప్రభావంతో అతడు అధిక ధనాన్ని సంపాదించి సుఖసంతోషాలతో జీవించాడు.
ఇంతటి పవిత్రమైన శ్రీ సత్యనారాయణ వ్రతం భక్తి, శ్రద్ధతో చేయాలి.
తృతీయాధ్యాయం:
కథ కొనసాగుతుంది... (తరువాతి భాగం కోసం వేచి చూడండి).
65 - 0
ಶ್ರೀ ಸತ್ಯನಾರಾಯಣ ದೇವರ ಕಥೆ.
ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಯಣನಿಗೆ ನಮಸ್ಕಾರಗಳು.
ನೈಮಿಷ್ಯವೆಂಬ ಅರಣ್ಯದಲ್ಲಿ ವಾಸಿಸುವ ಮೊದಲಾದ ಋಷಿಗಳು ಪುರಾಣಗಳನ್ನು ಬಲ್ಲ ಸೂತಪುರಾಣಿಕನನ್ನು ಕುರಿತು ಒಂದು ದಿನ ಮಾನವರ ಹಿತಾರ್ಥವಾಗಿ ಪ್ರಶ್ನಿಸಿದರು.
ಏನೆಂದರೆ 'ಎಲೈ ಮುನಿಯೇ, ಮಾನವರ ಮನೋಬಯಕೆಗಳು ಅದಾವ ವ್ರತದಿಂದ ಇಲ್ಲವೇ ಅದಾವ ತಪಸ್ಸಿನಿಂದ ಈಡೇರುವುವು?'
ಸೂತನು ಅದಕ್ಕೆ ಹೀಗೆ ಉತ್ತರವಿತ್ತನು. 'ಎಲೈ ಋಷಿಗಳೇ, ಇದೇ ಪ್ರಶ್ನೆಯನ್ನು ಮೊದಲು ನಾರದ ಮಹರ್ಷಿಯು, ಕಲಾವತಿಯಾದ ಶ್ರೀಮನ್ನಾರಾಯಣನನ್ನು ಕೇಳಿದನು. ಅದಕ್ಕೆ ಲೋಕ ರಕ್ಷಕನಾದ ಆ ಭಗವಂತನು, ನಾರದರಿಗೆ ಕೊಟ್ಟ ಉತ್ತರವನ್ನೇ ಈಗ ಹೇಳುವೆನು.
ಚಿತ್ತಗೊಟ್ಟು ಕೇಳಿರಿ ಎಂದು ಹೇಳಲು ಉಪಕ್ರಮಿಸಿದನು. ಒಂದು ಸಲ ನಾರದ ಯೋಗಿಯು 'ಪರಾನುಗ್ರಹ ಕಾಂಕ್ಷಯಾ' ಎರಡನೆಯವರಿಗೆ ಹಿತ ಮಾಡಬೇಕೆಂಬ ಬಯಕೆಯಿಂದ ಎಲ್ಲಾ ಲೋಕಗಳನ್ನು ಸಂಚರಿಸುತ್ತಾ, ನಮ್ಮ ಈ ಮೃತ್ಯು ಲೋಕಕ್ಕೆ ಬಂದರು.
ಇಲ್ಲಿಯೂ ತಮ್ಮ ತಮ್ಮ ದುಷ್ಕರ್ಮಗಳಿಗೆ ತಕ್ಕಂತೆ ಹಲವಾರು ನೀಚ ಯೋನಿಗಳಲ್ಲಿ ಜನಿಸಿ, ಬಹು ದುಃಖದಿಂದ ಬಳಲುತ್ತಿರುವುದನ್ನು ಕಂಡರು. 'ಸಜ್ಜನಸ್ಯ ಹೃದಯ ನವನೀತಂ' - ಬೆಣ್ಣೆಯಂತಹ ಹೃದಯ ಕರಗಿತು. ಕಳವಳಗೊಂದರು. ಅದಾವ ಉಪಾಯದಿಂದ ಈ ಜನರ ದುಃಖವು ದೂರವಾಗುವುದು? ಎಂದು ಮನಮುಟ್ಟಿ ಚಿಂತಿಸಿದರು. ಕೊನೆಗೆ ಈ ಬಗ್ಗೆ ವಿಚಾರಿಸುವುದಾಗಿ, ಅಧಿಕಾರವುಳ್ಳ ಸೃಷ್ಠಿ ಸ್ಥಿತಿಯನ್ನು ಕಾಯುವ ಶ್ರೀಮನ್ನಾರಾಯಣನನ್ನು ಕಾಣಲು ವಿಷ್ಣುಲೋಕಕ್ಕೆ ತೆರಳಿದರು.
ಅಲ್ಲಿ ಚತುರ್ಭುಜನೂ ಸುಂದರನೂ ಆದ ಸದ್ಗುಣೈಶ್ವರ್ಯ ಸಂಪನ್ನನಾದ ಶ್ರೀಮನ್ನಾರಾಯಣನನ್ನು ಕಂಡೊಡನೆ ಭಕ್ತಶ್ರೇಷ್ಠರಾದ ಅವರ ಅಂತಃಕರಣದಲ್ಲಿ ಭಕ್ತಿರಸವು ಉಕ್ಕೇರಿತು. ದೇವ ದೇವೇಂದ್ರನಾದ ಆತನನ್ನು ಸ್ತುತಿಸತೊಡಗಿದರು.
ಸ್ತೋತ್ರ: - ನಮೋ ವಾಙ್ಮನ ಸಾತೀತ ರೂಪಾಯಂತ ಶಕ್ತಿಯೇ ಆದಿಮಧ್ಯಾಂತ ಹಿನಾ ಗುಣಾತ್ಮನೇ ಸವೇಷಮಿಥಿ ಭೂತಾಯ |
ಭಕ್ತಿ ಮೂರ್ತಿಯೇ ಸರ್ವ ಸ್ವಾಮಿಯೇ ನೀನು ಮನಸ್ಸು ಮಾತುಗಳಿಗೆ ನಿಲುಕದ ರೂಪವುಳ್ಳವನು. ನೆಲೆ ಇಲ್ಲದ ಶಕ್ತಿವಂತನು. ಹುಟ್ಟು ಬೆಳೆ ಸಾವುಗಳಿಂದ ಹೀನನು ಅಥವಾ ಮೊದಲು ಕೊನೆಗಳಿಲ್ಲದ್ದು.
ಗುಣಗಳಿಂದ ರಹಿತನು ನಾಂದಿಗುಣಗಳಿಂದ ಅರ್ಥವುಳ್ಳವನು. ನಿರ್ಗುಣನಾದ ನೀನು ಸುಗುಣ ರೂಪ ತಳೆದಾಗ ಎಲ್ಲಾ ಭೂತಮಾತ್ರ ಸೃಷ್ಠಿಗೆ ಕಾರಣನಾದ ನೀನು ಸರ್ವಾಂತರ್ಯಾಮಿ. ನಿನ್ನನ್ನೇ ನೆರೆ ತುಂಬಿದ ಭಕ್ತರ ಪಾಪಕಾರ್ಯಗಳನ್ನು ನಾಶ ಮಾಡುವವನು ಆಗಿರುವಿ.
