ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ನಾವೆಲ್ಲರೂ ಕೇಳಿಯೇ ಇರುತ್ತೇವೆ. ಆದರೆ ಇದನ್ನು ಆಚರಣೆ ತರುವುದು ಅಷ್ಟೇ ಕಷ್ಟ. ಇಂದು ಮನುಷ್ಯ ಬಾಹ್ಯವಾಗಿ ಎಲ್ಲಾ ಸಾಧನೆ ಮಾಡಿದಂತೆ ಅರೋಗ್ಯದ ಕಡೆಯೂ ಗಮನ ಕೊಡುವುದು ಅವಶ್ಯವಾಗಿದೆ. ಆಧುನಿಕ ಜೀವನದಲ್ಲಿ ಬದುಕಿನ ತೀವ್ರಗತಿಯ ಓಟಕ್ಕೆ ಬೆಲೆಕೊಟ್ಟ ಮನುಷ್ಯ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಅದಕ್ಕೆ ಒಂದು ಮಾತಿದೆ ಆರೋಗ್ಯವನ್ನು ಪ್ರೀತಿಸುವವನು ಎಲ್ಲವನ್ನು ಪ್ರೀತಿಸುತ್ತಾನೆ. ಮನುಷ್ಯ ಇಂದು ತನಗೆ ಬೇಕಾಗಿರುವದನ್ನು ತನ್ನ ಬುದ್ದಿಯಿಂದ ಪಡೆದುಕೊಳ್ಳಬಹುದು, ಆದರೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆತನ ಶ್ರಮವೆಲ್ಲ ವ್ಯರ್ಥ. ಮನುಷ್ಯನ ಅರೋಗ್ಯ ಆತನು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಆಹಾರದಿಂದ ಶರೀರದಲ್ಲಿ ಶಕ್ತಿ ಉತ್ಸಾಹ ಬೆಳವಣಿಗೆ ಆಗುತ್ತದೆ. ಅದಕ್ಕೆ ಆರೋಗ್ಯವೇ ನಿಜವಾದ ಸಂಪತ್ತು. ಈ ಸಂಪತ್ತನ್ನು ರಕ್ಷಿಸಿಕೊಳ್ಳುಲು ಮನುಷ್ಯ ಸಮಯಕ್ಕೆ ತಕ್ಕ ಹಾಗೆ ಸರಿಯಾದ ಆಹಾರವನ್ನು ಸೇವಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಇರುವ ಕಾಳಜಿಗೋಸ್ಕರ ಈ ಉತ್ತರ ಕರ್ನಾಟಕ ಅಡುಗೆಮನೆ ಜನನವಾಗಿದ್ದು. ಇದಕ್ಕೆ ನಿಮ್ಮ ಪ್ರೋತ್ಸಾಹ ಬೆಂಬಲ ಇರುತ್ತದೆ ಎಂದು ನಂಬಿರುತ್ತೇನೆ.
ತ್ರಿವೇಣಿ ಪಾಟೀಲ್