"ನೇರ ಹೊಡೆತ"
ಎಂಬ ಶೀರ್ಷಿಕೆ ಹೊತ್ತಿರುವ ಈ ಚಾನಲ್ "ಜನ-ಮನದ ಒಳಧ್ವನಿ" ಎಂಬ ಅಡಿಬರಹದಡಿ ಸಮಾಜಮುಖಿ ಕೆಲಸಗಳಿಗೆ ಉತ್ತೇಜನ ಕೊಡುತ್ತದೆ. ಜತೆಗೆ ಜಗತ್ತಿನ ನಿತ್ಯದ ವಿದ್ಯಮಾನಗಳ ಮಾಹಿತಿ ನೀಡುತ್ತದೆ. ಬಿಡೆ ಇಲ್ಲದೆ ವಿಷಯ, ವಸ್ತುಗಳ ವಿಶ್ಲೇಷಣೆ ಮಾಡುತ್ತದೆ. ಇತಿಹಾಸದ ಕಡೆಗೂ ಇಣುಕುತ್ತದೆ. ತಜ್ಞರಿಂದ ಬರಹ ತರಿಸಿ ಬಿತ್ತರಿಸುತ್ತದೆ. ಶಿಷ್ಟಾಚಾರದ ಪರಿಧಿಗೊಳಪಟ್ಟು ಮುಕ್ತ ಚರ್ಚೆಗೂ ಇದು ವೇದಿಕೆಯಾಗಿದೆ. ಇದರ ಮೂಸೆಯಲ್ಲಿ ಸತ್ಯದ ಪ್ರತಿಫಲನವಾಗುತ್ತದೆ. ಜನಸಾಮಾನ್ಯರ ಜೀವನ ನೋಟ ಇಲ್ಲಿ ಕಾಣಿಸುತ್ತದೆ. ಸರಕಾರ, ಆಡಳಿತ ಮತ್ತು ರಾಜಕೀಯದ ಮೇಲೆ ಪಕ್ಷಿನೋಟ ಬೀರುತ್ತದೆ. ಜನಾಭಿಪ್ರಾಯ ಹಾಗೂ ಅವರ ಸಂವೇದನೆ ಇದರ ಜೀವಾಳವಾಗಿದೆ.
ಆಯಾ ಸಂದರ್ಭ ಮತ್ತು ಸನ್ನಿವೇಶಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಡಲು ಅಗತ್ಯ ಮಾಹಿತಿ, ವಿವರ ಹೊಂದಿರುವ ಬರಹ, ಫೋಟೋ, ಆಡಿಯೋ, ವೀಡಿಯೊ ಹಾಗೂ ದಾಖಲೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.