ನಾರದರ ಪರಹಿತ ಭಾವಪೂರ್ಣವೂ ಆದ ಸ್ತೋತ್ರಗಳನ್ನು ಕೇಳಿ ಶ್ರೀ ವಿಷ್ಣುವು 'ಎಲೈ ಸಾಧುವೇ, ನೀನು ಇಲ್ಲಿಗೆ ಯಾವ ಕಾರ್ಯಕ್ಕಾಗಿ ಬಂದಿರುವೆ? ನಿನ್ನ ಬಯಕೆ ಏನು? ಹೇಳು. ಅದೆಲ್ಲವನ್ನೂ ನಾನು ಪೂರೈಸುವೆ' ಎಂದು ಹೇಳಿದನು. 'ಒಡೆಯನೇ, ಮೃತ್ಯುಲೋಕದ ಜನತೆ ಎಲ್ಲವೂ ಹಲವು ಬಗೆಯ ದುಃಖವನ್ನು ಅನುಭವಿಸುತ್ತಿರುವರು. ಆ ಜನರ ದುಃಖವನ್ನು ಹೋಗಲಾಡಿಸುವುದಕ್ಕಾಗಿ ನೀನು ನಮಗೆ ದಾರಿ ತೋರಿಸ ಬೇಕೆಂದು ಕೇಳಿ ಕೊಂಡನು.
ಶ್ರೀ ಭಗವಂತನು ನಾರದನ ಪರಹಿತ ಬುದ್ಧಿಯನ್ನರಿತು 'ವತ್ಸ ನಾರದಾ, ಜನರ ಮೇಲೆ ಅನುಗ್ರಹ ಮಾಡಬೇಕೆಂಬ ಬಯಕೆಯಿಂದ ಒಳ್ಳೆಯ ಪ್ರಶ್ನೆಯನ್ನು ಕೇಳಿದೆ. ಏನು ಮಾಡುವುದಂತ ದುಃಖ ಮುಕ್ತರಾಗುವರೆಂಬುದನ್ನು ಹೇಳುವೆ. ಕೇಳು. ಅದೊಂದು ಮಹತ್ಪುಣ್ಯಕರವಾದ ಸತ್ಯನಾರಾಯಣ ವ್ರತವು. ಅದು ಸ್ವರ್ಗ ಮೃತ್ಯುಲೋಕದಲ್ಲಿ ದುರ್ಲಭವಾದುದು.
ವತ್ಸಾ, ಕೇವಲ ಅದು ನಿನ್ನ ಮೇಲಿನ ಪ್ರೀತಿಯ ಮೂಲಕ ಗುಪ್ತವಾಗಿದ್ದರೂ ಪ್ರಕಟಗೊಳಿಸುವೆ. ಅದು ಶ್ರೀ ಸತ್ಯನಾರಾಯಣ ಎಂಬ ವ್ರತವು. ಅದನ್ನು ಒಳ್ಳೆಯ ವಿಧಾನಪೂರ್ವಕವಾಗಿ ಮಾಡುವುದರಿಂದ ಇಹದಲ್ಲಿನ ದುಃಖವೆಲ್ಲಾ ನಾಶವಾಗಿ ಸುಖ ಉಂಟಾಗುವುದು ಮತ್ತು ಮುಂದೆ ಮರಣಾನಂತರ ಮೋಕ್ಷವನ್ನು ಹೊಂದುವನು. ಭಗವಂತನ ಮಾತುಗಳನ್ನು ಕೇಳಿ ನಾರದ ಮಹರ್ಷಿಯು 'ಕೀ ಫಲಂ ಕಿಂ ವಿಧಾನಂ ಚ ಕೃತಂ ಕೇನ್ವರ ತವ ವ್ರತಂ'. ಈ ವ್ರತಕ್ಕೆ ಫಲವೆನಿದೆ? ಇದನ್ನು ಮಾಡುವ ವಿಧಾನ ಹೇಗೆ? ಮೊದಲು ಯಾರು ಇದನ್ನು ಮಾಡಿದ್ದರು? ಮತ್ತು 'ಕದಾ ಕಾರ್ಯಂ ದ ವ್ರತಂ' ವ್ರತ ಮಾಡಲಿಕ್ಕೆ ಕಾಲವು ಯಾವುದು? ಇದನ್ನು ವಿಸ್ತಾರವಾಗಿ ಹೇಳಬೇಕೆಂದು ಕೇಳಿದನು.
ಅದಕ್ಕೆ ಭಗವಂತನು - 'ಈ ವ್ರತಾಚರಣೆಯಿಂದ ದುಃಖಗಳೆಲ್ಲಾ ನಾಶವಾಗುವುದು. ಧನ ಮತ್ತು ಧಾನ್ಯಗಳು ಸಮೃದ್ಧಿಯಾಗುವುದು. ಅಲ್ಲದೇ 'ಸೌಭಾಗ್ಯಂ ಸಂತತಿಕರಂ ಸರ್ವತ್ರ ವಿಜಯ ಪ್ರದಂ. ಸೌಭಾಗ್ಯವನ್ನು, ಸಂತತಿಯನ್ನು ಕೊಡುವುದು. ಎಲ್ಲಾ ಕಾರ್ಯಗಳಲ್ಲೂ ಗೆಲುವೇ ದೊರಕುವುದು. ಇದೇ ಈ ವ್ರತದಿಂದ ದೊರಕುವ ಫಲಗಳು.
ಯಾವ ಕಾಲ, ಯಾವ ದಿನದಲ್ಲಾದರೂ ಶ್ರದ್ಧೆ, ಭಕ್ತಿಯಿಂದ ಈ ಕರಟವನ್ನು ಮಾಡಬಹುದು. ಧರ್ಮ ತತ್ಪರನಾಗಿ ಬ್ರಾಹ್ಮಣರಿಂದ ಕೂಡಿಕೊಂಡು ಈ ಸತ್ಯನಾರಾಯಣ ದೇವನನ್ನು ಸಾಯಂಕಾಲದ ಸಮಯಕ್ಕೆ ಪೂಜಿಸಬೇಕು.
ಉತ್ತಮವಾದ ಸಪಾತಪಕ್ಷ ನೈವೇದ್ಯವನ್ನು ಭಕ್ತಿಯಿಂದ ಕೊಡಬೇಕು. ಭಕ್ಷ್ಯವೆಂದರೆ ಬಾಳೆಹಣ್ಣು, ತುಪ್ಪ, ಹಾಲು ಮತ್ತು ಗೋಧಿಯ ಸಜ್ಜಿಗೆ ದೊರೆಯದಿದ್ದಲ್ಲಿ ಅಕ್ಕಿಯ ಸಜ್ಜಿಗೆಯನ್ನೂ ಸಕ್ಕರೆ ದೊರೆಯದಿದ್ದಲ್ಲಿ ಬೆಲ್ಲವನ್ನೂ ಅಭಾವಶಾಲಿ ಚೂರ್ಣಂ ಯಾ ಚರ್ಕಣ ಚ ಡಸ್ತಬಾ' ಉಪಯೋಗಿಸಬೇಕು.
ಎಲ್ಲಾ ಪದಾರ್ಥಗಳನ್ನು "ಸಪಾದ" ಅಂದರೆ ಯಾವುದೊಂದು ಪ್ರಮಾಣ ಐದುಮಡಿ ಮಾಡಿ ನಿವೇದಿಸಬೇಕು. ಅನಂತರ ತನ್ನ ಆಪ್ತೇಷ್ಠರುಗಳಿಂದ ಕೂಡಿ ಬ್ರಾಹ್ಮಣರಿಗೆ ಊಟಕ್ಕೆ ಹಾಕಿ ತಾಂಬೂಲ ದಕ್ಷಿಣೆಗಳನ್ನು ಕೊಡಬೇಕು. ರಾತ್ರಿ ಎಲ್ಲಾ ನೃತ್ಯ ಗಾನಾದಿಗಳಿಂದ ಹೊತ್ತು ಕಳೆದು ಶ್ರೀ ಸತ್ಯನಾರಾಯಣನನ್ನು ಮನಮುಟ್ಟಿ ಸ್ಮರಿಸುತ್ತಾ ಮನೆಗೆ ಹೋಗಬೇಕು. ಇಂತು ವ್ರತವನ್ನು ಆಚರಿಸಿದರೆ, ಮನುಜನ ಮನೋರಥವು ಸಿದ್ಧಿಸುವುದು. ವಿಶೇಷವಾಗಿ ಈ ವ್ರತವು ಕಲಿಯುಗದಲ್ಲಿ ಬಹು ಬೇಗನೆ ಫಲವನ್ನು ಕೊಡುವಂತಹದಾಗಿದೆ. ಹೀಗೆಂದು ಭಗವಂತನು ನಾರದರಿಗೆ ಹೇಳಿದನು. ಇದೇ ಶ್ರೀ ಸ್ಕಂದ ಪುರಾಣ ರೇವಾ ಖಂಡದ ಸತ್ಯನಾರಾಯಣ ಕಥಾಯೋ ಪ್ರಥಮಾಧ್ಯಾಯಂ ಸಮಾಪ್ತಿರಸ್ತು.
