ಶರಣ ಪದಕ್ಕೆ ಬಹು ವಿಶೇಷ ಅರ್ಥವಿದೆ. 'ಶರ’ ಎಂದರೆ ಬಾಣ, ‘ಣ’ ಎಂದರೆ ತಾಕಲಾಗದವನು. ಶರಣ ಎಂದರೆ ಬಾಣಗಳಿಂದ ತಾಕಲಾರದವನು, ಅವು ಅರಿಷಡ್ವರ್ಗಗಳೆಂಬ ಬಾಣಗಳು. ಕಾಮ, ಕ್ರೋದ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳು ಯಾರಿಗೆ ತಾಕುವುದಿಲ್ಲವೋ ಅವನೇ ಶರಣ.
ಭವಕ್ಕೆ ಶರಣು ಹೋಗದೆ ಶಿವನಿಗೆ (ಪರಮಾತ್ಮನಿಗೆ, ದೇವರಿಗೆ) ಶರಣು ಹೋದವರೇ ಶರಣರು. ಕೇವಲ ಲೌಕಿಕ ವಸ್ತು, ವಿಚಾರ, ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದೆ ಸೃಷ್ಟಿಕರ್ತನನ್ನು ನಂಬಿ ಬದುಕುವವರು ಶರಣರು.
ಸೃಷ್ಟಿಯ ರಹಸ್ಯ ತಿಳಿದವರು, ತಿಳಿಯಲು ಪ್ರಯತ್ನಿಸುವವರು ಶಿವ ಶರಣರು.
ಶರಣ ಧರ್ಮ/ಸಾಹಿತ್ಯ ಮಾನವಕುಲದ ಮಹತ್ತನ್ನು ತಿಳಿಸಿ ಬದುಕಿದ ಸಾರ್ಥಕತೆಯನ್ನು ಮನವರಿಕೆ ಮಾಡಿಕೊಡುವುದಾಗಿದೆ.
ಕೆಲವು ಶರಣರ ಗ್ರಂಥಗಳಿಂದ ಆಯ್ಕೆಯಾದ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
- ವಚನಶ್ರೀ