೨ನೇ ಅಧ್ಯಾಯ
ಸೂತಪುರಾಣಿಕನು ಋಷಿಗಳನ್ನು ಕುರಿತು 'ಎಲೈ ಋಷಿಗಳಿರಾ! ಇನ್ನೂ ಈ ವ್ರತವನ್ನು ಪೂರ್ವದಲ್ಲಿ ಅದಾರು ಮಾಡಿದ್ದಾರೆಂಬುವುದನ್ನು ಹೇಳುತ್ತೇನೆ ಕೇಳಿರಿ. ಕಾಶಿಪಟ್ಟಣದಲ್ಲಿ ತೀರ ದರಿದ್ರನಾದ ಬ್ರಾಹ್ಮಣ ಇರುತ್ತಿದ್ದನು. ಬಡತನದ ಮೂಲಕ ಆತ ಯಾವಾಗಲೂ ಹಸಿವೆ, ನೀರಡಿಕೆಗಳಿಂದ ಪೀಡಿತನಾಗಿದ್ದನು. ಅದಕ್ಕಾಗಿ ದಿನವೂ ಭಿಕ್ಷೆಗಾಗಿ ಭೂಮಿಯ ಮೇಲೆ ಸಂಚರಿಸುತಿದ್ದನು. 'ಭಗವಾನ್ ಬ್ರಾಹ್ಮಣ ಪ್ರಿಯ' ಭಗವಂತನು ಬ್ರಾಹ್ಮಣರ ಮೇಲೆ ಪ್ರೀತಿಯುಳ್ಳವನು. ಆದ್ದರಿಂದ ಬ್ರಾಹ್ಮಣನ ಕಷ್ಟಮಯ ಸ್ಥಿತಿಯು ಆತನಿಗೆ ಸಹಿಸದಾಯಿತು.
ಕೂಡಲೇ ಆತನು ಮುದಿಯನ ವೇಷದಿಂದ ಆ ದರಿದ್ರ ಬ್ರಾಹ್ಮಣನ ಬಳಿಗೆ ಬಂದನು. ಮತ್ತು ಅವನನ್ನು ಕುರಿತು ಒಳ್ಳೆಯ ಆದರದಿಂದ 'ಎಲೈ ಬ್ರಾಹ್ಮಣನೆ! ನೀನು ನಿತ್ಯವೂ ದುಃಖಿತನಾಗಿ ಭೂಮಿಯ ಮೇಲೆ ಅದೇನು ಕಾರಣ ಸಂಚರಿಸುತ್ತಿರುವಿ? ಅದನ್ನು ಕೇಳಲು ನಾನು ಬಯಸುವೆ. ಅದೇನು ಹೇಳು?' ಎಂದು ಕೇಳಿದನು.
ಅದಕ್ಕೆ ಕಂಗಾಲಾದ ಬ್ರಾಹ್ಮಣನು 'ಬ್ರಾಹ್ಮಣೋತಿ ದ್ರ ದ್ರೋಹ' ನಾನು ಬ್ರಾಹ್ಮಣನಿದ್ದೂ ತುಂಬಾ ಬಡವನಾಗಿರುವೆ. ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುವ ನಿಮಿತ್ತ ಯಾವಾಗಲೂ ಭೂಮಿಯ ಮೇಲೆ ತಿರುಗಾಡುತ್ತಿರುವೆ. ಈ ನನ್ನ ದಾರಿದ್ರ್ಯವು ದೂರಾಗಲು ಉಪಾಯವೇನಾದರೂ ತಿಳಿದಿದ್ದರೆ ಅದನ್ನು ತಿಳಿಸುವ ಕೃಪೆಯಾಗಬೇಕೆಂದು ಕೇಳಿದನು.
ಬ್ರಾಹ್ಮಣನ ದೀನವಾಣಿಯನ್ನು ಕೇಳಿ ವೇಷಧಾರಿಯಾದ ಭಗವಂತನು 'ಎಲೈ ಬ್ರಾಹ್ಮಣನೇ, ಸತ್ಯನಾರಾಯಣೋ ವಿಷ್ಣುವಾಂಚಿತ ಫಲ ಪ್ರಧದಂ' ನಿಜವಾಗಿ ಸತ್ಯನಾರಾಯಣನೂ ವಿಷ್ಣುವೂ ಆತನೇ ಭಕ್ತರ ಪೂಜಕರ ಬಯಕೆಯನ್ನು ಪೂರೈಸುವನು. ಆದ್ದರಿಂದ ಆ ಸತ್ಯನಾರಾಯಣನನ್ನು ನೀನು ಭಕ್ತಿಪೂರ್ವಕವಾಗಿ ಪೂಜಿಸು. ಇದೊಂದು ಮೇಲಾದ ವ್ರತವು. ಈ ವ್ರತಾಚರಣೆಯಿಂದ ಮಾನವನ ಎಲ್ಲಾ ಬಗೆಯ ದುಃಖಗಳಿಂದ ಕೂಡಲೇ ಮುಕ್ತನಾಗುವನು. ಎಂದು ನುಡಿದು ಆ ವ್ರತದ ವಿಧಿ ವಿಧಾನಗಳನ್ನು ದರಿದ್ರನಾದ ಬ್ರಾಹ್ಮಣನಿಗೆ ತಿಳಿಸಿ ಆ ವೃದ್ಧ ಬ್ರಾಹ್ಮಣನ ರೂಪವನ್ನು ಕಳೆದು ಸತ್ಯನಾರಾಯಣನು ಅಲ್ಲಿಯೇ ಅಂತರ್ಧಾನನಾದನು.
ಆಗ ಬ್ರಾಹ್ಮಣನು ಆಶ್ಚರ್ಯಚಕಿತನಾಗಿ ಆ ಮುಡಿ ಹಾರುವನ ಹೇಳಿಕೆಯಲ್ಲಿ ಪೂರ್ಣ ವಿಶ್ವಾಸವುಳ್ಳವನಾದನು. ಆತನ ಹೇಳಿಕೆಯಂತೆ ನಾನು ಶ್ರೀ ಸತ್ಯನಾರಾಯಣ ವ್ರತವನ್ನು ಮಾಡಿಯೇ ತೀರುವೆನು ಎಂದು ಮನಸ್ಸಿನಲ್ಲಿ ನಿಶ್ಚಯಿಸಿದನು. ಬಡತನದಿಂದ ಪಾರಾಗಿ ಸುಖವುಂಟಾಗುವ ಕರ್ಮದ ಚಿಂತನೆಯಿಂದ 'ಕರ್ತಾಗಧಾಂ ನಲಬ್ಧಾ'. ಆತನಿಗೆ ರಾತ್ರಿಯಲ್ಲಿ ನಿದ್ರೆ ಬರಲಿಲ್ಲ.
ಬೆಳಗಾಗುವ ಮಾರ್ಗವನ್ನು ಕಾಣುತ್ತಲೇ ರಾತ್ರಿಯನ್ನು ಕಳೆದನು. ಮರುದಿನ ಬೆಳಗಾಯಿತು. ಅದನ್ನೇ ನಿರೀಕ್ಷಿಸುತ್ತಿದ್ದ ಬ್ರಾಹ್ಮಣನು ಕೂಡಲೇ ಹಾಸಿಗೆಯಿಂದ ಮೇಲೆದ್ದನು. ಆ ಹೊತ್ತು ತಾನು ಸತ್ಯನಾರಾಯಣನ ವ್ರತವನ್ನು ಮಾಡುವೆನೆಂದು ನಿಶ್ಚಯಿಸಿದನು. ಹಾಗೆಂದು ಸಂಕಲ್ಪ ಮಾಡಿಕೊಂಡನು. ಪ್ರಾತಃವಿಧಿಗಳನ್ನು ಮುಗಿಸಿ ಭಿಕ್ಷೆಗಾಗಿ ಹೊರಟನು. 'ಭಾವೇನ ದೇವಂ' ಎಂಬಂತೆ ದೇವನು ಭಾವನೆಗೆ ತಕ್ಕಂತೆ ಅಂದು ಆ ಬ್ರಾಹ್ಮಣನಿಗೆ ದೈವವಶಾತ್ ಪ್ರತಿನಿತ್ಯಕ್ಕಿಂತಲೂ ಹೆಚ್ಚಿನ ಭಿಕ್ಷೆಯು ದೊರಕಿತು. ಆಗ ಆತನು ಸಂತುಷ್ಟಚಿತ್ತನಾಗಿ ಆ ಹಣವನ್ನು ವೆಚ್ಚಿಸಿ ಬಂಧುಬಾಂಧವರೊಡನೆ ಕೂಡಿಕೊಂಡು ಶ್ರೀ ಸತ್ಯನಾರಾಯಣ ವ್ರತವನ್ನು ನೆರವೇರಿಸಿದನು.
ಅಂದು ಮಾಡಿದ ವ್ರತದ ಪ್ರಭಾವದಿಂದ ಆ ಬ್ರಾಹ್ಮಣನು 'ಸರ್ವದುಃಖ ವಿಮುಕ್ತ'. ಎಲ್ಲಾ ದುಃಖಗಳಿಂದ ವಿಮುಕ್ತನಾದನು ಮತ್ತು 'ಸರ್ವ ಸಂಪತ್ ಮಯವಿತ' ಎಲ್ಲಾ ಸುಖ ಸಂಪತ್ತುಗಳನ್ನು ಹೊಂದಿದನು. ವ್ರತದ ಪ್ರಭಾವವನ್ನು ಮನಗಂಡ ಆ ಬ್ರಾಹ್ಮಣನು ಆ ದಿನದಿಂದ ಪ್ರತೀ ತಿಂಗಳಲ್ಲೂ ಉಪಾಯದಿಂದ ಮಹತ್ಫಲವನ್ನು ಕೊಡುವ ಆ ಉತ್ತಮ ವ್ರತವನ್ನು ತಪ್ಪದೇ ಮಾಡತೊಡಗಿದನು. ಆತನ ಸಂಚಿತ ಪಾಪಗಳೆಲ್ಲವೂ ಸುಟ್ಟುಹೋದವು. ಕೊನೆಗೆ ಆತನು ದುರ್ಲಭವಾದ ಮೋಕ್ಷವನ್ನು ಹೊಂದಿದನು. ಹಾಗೆಂದು ಭಗವಂತನು ನಾರದರಿಗೆ ಹೇಳಿ, ನಾರದ ಭೂಲೋಕದ ಜನರ ದುಃಖದ ನಿವೃತ್ತಿಗೆ ಸುಖ ಪ್ರಾಪ್ತಿಗೆ ಈ ಸತ್ಯನಾರಾಯಣ ವ್ರತವೇ ಉತ್ತಮ ಉಪಾಯವೆಂದು ಹೇಳಿದನು.' ಎಂದು ಸೂತಪುರಾಣಿಕನು ನುಡಿದನು.
ಆಗ ಆ ಋಷಿಗಳು ಆ ಬ್ರಾಹ್ಮಣನ ಮುಖದಿಂದ ಈ ವ್ರತದ ಪ್ರಭಾವವನ್ನು ಮತ್ತು ಯಾರು ಕೇಳಿದು? ಈ ವ್ರತವು ಭೂಮಿಯ ಮೇಲೆ ಹೇಗೆ ಪ್ರಸಿದ್ದಿ ಹೊಂದಿತು ಎಂಬ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳಲು ನಮ್ಮಲ್ಲಿ ಭಕ್ತಿ ಉಂಟಾಗಿದೆ. ಅದಕ್ಕೆ ಎಲ್ಲಾ ಸಂಗತಿಗಳನ್ನು ವಿಸ್ತರಿಸಿ ಹೇಳಬೇಕೆಂದು ನುಡಿದರು. ಋಷಿಗಳ ಪ್ರಶ್ನೆಯನ್ನು ಕೇಳಿ ಸೂತಪುರಾಣಿಕನು 'ಋಷಿಗಳಿರಾ! ಈ ವ್ರತವನ್ನು ಭೂಮಿಯಲ್ಲಿ ಯಾರು ಮಾಡಿದ್ದಾರೆಂಬುದನ್ನು ಹೇಳುತ್ತೇನೆ ಕೇಳಿರಿ!'
ಮೊದಲು ದರಿದ್ರನಾಗಿದ್ದ ಬ್ರಾಹ್ಮಣನು ಒಂದು ದಿನ ತನ್ನ ಐಶ್ವರ್ಯಾನುಸಾರವಾಗಿ ಬಾಂಧವರಿಂದಲೂ ಆಪ್ತೇಷ್ಠರಿಂದಲೂ ಕೂಡಿಕೊಂಡು ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಮಾಡತೊಡಗಿದನು. ಒಬ್ಬ ಕಟ್ಟಿಗೆ ಹೊರೆಯನ್ನು ಮಾರುವವನು ಆ ಬ್ರಾಹ್ಮಣನ ಮನೆಯ ಬಾಗಿಲಿಗೆ ಬಂದನು. ತಲೆಯ ಮೇಲಿನ ಹೊರೆಯನ್ನು ಮನೆಯ ಹೊರಗೋಡೆಗೆ ನಿಲ್ಲಿಸಿದನು.
ನೀರಡಿಕೆಯಿಂದ ಪೀಡಿತನಾಗಿ ಆ ಬ್ರಾಹ್ಮಣನ ಮನೆಯ ಒಳಕ್ಕೆ ಹೋದನು. ಅಲ್ಲಿ ಆತನು ಮಾಡುತ್ತಿರುವ ಶ್ರೀ ಸತ್ಯನಾರಾಯಣ ವ್ರತವನ್ನು ನೋಡಿದನು. ಆಗ ಆತನಲ್ಲಿ ಭಕ್ತಿ ಅಂಕುರಿಸಿತು. ನಮಸ್ಕರಿಸಿದನು. ಪೂಜೆ ಮಾಡುತ್ತಿರುವ ಬ್ರಾಹ್ಮಣನನ್ನು ಕುರಿತು 'ಎಲೈ ಬ್ರಾಹ್ಮಣನೇ, ಕಿಮಿದಂ ಕ್ರಿಯೇ ತತ್ಪಯ, ನೀನು ಇದನ್ನೇನು ಮಾಡಲಾರಂಭಿಸಿರುವೆ? ಮತ್ತು ಇದನ್ನು ಮಾಡುವುದರಿಂದ ದೊರೆಯುವ ಫಲವನ್ನು ಇದನ್ನೆಲ್ಲಾ ನನ್ನ ಮುಂದೆ ಸವಿಸ್ತಾರವಾಗಿ ಹೇಳು' ಎಂದು ಬೇಡಿಕೊಂಡನು.
ಕಟ್ಟಿಗೆ ಹೊರೆಯನ್ನು ಹೊರುವವನಲ್ಲಿ ಪೂಜೆಯ ಬಗ್ಗೆ ಉಂಟಾದ ಉತ್ಸುಕತೆಯನ್ನು ಕಂಡು ಬ್ರಾಹ್ಮಣನು 'ಎಲೈ ಕಾಷ್ಠ ಕೊತನೇ! ಎಲ್ಲರ ಮನೋರಥಗಳನ್ನು ಪೂರ್ಣಮಾಡಿಕೊಡುವಂತಹ ಶ್ರೀ ಸತ್ಯನಾರಾಯಣ ವ್ರತಾನ್ನು ನಾನು ಹೇಳುತಲಿರುವೆ. ಮೊದಲು ಅಷ್ಟ ದರಿದ್ರನಾದ ನನಗೆ ಈ ವ್ರತದ ಪ್ರಭಾವದಿಂದ ಈಗ ಧನ ಧಾನ್ಯ ಮುಂತಾದ ಸಿರಿಗಳೆಲ್ಲವೂ ದೊರಕಿದೆ ಎಂದನು. ನಂತರ ಕಟ್ಟಿಗೆ ಹೊರೆ ಮಾರುವವನು ಆ ಬ್ರಾಹ್ಮಣನ ಮುಖದಿಂದ ಆ ವ್ರತದ ವಿಧಿ ವಿಧಾನಗಳನ್ನು ತಿಳಿದುಕೊಂಡನು. ಸಂತೋಷದಿಂದ ಶ್ರೀ ಸತ್ಯನಾರಾಯಣನ ಪ್ರಸಾದವನ್ನು ತಿಂದನು.
ನೀರು ಕುಡಿದನು. ಊಟ ಮಾಡಿ ತನ್ನ ಊರಿಗೆ ಹೊರಟು ಹೋದನು. ಅನಂತರ ಅವನು ಶುದ್ಧ ಮನಸ್ಸಿನಿಂದ ಶ್ರೀ ಸತ್ಯನಾರಾಯಣ ದೇವನನ್ನು ಸ್ಮರಿಸಿ 'ದೇವ ಸತ್ಯನಾರಾಯಣನೇ, ಈ ಊರಿನಲ್ಲಿ ಈ ಕಟ್ಟಿಗೆ ಹೊರೆಯನ್ನು ಮಾರಿಬಂದ ಹಣವನ್ನು ವೆಚ್ಚಮಾಡಿ ನಿನ್ನ ಸಂಬಂಧವಾದ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸುವೆನು.' ಎಂದು ಮನಮುಟ್ಟಿ ನಿರ್ಧರಿಸಿದನು.
ಅದೇ ನಿರ್ಧಾರಮನದಿಂದಲೇ ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು ಹೊರಟನು. ತನ್ನ ಗ್ರಾಮದೊಳಗಿನ ಸಿರಿವಂತರು ವಾಸಿಸುವ ಓಣಿಗೆ ಹೋದನು. ಅಲ್ಲಿ ತನ್ನ ಹೊರೆಯನ್ನು ಮಾರುತ್ತಿರಲು 'ಕಾಷ್ಠಾ ಮೂಲ್ಯಯಂ ಚ ದ್ವಿಗುಣಂ ಪ್ರಾಪ್ತವಾನಸಿ' ಅಂದು ಆತನಿಗೆ ದಿನಕ್ಕಿಂತ ಎರಡು ಪಟ್ಟು ಹೆಚ್ಚು ಹಣವು ಸಿಕ್ಕಿತು.
ಆದ್ದರಿಂದ ಆತನು ಶ್ರೀ ಸತ್ಯನಾರಾಯಣನ ಪ್ರಭಾವದಿಂದ ಸಂತುಷ್ಟನಾದನು. ಅಲ್ಲದೇ ಪ್ರಸಾದಕ್ಕೆ ಬೇಕಾಗುವ ಬಾಳೆಹಣ್ಣು, ತುಪ್ಪ, ಸಕ್ಕರೆ, ಹಾಲು ಮತ್ತು ಗೋಧಿಯ ಸಜ್ಜಿಗೆಯನ್ನು ಕೊಂಡು ಅವನ್ನೆಲ್ಲ 'ಸಪಾದ' ಸರಿಯಾದ ಪ್ರಮಾಣದಲ್ಲಿ ಕೂಡಿಸಿ ಪ್ರಸಾದವನ್ನು ಮಾಡಿದನು. ತನ್ನ ಬಂಧು ಬಾಂಧವ ಸಹಿತನಾಗಿ ಶ್ರೀ ಸತ್ಯನಾರಾಯಣ ದೇವರನ್ನು ಪೂಜಿಸಿ ನೈವೇದ್ಯವನ್ನು ಸಮರ್ಪಿಸಿದನು.
ಭಕ್ತಿಯಿಂದ ಕಥೆ ಕೀರ್ತನೆಗಳನ್ನು ಶ್ರವಣ ಮಾಡಿ ವ್ರತವನ್ನು ಮುಗಿಸಿದನು. 'ತದ್ ವ್ರತಸ್ಯ ಪ್ರಭಾವೇಣ ಧನ ಪುತ್ರಾನ್ವಿತೋ ಭವತ್ ಲೋಕೇ ಸುಖಂ ಭೂಕ್ತ ಚಾಂತೇ ಸತ್ಯ ಪೂರಂ ಯಂತಿತ್ವ' ಆ ವ್ರತದ ಪ್ರಭಾವದಿಂದ ಮಕ್ಕಳನ್ನೂ ಧನವನ್ನೂ ಪಡೆದನು. ಇಹಲೋಕದಲ್ಲಿ ಸುಖವನ್ನುಂಡು ಕೊನೆಗೆ ಸತ್ಯಪುರವನ್ನು (ಮೋಕ್ಷವನ್ನು) ಹೊಂದಿದನು. ಇಂತು ಶ್ರೀ ಸ್ಕಂದ ಪುರಾಣದ ರೇಖಾಖಂಡದಲ್ಲಿ ಹೇಳಲಾದ ಶ್ರೀ ಸತ್ಯನಾರಾಯಣನ ಕಥೆಯಲ್ಲಿ ಎರಡನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು ಎಂದು ಸೂತನು ಹೇಳಿದನು.
೩ನೇ ಅಧ್ಯಾಯ ಮುಂದುವರಿದ ಭಾಗದಿಂದ ನಿರೀಕ್ಷಿಸಿ
27 - 0
🚩🕉️ ఓం శ్రీ గురుభ్యో నమః 🕉️🚩
ప్రతిరోజూ ఈ 10 సాత్విక మంత్రాలను పఠిస్తే ఎన్ని ప్రయోజనాలు ఉంటాయో తెలుసా?
‘మంత్రం’ అంటే మనసును నియంత్రణలో ఉంచడం. అనవసరమైన మరియు అధికమైన ఆలోచనలు ఆందోళనకు కారణమవుతుంటే, మంత్రం ఒక ఉత్తమమైన ఔషధం. మనం ఆరాధించే, ప్రార్థించే లేదా ధ్యానం చేసే ఇష్టదైవం పేరును పఠించవచ్చు. మంత్రాలు మూడు రకాలుగా ఉంటాయి - సాత్విక, తాంత్రిక, మరియు శాబర. ప్రతి మంత్రానికి ప్రత్యేకమైన ప్రాముఖ్యత ఉంది. ప్రతి రోజూ పఠించే మంత్రాలను సాత్విక మంత్రాలుగా పరిగణిస్తారు. వాటిలో ఏదో ఒక మంత్రాన్ని ప్రతిరోజూ జపించడం మనస్సు శక్తిని పెంచటమే కాకుండా, అన్ని కష్టాల నుండి విముక్తిని కలిగిస్తుంది.
మొదటి మంత్రం
క్లేశనాశక మంత్రం:
కృష్ణాయ వాసుదేవాయ హరయే పరమాత్మనే |
ప్రణత క్లేశనాశాయ గోవిందాయ నమో నమః ||
ప్రభావం: ఈ మంత్రాన్ని నియమితంగా పఠించడం ద్వారా కష్టాలు తొలగిపోతాయి మరియు కుటుంబంలో ఆనందం స్థిరపడుతుంది.
రెండవ మంత్రం
శాంతి దాయక మంత్రం:
శ్రీరామ జయ రామ జయ జయ రామ
ప్రభావం: హనుమంతుడు కూడా ఈ రామనామాన్ని జపిస్తాడు. ఈ మంత్రం మనస్సుకు శాంతిని కలిగిస్తుంది, ఆందోళనలు తొలగిపోతాయి. ఇది నెగెటివ్ ఆలోచనలను తొలగించి భక్తిని పెంపొందిస్తుంది.
మూడవ మంత్రం
చింతా ముక్తి మంత్రం:
ఓం నమః శివాయ
ప్రభావం: ఈ మంత్రాన్ని నిరంతరం జపించడం ద్వారా మన జీవితం ఆందోళనల నుండి విముక్తి పొందుతుంది. శివలింగంపై నీటిని మరియు బిల్వపత్రాన్ని సమర్పిస్తూ ఈ మంత్రాన్ని జపించడం వల్ల శాంతి లభిస్తుంది.
నాల్గవ మంత్రం
సంకటమోచన మంత్రం:
ఓం హం హనుమతే నమః
ప్రభావం: ఈ మంత్రం ఆత్మవిశ్వాసాన్ని పెంచుతుంది. భయం, నిరాశలను తొలగించేందుకు మరియు విజయాలను సాధించేందుకు ఇది ఎంతో సహాయపడుతుంది.
ఐదవ మంత్రం
శాంతి, ఆనందం, సంపద కోసం విష్ణు మంత్రం:
ఓం నమో నారాయణ
శ్రీమన్ నారాయణ నారాయణ హరి హరి
ప్రభావం: ఈ మంత్రం జీవితంలో పాజిటివ్ ఆలోచనలను తీసుకువస్తుంది. విష్ణువు మరియు లక్ష్మిని పూజించడం ద్వారా ఆనందం మరియు సమృద్ధి లభిస్తుంది.
ఆరవ మంత్రం
మహామృత్యుంజయ మంత్రం:
ఓం త్ర్యంబకం యజామహే సుగంధిం పుష్టివర్ధనం |
ఉర్వారుకమివ బంధనాత్ మృత్యోర్ముక్షీయ మామృతాత్ ||
ప్రభావం: ఈ మంత్రం ప్రాణాలను రక్షించేందుకు, అనారోగ్య సమస్యలను తొలగించేందుకు సహాయపడుతుంది.
ఏడవ మంత్రం
గాయత్రి మంత్రం:
ఓం భూభువః స్వః తత్సవితుర్వరేణ్యం భర్గో దేవస్య ధీమహి |
ధియో యో నః ప్రచోదయాత్ ||
ప్రభావం: ఇది ప్రపంచంలో అత్యద్భుతమైన మంత్రం. అన్ని సమస్యలకు పరిష్కారం అందించే మహామంత్రం.
ఎనిమిదవ మంత్రం
సంపద కలిగించే మంత్రం:
ఓం గం గణపతయే నమః
ప్రభావం: గణపతిని ప్రార్థించడం ద్వారా జీవితం పాజిటివ్ మార్గంలో కొనసాగుతుంది. ప్రతిరోజూ కనీసం 108 సార్లు ఈ మంత్రాన్ని పఠించడం ద్వారా విజయాలు లభిస్తాయి.
తొమ్మిదవ మంత్రం
అనూహ్య సమస్యలను తొలగించే కాళికా మంత్రం:
ఓం కాళికాయై నమః
ఓం హ్రీం శ్రీం క్రీం పరమేశ్వరి కాళికాయై స్వాహా
ప్రభావం: ఈ మంత్రం ఆర్థిక సమస్యలను పరిష్కరించే శక్తి కలిగిస్తుంది. కాళికామాత కృపతో విజయాలు సాధించవచ్చు.
పదవ మంత్రం
దారిద్ర్య నివారక మంత్రం:
ఓం హ్రీం హ్రీం శ్రీ లక్ష్మీ వాసుదేవాయ నమః
ప్రభావం: ఈ మంత్రాన్ని ప్రామాణికంగా పఠించడం ద్వారా ధనసమృద్ధి మరియు శాంతి లభిస్తుంది.
విశేష సూచన: ఈ మంత్రాలను గురువుల ద్వారా ఉపదేశం పొంది, నియమబద్ధంగా పఠిస్తే శ్రేయస్కరమైన ఫలాలు పొందవచ్చు.
29 - 0
🚩🕉️ ಓಂ ಶ್ರೀ ಗುರುಭ್ಯೋ ನಮಃ 🕉️🚩
*ಪ್ರತಿನಿತ್ಯ ಈ 10 ಸಾತ್ವಿಕ ಮಂತ್ರಗಳನ್ನು ಪಠಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ..?*
'ಮಂತ್ರ' ಎಂದರೆ ಮನಸ್ಸನ್ನು ತಂತ್ರದಲ್ಲಿ ಬಂಧಿಸುವುದು. ಅನಾವಶ್ಯಕ ಮತ್ತು ಅತಿಯಾದ ಆಲೋಚನೆಗಳು ಹುಟ್ಟಿಕೊಂಡು ಆತಂಕವನ್ನು ಉಂಟುಮಾಡುತ್ತಿದ್ದರೆ, ಮಂತ್ರವು ಅತ್ಯಂತ ಪರಿಣಾಮಕಾರಿ ಔಷಧವಾಗಿದೆ. ನಾವು ಪೂಜಿಸುವ, ಪ್ರಾರ್ಥಿಸುವ ಅಥವಾ ಧ್ಯಾನಿಸುವ ಇಷ್ಟದ ಹೆಸರನ್ನು ನಾವು ಪಠಿಸಬಹುದು. ಮಂತ್ರಗಳಲ್ಲಿ 3 ವಿಧಗಳಿವೆ - ಸಾತ್ವಿಕ, ತಾಂತ್ರಿಕ ಮತ್ತು ಶಾಬರ. ಪ್ರತಿಯೊಂದು ಮಂತ್ರಕ್ಕೂ ತನ್ನದೇ ಆದ ಮಹತ್ವವಿದೆ. ಪ್ರತಿದಿನ ಪಠಿಸುವ ಮಂತ್ರಗಳನ್ನು ಸಾತ್ವಿಕ ಮಂತ್ರಗಳೆಂದು ಪರಿಗಣಿಸಲಾಗುತ್ತದೆ. ಅವುಗಳಲ್ಲಿ ಒಂದನ್ನು ಪ್ರತಿನಿತ್ಯ ಜಪಿಸಬೇಕು, ಇದು ಮನಸ್ಸಿನ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ನೀಡುತ್ತದೆ.
"ಮೊದಲನೇ ಮಂತ್ರ"
ಕ್ಲೇಶನಾಶ ಮಂತ್ರ:
*ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ* |
*ಪ್ರಣತ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ'* ||
ಮಂತ್ರದ ಪರಿಣಾಮ: ಈ ಮಂತ್ರವನ್ನು ನಿಯಮಿತವಾಗಿ ಪಠಿಸುವ ಮೂಲಕ, ಅಪಶ್ರುತಿ ಮತ್ತು ಕ್ಲೇಶಗಳು ಕೊನೆಗೊಳ್ಳುತ್ತದೆ ಮತ್ತು ಕುಟುಂಬದಲ್ಲಿ ಸಂತೋಷವು ಮರಳುತ್ತದೆ.
"ಎರಡನೇ ಮಂತ್ರ"
ಶಾಂತಿದಾಯಕ ಮಂತ್ರ: *ಶ್ರೀರಾಮ ಜಯ ರಾಮ ಜಯ ಜಯ ರಾಮ*
ಮಂತ್ರದ ಪರಿಣಾಮ: ಹನುಮಂತನು ಕೂಡ ರಾಮ ನಾಮವನ್ನು ಜಪಿಸುತ್ತಲೇ ಇರುತ್ತಾನೆ. ಶ್ರೀರಾಮನ ಹೆಸರು ಶ್ರೇಷ್ಠ ಎಂದು ಹೇಳಲಾಗುತ್ತದೆ. ನಿರಂತರವಾಗಿ ಈ ಮಂತ್ರವನ್ನು ಜಪಿಸುವುದರಿಂದ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ, ಚಿಂತೆಗಳು ದೂರವಾಗಿ ಮನಸ್ಸು ಶಾಂತವಾಗಿರುತ್ತದೆ. ರಾಮ ನಾಮವನ್ನು ಪಠಿಸುವುದನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದು ಎಲ್ಲಾ ರೀತಿಯ ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕುತ್ತದೆ ಮತ್ತು ಹೃದಯವನ್ನು ಶುದ್ಧಗೊಳಿಸುವ ಮೂಲಕ ಭಕ್ತಿಯನ್ನು ಹೆಚ್ಚಿಸುತ್ತದೆ.
"ಮೂರನೇ ಮಂತ್ರ"
ಚಿಂತಾ ಮುಕ್ತಿ ಮಂತ್ರ: *''ಓಂ ನಮಃ ಶಿವಾಯ''*
ಮಂತ್ರದ ಪರಿಣಾಮ: ಈ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಚಿಂತೆಯಿಲ್ಲದ ಜೀವನ ಸಿಗುತ್ತದೆ. ಈ ಮಂತ್ರವು ಜೀವನದಲ್ಲಿ ಶಾಂತಿ ಮತ್ತು ತಂಪು ನೀಡುತ್ತದೆ. ಶಿವಲಿಂಗದ ಮೇಲೆ ನೀರು ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವಾಗ, ಈ ಶಿವ ಮಂತ್ರವನ್ನು ಜಪಿಸಿ ಮತ್ತು ರುದ್ರಾಕ್ಷ ಮಾಲೆಯೊಂದಿಗೆ ಜಪಿಸಿ. ಮೂರು ಪದಗಳ ಈ ಮಂತ್ರವೇ ಮಹಾಮಂತ್ರ.
"ನಾಲ್ಕನೇ ಮಂತ್ರ"
ಸಂಕಟಮೋಚನ ಮಂತ್ರ: '' *ಓಂ ಹಂ ಹನುಮತೇ ನಮಃ*''
ಮಂತ್ರದ ಪರಿಣಾಮ: ಹೃದಯದಲ್ಲಿ ಯಾವುದೇ ರೀತಿಯ ಆತಂಕ, ಭಯ ಅಥವಾ ನಿರಾಸೆಯಿದ್ದರೆ ಈ ಮಂತ್ರವನ್ನು ಪ್ರತಿದಿನ ನಿರಂತರವಾಗಿ ಜಪಿಸಿ ನಂತರ ವಿಶ್ರಾಂತಿ ಪಡೆಯಿರಿ. ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಮತ್ತು ಜಯಗಳಿಸಲು, ಅದನ್ನು ನಿರಂತರವಾಗಿ ಜಪಿಸಬೇಕು. ಈ ಮಂತ್ರವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹನುಮಂಜಿಗೆ ಸಿಂಧೂರ, ಬೆಲ್ಲ ಮತ್ತು ಕಾಳುಗಳನ್ನು ಅರ್ಪಿಸುವ ಮೂಲಕ, ಈ ಮಂತ್ರವನ್ನು ನಿಯಮಿತವಾಗಿತಂತ್ರವನ್ನು ಪಠಿಸುವುದು ಯಶಸ್ಸು ಮತ್ತು ಖ್ಯಾತಿಯನ್ನು ನೀಡುತ್ತದೆ ಎಂದು ಪರಿಗಣಿಸಲಾಗುತ್ತದೆ. ಸಾವಿನಂತಹ ಸಂಕಟವಿದ್ದರೆ ತಕ್ಷಣ ಈ ಮಂತ್ರವನ್ನು ಜಪಿಸಬೇಕು.
"ಐದನೇ ಮಂತ್ರ"
ಶಾಂತಿ, ಸಂತೋಷ ಮತ್ತು ಸಮೃದ್ಧಿಗಾಗಿ ವಿಷ್ಣು ಮಂತ್ರ:
'' *ಓಂ ನಮೋ ನಾರಾಯಣ* " *ಶ್ರೀಮನ್ ನಾರಾಯಣ ನಾರಾಯಣ ಹರಿ - ಹರಿ*
'' *ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣುಃ ಪ್ರಚೋದಯಾತ್* ''
ಮಂತ್ರದ ಪರಿಣಾಮ: ಭಗವಾನ್ ವಿಷ್ಣುವನ್ನು ಜಗತ್ಪಾಲಕ ಎಂದು ಪರಿಗಣಿಸಲಾಗಿದೆ. ಅವರು ನಮ್ಮೆಲ್ಲರ ಪೋಷಕರಾಗಿದ್ದಾರೆ, ಆದ್ದರಿಂದ ಹಳದಿ ಹೂವುಗಳು ಮತ್ತು ಹಳದಿ ಬಟ್ಟೆಗಳನ್ನು ಅರ್ಪಿಸಿ ಮತ್ತು ಮೇಲಿನ ಮಂತ್ರದಿಂದ ಅವರನ್ನು ಸ್ಮರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕ ಆಲೋಚನೆಗಳು ಮತ್ತು ಘಟನೆಗಳು ಸಂಭವಿಸಿ ಜೀವನವು ಸಂತೋಷದಿಂದಿರುವುದು. ವಿಷ್ಣು ಮತ್ತು ಲಕ್ಷ್ಮಿಯ ಆರಾಧನೆ ಮತ್ತು ಪ್ರಾರ್ಥನೆಯಿಂದ, ಸಂತೋಷ ಮತ್ತು ಸಮೃದ್ಧಿಯು ಅಭಿವೃದ್ಧಿಗೊಳ್ಳುತ್ತದೆ.
"ಆರನೇ ಮಂತ್ರ"
ಮೃತ್ಯುವಿನ ವಿರುದ್ಧದ ವಿಜಯಕ್ಕಾಗಿ ಮಹಾಮೃತ್ಯುಂಜಯ ಮಂತ್ರ:
'' *ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯಮಾಮೃತಾತ್* "
ಮಂತ್ರದ ಪರಿಣಾಮ: ಶಿವನ ಮಹಾಮೃತ್ಯುಜಯ ಮಂತ್ರವು ಸಾವು ಮತ್ತು ಸಮಯವನ್ನು ತಡೆಯುತ್ತದೆ ಎಂದು ಪರಿಗಣಿಸಲಾಗಿದೆ, ಆದ್ದರಿಂದ ಶಿವಲಿಂಗದ ಮೇಲೆ ನೀರು, ಧಾತುರಾ ಬೆರೆಸಿದ ಹಾಲಿನಿಂದ ನೈವೇದ್ಯ ಮಾಡುವ ಮೂಲಕ ಪ್ರತಿದಿನ ಈ ಮಂತ್ರವನ್ನು ಜಪಿಸುವುದರಿಂದ ತೊಂದರೆಗಳು ದೂರಾಗುವುದು. ನಿಮ್ಮ ಮನೆಯ ಯಾವುದೇ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದರೆ ಅಥವಾ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಮಂತ್ರದ ಸಹಾಯವನ್ನು ನಿಯಮಿತವಾಗಿ ತೆಗೆದುಕೊಳ್ಳಿ. ಈ ಮಂತ್ರವನ್ನು ಜಪಿಸುವಾಗ ಶುದ್ಧರಾಗಿ ಉಳಿಯುವುದು ಅವಶ್ಯಕ, ಇಲ್ಲದಿದ್ದರೆ ಮಂತ್ರದ ಪ್ರಭಾವವನ್ನು ಪಡೆಯಲು ಸಾಧ್ಯವಿಲ್ಲ.
"ಏಳನೇ ಮಂತ್ರ"
ಸಿದ್ಧಿ ಮತ್ತು ಮೋಕ್ಷ ಗಾಯತ್ರಿ ಮಂತ್ರ:
'' *ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್* ''
ಮಂತ್ರದ ಪರಿಣಾಮ: ಇದು ಪ್ರಪಂಚದ ಏಕೈಕ ಅದ್ಭುತ ಮಂತ್ರವಾಗಿದೆ. ಈ ಮಂತ್ರವನ್ನು ಎಲ್ಲಾ ಹಿಂದೂ ಧರ್ಮಗ್ರಂಥಗಳಲ್ಲಿ ಮೊದಲ ಮತ್ತು 'ಮಹಾಮಂತ್ರ' ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಸಮಸ್ಯೆಗೂ ಈ ಒಂದು ಮಂತ್ರ ಮಾತ್ರ ಪರಿಣಾಮಕಾರಿ. ಈ ಮಂತ್ರವನ್ನು ಪಠಿಸುವವರು ಶುದ್ಧರಾಗಿ ಉಳಿಯುವುದು ಅವಶ್ಯಕ, ಇಲ್ಲದಿದ್ದರೆ ಈ ಮಂತ್ರವು ಅದರ ಪರಿಣಾಮವನ್ನು ನೀಡುವುದಿಲ್ಲ.
"ಎಂಟನೇ ಮಂತ್ರ"
ಸಮೃದ್ಧಿದಾಯಕ ಮಂತ್ರ: '' *ಓಂ ಗಂ ಗಣಪತಯೇ ನಮಃ*''
ಮಂತ್ರದ ಪರಿಣಾಮ: ಭಗವಾನ್ ಗಣೇಶನನ್ನು ಸಂಕಟ ನಿವಾರಕ ಎಂದು ಪರಿಗಣಿಸಲಾಗಿದೆ. ಎಲ್ಲಾ ಶುಭ ಕಾರ್ಯಗಳ ಆರಂಭದಲ್ಲಿ ಶ್ರೀ ಗಣೇಶಾಯ ನಮಃ ಮಂತ್ರವನ್ನು ಪಠಿಸಲಾಗುತ್ತದೆ. ದುರ್ವಾ ಮತ್ತು ಒಂದು ಚಿಟಿಕೆ ಸಿಂಧೂರ ಮತ್ತು ತುಪ್ಪವನ್ನು ಗಣೇಶನಿಗೆ ಅರ್ಪಿಸಿ ಮೇಲಿನ ಎರಡೂ ಮಂತ್ರಗಳನ್ನು ಕನಿಷ್ಠ 108 ಬಾರಿ ಜಪಿಸಿ. ಇದರಿಂದಾಗಿ ಜೀವನದಲ್ಲಿ ಎಲ್ಲಾ ರೀತಿಯ ಶುಭ ಮತ್ತು ಲಾಭಗಳು ಪ್ರಾರಂಭವಾಗುತ್ತವೆ.
"ಒಂಭತ್ತನೇ ಮಂತ್ರ"
ಹಠಾತ್ ಬಿಕ್ಕಟ್ಟನ್ನು ತೊಡೆದುಹಾಕಲು: ಇದು ಕಾಳಿಕಾ ಮಂತ್ರವಾಗಿದೆ. ತಾಯಿ ಅದನ್ನು ತ್ವರಿತವಾಗಿ ಕೇಳುತ್ತಾಳೆ. ಆದರೆ ಈ ಮಂತ್ರವನ್ನು ಪಠಿಸುವಾಗ ನೀವು ಜಾಗರೂಕರಾಗಿರಬೇಕು. ಇತರರಿಗೆ ತೊಂದರೆಯನ್ನು ನೀಡಲು ಈ ಮಂತ್ರವನ್ನು ಪಠಿಸಲು ಹೋಗಬೇಡಿ.
'' *ಓಂ ಕಾಳಿಕಾಯೈ ನಮಃ* ''
'' *ಓಂ ಹ್ರೀಂ ಶ್ರೀಂ ಕ್ರೀಂ ಪರಮೇಶ್ವರಿ ಕಾಳಿಕಾಯೈ ಸ್ವಾಹಾ*''
ಮಂತ್ರದ ಪರಿಣಾಮ: ಈ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸುವುದರಿಂದ ಆರ್ಥಿಕ ಲಾಭವನ್ನು ಪಡೆಯುವಿರಿ. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಾತೆ ಕಾಳಿಯ ಕೃಪೆಯಿಂದ ಎಲ್ಲವೂ ಸಾಧ್ಯ. 15 ದಿನಗಳಿಗೊಮ್ಮೆ, ಯಾವುದೇ ಮಂಗಳವಾರ ಅಥವಾ ಶುಕ್ರವಾರ, ಕಾಳಿ ಮಾತೆಗೆ ಸಿಹಿ ಪಾನ್ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
"ಹತ್ತನೇ ಮಂತ್ರ"
ದಾರಿದ್ರ್ಯ ನಿವಾರಣಾ ಮಂತ್ರ: '' *ಓಂ ಹ್ರೀಂ ಹ್ರೀಂ ಶ್ರೀ ಲಕ್ಷ್ಮೀ ವಾಸುದೇವಾಯ ನಮಃ*''
ಮಂತ್ರದ ಪರಿಣಾಮ: ಈ ಮಂತ್ರವನ್ನು ಶುದ್ಧ ಚೈತನ್ಯದಿಂದ ಬೆಳಿಗ್ಗೆ ದೀಪವನ್ನು ಬೆಳಗಿಸಿ ಮತ್ತು ಧೂಪವನ್ನು ನೀಡಿ ಜಪಮಾಲೆಯನ್ನು ಹಿಡಿದು ಸಂಪೂರ್ಣ ಒಂದು ಜಪಮಾಲೆಯನ್ನು 11 ಬಾರಿ ಪಠಿಸಬೇಕು. ಇದರಿಂದ ಸಂಪತ್ತು, ಸಂತೋಷ, ಶಾಂತಿ ಸಿಗುತ್ತದೆ. ವಿಶೇಷವಾಗಿ ಹಣದ ಕೊರತೆಯನ್ನು ಹೋಗಲಾಡಿಸಲು ಈ ಮಂತ್ರವನ್ನು ಜಪಿಸಬೇಕು.
ವಿಶೇಷ ಸೂಚನೆ : ಈ ಮಂತ್ರಗಳನ್ನು ಗುರುಮುಖೇನ ಉಪದೇಶ ಪಡೆದು, ನಿಯಮ ಬದ್ಧವಾಗಿ ಪ್ರತಿನಿತ್ಯವೂ ಜಪಿಸಿದರೆ ಉತ್ತಮ ಫಲ ಪಡೆಯಬಹುದು.
17 - 0
Marriage of saumya and Anand .
house warming of bride in bride groom home
#marriagevideo #marriagegoals #marriagevideo #saumyaanand #shorts #ytshortsindia #memorable #love #youtubeshorts #short #shortvideos #youtuber
#Indianmarriages #forever #India #bride #marriagesaremadeinheaven #heaven #shortsfeed #cutecouple #marriagepics #wedding #weddinglunch
#weddingtimes❤️
Insta handle
www.instagram.com/reel/Cnm3l0IIr2J/?igshid=MDJmNzV…